HomePage_Banner
HomePage_Banner
HomePage_Banner
HomePage_Banner

ಸಾಂದೀಪನಿಯಲ್ಲಿ ಸನ್ ರೈಸ್ ಡೇ, ಸ್ಕಾರ್ಪ್ ಡೇ ಆಚರಣೆ- ಕಿರುಹೊತ್ತಗೆ ಬಿಡುಗಡೆ 

Puttur_Advt_NewsUnder_1
Puttur_Advt_NewsUnder_1
ಪುತ್ತೂರು: ನರಿಮೊಗರು ಸಾಂದೀಪನಿ  ವಿದ್ಯಾಸಂಸ್ಥೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಸನ್ ರೈಸ್ ಡೇ, ಸ್ಕಾರ್ಪ್ ಡೇ ಹಾಗೂ ಕೋವಿಡ್ ಸಂದರ್ಭದಲ್ಲಿ  ಸಂಸ್ಥೆಯ ಸ್ಕೌಟ್ , ಗೈಡ್ಸ್ ,  ಬುಲ್ ಬುಲ್ ಹಾಗೂ ಕಬ್ ವಿದ್ಯಾರ್ಥಿಗಳು  ಕೈಗೊಂಡ ಕಾರ್ಯಚಟುವಟಿಕೆಗಳ ಕಿರುಹೊತ್ತಗೆ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯರವರು ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಮಾಡಿದ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ   ಪ್ರೇಮ  ಬೆಳ್ಳಾರೆ , ನೀತೂ ನಾಯಕ್, ಪ್ರಸಾದ್ ಈಶ್ವರಮಂಗಲ ಇವರಿಗೆ ಸ್ಕಾರ್ಪ್ ಧಾರಣೆ ಮಾಡಿ ಮಾತನಾಡಿದ ಸಂಸ್ಥೆಯ ಮುಖ್ಯೋಪಾಧ್ಯಾಯರು ಹಾಗೂ ಗೈಡ್ಸ್ ಜಿಲ್ಲಾ ಆಯುಕ್ತರಾದ  ಜಯಮಾಲಾ ವಿ.ಎನ್. ರವರು ಸನ್ ರೈಸ್ ಡೇ ಹಾಗೂ ಸ್ಕಾರ್ಪ್ ಡೇ ಆಚರಣೆಯ ಮಹತ್ವವನ್ನು ತಿಳಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬುಲ್ ಬುಲ್ ಶಿಕ್ಷಕಿ  ಅನಿತಾ, ಕಬ್ ಶಿಕ್ಷಕಿ ಭವಿತಾ, ಗೈಡ್ಸ್ ಶಿಕ್ಷಕಿ  ರೇಶ್ಮಾ ಭಂಡಾರಿ ,  ಕಿಶನ್, ಬುಲ್ ಬುಲ್ ವಿದ್ಯಾರ್ಥಿನಿ ಅವನಿ ಎಸ್ ಪಿ  ,  ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು , ಪೋಷಕರು ಉಪಸ್ಥಿತರಿದ್ದರು.‌ ಸ್ಕೌಟ್ ಶಿಕ್ಷಕರಾದ ಶ್ರೀಪ್ರಸಾದ್ ಸ್ವಾಗತಿಸಿ,  ಮುರಳಿಕೃಷ್ಣ  ವಂದಿಸಿದರು. ಸಂಸ್ಥೆಯ ಹಿರಿಯ ಹಾಗೂ ರೋವರ್ ವಿದ್ಯಾರ್ಥಿ ಚಂದ್ರಾಕ್ಷ  ಸಹಕರಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.