HomePage_Banner
HomePage_Banner
HomePage_Banner

ಕಡಬದಲ್ಲಿ ಉಚಿತ ಕೊರೋನಾ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್| 8 ಮಂದಿಯ ವರದಿ ಪಾಸಿಟಿವ್

Puttur_Advt_NewsUnder_1
Puttur_Advt_NewsUnder_1
 • ಒಟ್ಟು 132 ಮಂದಿಯ ತಪಾಸಣೆ

ಕಡಬ: ಆರೋಗ್ಯ ಇಲಾಖೆ,ಕಡಬ ಪಟ್ಟಣ ಪಂಚಾಯತ್, ಸರ್ಕಾರದ ವಿವಿಧ ಇಲಾಖೆ, ಕೊರೋನಾ ಕಾರ್ಯಪಡೆ ಇದರ ಆಶ್ರಯದಲ್ಲಿ ಉಚಿತ ಕೊರೋನಾ ಅ್ಯಂಟಿಜನ್ ಟೆಸ್ಟ್  ಆ.1ರಂದು ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಒಟ್ಟು 132 ಮಂದಿ ತಪಾಸಣೆ ಮಾಡಿಕೊಂಡಿದ್ದು ಇದರಲ್ಲಿ ಕೊಕ್ಕಡ ಭಾಗದಿಂದ ಬಂದಿದ್ದ 6 ಮಂದಿ, ಕೌಕ್ರಾಡಿ ಭಾಗದ ಓರ್ವರಿಗೆ ಮತ್ತು ಕೋಡಿಂಬಾಳ ಗ್ರಾಮದ ಓರ್ವರಿಗೆ ಒಟ್ಟು ಎಂಟು ಮಂದಿಯ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಈಗಾಗಲೇ ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕಡಬ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಇಲಾಖೆಯ ಸಿಬ್ಬಂದಿಗಳು, ವರ್ತಕರು, ವರ್ತಕರ ಸಿಬ್ಬಂದಿಗಳು ತಮ್ಮ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು.  ಈ ಸಂದರ್ಭದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ಸುಚಿತ್ರಾ ರಾವ್, ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಸೇರಿದಂತೆ ಪಟ್ಟಣ ಪಂಚಾಯತ್, ಆರೋಗ್ಯ ಇಲಾಖೆ,ಕಂದಾಯ ಇಲಾಖೆ ಸಿಬ್ಬಂದಿ ಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

2 Comments

 1. BharathKakyana

  Good work. But one confusion about korona report., Minimum of a day is required for all korona reports. But how did it report at kadaba? Make the public aware of this briefly. By what means is the korona report immediately known?

  Reply
 2. BharathKakyana

  Good work. But one confusion Minimum one day required for all korona reports. But how did Corona report at kadaba? Make the public aware of this briefly. By what means is the korona report immediately known?

  Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.