- ಕಲಿಯುಗ ಸೇವಾ ಸಮಿತಿಯಿಂದ ನಗರಸಭಾ ಪೌರಾಯುಕ್ತರಿಗೆ ಮನವಿ
ಪುತ್ತೂರು: ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ರಾಗಿದಕುಮೇರು ರಸ್ತೆಯಲ್ಲಿ ಅತಿಭಾರದ ಲಾರಿಗಳ ಸಂಚಾರ ನಿಯಂತ್ರಣ ಮಾಡಬೇಕೆಂದು ಪುತ್ತೂರು ಕಲಿಯುಗ ಸೇವಾ ಸಮಿತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಲಾಗಿದೆ. ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ರಾಗಿದಕುಮೇರು ರಸ್ತೆಯಲ್ಲಿ ಅಡಿಕೆ ಗೋದಾಮು ಕಾರ್ಯಾಚರಿಸುತ್ತಿದ್ದು ಗೋದಾಮಿಗೆ ಅಡಿಕೆ ಹೇರಿಕೊಂಡ ಭಾರಿ ಗಾತ್ರದ ಲಾರಿಗಳ ಸಂಚಾರವಿರುತ್ತದೆ. ಆದ್ದರಿಂದ ಈ ರಸ್ತೆಯಲ್ಲಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ರಸ್ತೆಯ ಸಾಮರ್ಥ್ಯ ಮೀರಿ ಲಾರಿಗಳಲ್ಲು ಸರಕು ಸಾಗಾಟವಾಗುತ್ತಿರುವುದರಿಂದ ರಸ್ತೆಗಳು ಕೆಟ್ಟುಹೋಗುತ್ತಿದೆ. ಆದ್ದರಿಂದ ಗೋದಾಮಿನ ಪರವಾನಿಗೆ ರದ್ದುಪಡಿಸಿ ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.