HomePage_Banner
HomePage_Banner
HomePage_Banner

ಗಡಿಯಲ್ಲಿ ಮತ್ತೆ ಗಡಿಬಿಡಿ: ಈಶ್ವರಮಂಗಲ-ದೇಲಂಪಾಡಿ ರಸ್ತೆ ಬಂದ್ ಮಾಡಿದ ಪೊಲೀಸರು…!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ್ವರಮಂಗಲದಿಂದ ಕೇರಳ ರಾಜ್ಯದ ದೇಲಂಪಾಡಿ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲೊಂದಾಗಿರುವ ಮೇನಾಲ ಸಮೀಪದ ಮೆಣಸಿನಕಾನ ಎಂಬಲ್ಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ನಿಷೇಧ ಹೇರಿದ್ದಾರೆ.


ಕೊರೋನಾ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಸದ್ರಿ ಸ್ಥಳದಲ್ಲಿ ಮಣ್ಣು ಹಾಕಿ ಸಂಚಾರಕ್ಕೆ ನಿಷೇಧ ಹೇರಳಾಗಿತ್ತು. ಕ್ರಮೇಣ ಮಣ್ಣು ಮಾಯವಾಗಿ ಸಂಚಾರ ಪುನರಾರಂಭಗೊಂಡಿತ್ತು. ಇದೀಗ ಮತ್ತೆ ಸಂಪ್ಯ ಪೊಲೀಸರು ಮಾರ್ಗ ಮಧ್ಯೆ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

ಯಾಕಾಗಿ ಸಂಚಾರ ನಿಷೇಧ:
ತಿಂಗಳ ಹಿಂದೆ ಮೆಣಸಿನಕಾನ-ದೇಲಂಪಾಡಿ ರಸ್ತೆಯಲ್ಲಿ ಸಂಚಾರ ಆರಂಭವಾಗಿತ್ತು. ಅತ್ತ ಕೇರಳದವರು ತಮ್ಮ ಅಗತ್ಯತೆಗಳಿಗಾಗಿ ಈಶ್ವರಮಂಗಲ, ಪುತ್ತೂರು ಕಡೆಗೆ ಮತ್ತು ಈ ಭಾಗದ ಜನರು ತಮ್ಮ ಅವಶ್ಯಕತೆಗಳಿಗನುಸಾರವಾಗಿ ದೇಲಂಪಾಡಿ ಕಡೆಗೆ ಹೋಗುತ್ತಿದ್ದುದು ಸಹಜವಾಗಿತ್ತು. ಇದೀಗ ಕೇರಳಕ್ಕಿಂತ ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗಿದೆ ಎಂದು ತಗಾದೆ ತೆಗೆದಿರುವ ಕೇರಳಿಗರು ಈಶ್ವರಮಂಗಲ ಕಡೆಯಿಂದ ದೇಲಂಪಾಡಿ ಕಡೆಗೆ ಹೋದ ಜನರನ್ನು ಪ್ರಶ್ನಿಸಲು ಪ್ರಾರಂಭಿಸಿದ್ದು ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗಿದೆ ಹಾಗಾಗಿ ನೀವು ಕೇರಳಕ್ಕೆ ಬರಬಾರದು ಎಂದು ತರಾಟೆಗೆತ್ತಿಕೊಂಡಿರುವ ಪ್ರಕರಣಗಳು ನಡೆದಿದೆ ಎನ್ನಲಾಗಿದೆ. ಸಮಸ್ಯೆ ಪ್ರಾರಂಭವಾಗುತ್ತಿದ್ದಂತೆ ಎಚ್ಚೆತ್ತ ಸಂಪ್ಯ ಪೊಲೀಸರು ಎಸ್.ಐ ಉದಯರವಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು ದೇಲಂಪಾಡಿ ಕಡೆಯಿಂದ ಈಶ್ವರಮಂಗಲ ಕಡೆಗೆ ಹಾಗೂ ಈಶ್ವರಮಂಗಲದಿಂದ ದೇಲಂಪಾಡಿ ಕಡೆಗೆ ಸಂಚಾರಕ್ಕೆ ನಿಷೇಧ ಹೇರಿ ವಿವಾದ ಮತ್ತು ಸಂಭಾವ್ಯ ಗೊಂದಲವನ್ನು ತಪ್ಪಿಸಿದ್ದಾರೆ. ಈಶ್ವರಮಂಗಲ ಹೊರಠಾಣೆಯ ಎಎಸ್ಸೈ ನಾರಾಯಣ ಗೌಡ, ಪೊಲೀಸ್ ಸಿಬ್ಬಂದಿಗಳಾದ ಬಸವರಾಜ್ ಹಾಗೂ ಇನ್ನಿತರರು ಬ್ಯಾರಿಕೇಡ್ ಅಳವಡಿಸುವ ಸ್ಥಳದಲ್ಲಿದ್ದರು.

ಸಮಸ್ಯೆಯಲ್ಲಿ ಉಭಯ ರಾಜ್ಯಗಳ ಜನತೆ:
ದೇಲಂಪಾಡಿ ಗ್ರಾಮ ಕೇರಳಕ್ಕೆ ಸೇರಿದೆಯಾದರೂ ಅಲ್ಲಿನ ಬಹುತೇಕರ ವ್ಯವಹಾರಗಳಿರುವುದು ಈಶ್ವರಮಂಗಲ್ಲಿ. ಹಾಗಾಗಿ ಈ ಭಾಗಕ್ಕೆ ಅನಿವಾರ್ಯವಾಗಿ ಬರುತ್ತಿದ್ದಾರೆ, ಅದೇ ರೀತಿ ಈಶ್ವರಮಂಗಲ ಪ್ರದೇಶದವರಿಗೂ ದೇಲಂಪಾಡಿ ಕಡೆಗೆ ವಿವಿಧ ಕಾರ್ಯಗಳಿಗೆ ಅನಿವಾರ್ಯವಾಗಿ ಹೋಗುತ್ತಿದ್ದಾರೆ. ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ನಮಗೆ ಸಮಸ್ಯೆಯಾಗಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಉಭಯ ರಾಜ್ಯದ ಅನೇಕರು ಆಗ್ರಹಿಸಿದ್ದಾರೆ. ಇದೀಗ ಸಮಸ್ಯೆ ಶುರುವಾದ ಹಿನ್ನೆಲೆಯಲ್ಲಿ ಪೊಲೀಸರು ಮೆಣಸಿನಕಾನದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

ಮೆಣಸಿನಕಾನ ಮೂಲಕ ಕೇರಳದ ಜನರು ಈ ಭಾಗಕ್ಕೆ ಮತ್ತು ಇಲ್ಲಿನ ಜನರು ದೇಲಂಪಾಡಿ ಭಾಗಕ್ಕೆ ವಿವಿಧ ಕಾರ್ಯಗಳಿಗೆ ತೆರಳುತ್ತಿದ್ದರು. ಇದೀಗ ಕೇರಳದ ಜನತೆ ಇಲ್ಲಿನವರನ್ನು ಪ್ರಶ್ನೆ ಮಾಡಿರುವ ಬಗ್ಗೆ ದೂರುಗಳು ಬಂದಿವೆ. ಈ ಕಡೆಯವರು ಆ ಕಡೆ ಹೋಗುವುದು, ಅತ್ತ ಕಡೆಯವರು ಈ ಕಡೆ ಬರುವುದು ಆಗಿ ಮುಂದಕ್ಕೆ ಸಮಸ್ಯೆ ಸೃಷ್ಠಿಯಾಗುವುದು ಬೇಡ ಎನ್ನುವ ಕಾರಣಕ್ಕೆ ಮೆಣಸಿನಕಾನದಲ್ಲಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರ ಬಂದ್ ಮಾಡಿದ್ದೇವೆ. -ಉದಯರವಿ, ಉಪನಿರೀಕ್ಷಕರು ಸಂಪ್ಯ ಪೊಲೀಸ್ ಠಾಣೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.