ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿ ನಿವಾಸಿ ದಿ ರಘುನಾಥ ರೈ ಯವರ ಪತ್ನಿ ಜಯಂತಿ ರೈವರ ಮನೆಗೆ ಪುತ್ತೂರು ತಾಲೂಕು ಯುವ ಬಂಟರ ಸಂಘದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕರೆ, ಪ್ರಧಾನ ಕಾರ್ಯದರ್ಶಿ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೆ ಸಿ ಅಶೋಕ್ ಶೆಟ್ಟಿ, ಕ್ರೀಡಾ ಸಂಚಾಲಕ ಶಶಿರಾಜ್ ರೈ, ಸಾಂಸ್ಕ್ರತಿಕ ಸಂಚಾಲಕ ಸಂತೋಷ್ ರೈ ಚಿಲ್ಮೆತ್ತಾರ್, ಸಂಘಟನಾ ಸಂಚಾಲಕ ಪ್ರಜನ್ ಶೆಟ್ಟಿ ಕಂಬಳದಡ್ಡ, ಕರುಣಾಕರ ರೈ ನಾಯಿಲ, ಶಶಿಧರ ರೈ ಮಡಪ್ಪಾಡಿ ಉಪಸ್ಥಿತರಿದ್ದರು.