HomePage_Banner
HomePage_Banner
HomePage_Banner

ಉದನೆ: ಒಂಬತ್ತು ವರ್ಷಗಳ ಹಿ೦ದೆ ನಡೆದಿದ್ದ ಭೀಕರ ಅಪಘಾತ| ಮೇಲ್ಮನವಿ ಅರ್ಜಿ ಪುರಸ್ಕಾರ, ಆರೋಪಿ ಖುಲಾಸೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುಮಾರು ಒಂಬತ್ತು ವರ್ಷಗಳ ಹಿ೦ದೆ ಪುತ್ತೂರು ತಾಲೂಕು ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ನಡೆದಿದ್ದ ಅಪಘಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ದಯಾನಂದ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪುರಸ್ಕರಿಸಿ, ಅವರನ್ನು ನಿರಪರಾಧಿಯೆಂದು ಆದೇಶಿಸಿ ಬಿಡುಗಡೆಗೊಳಿಸಿದೆ.

ಘಟನೆ ವಿವರ: 2011ರ ಜನವರಿ ೧೮ರಂದು ಶಿರಾಡಿ ಗ್ರಾಮದ ಉದನೆ ಎಂಬಲ್ಲಿ 3ಗಂಟೆಯ ಸಮಯದಲ್ಲಿ ದಯಾನಂದ ಎಂಬವರು ಅವರ ಬಾಬ್ತು ಟಿಪ್ಪರ್ ಲಾರಿ (ಕೆ.ಎ. 19-ಸಿ-4282) ಯನ್ನು ಗುಂಡ್ಯ ಕಡೆಯಿಂದ ಪೆರಿಯಾಶಾಂತಿ ಕಡೆಗೆ ಚಲಾಯಿಸಿಕೊಂಡು ಬಂದು, ಮಹೇಂದ್ರ ಎಂಬುವವರ ಜೀಪಿಗೆ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಾಮಾನ್ಯ ಗಾಯಗಳಾಗಿತ್ತು. 3 ಜನ ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಲ್ಲದೇ, ಮಹೇಂದ್ರ, ಅವರ ಪತ್ನಿ ಮತ್ತು ದಾಕ್ಷಾಯಿನಿ ರವರು ಗಂಭೀರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದರು. ಈ ಅಪಘಾತವು ಲಾರಿ ಚಾಲಕನು ತನ್ನ ಲಾರಿಯನ್ನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದರಿಂದಾಗಿ ನಡೆದಿರುವುದಾಗಿದೆ ಎಂದು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆರೋಪಿಯು ಭಾರತೀಯ ದಂಡ ಸಂಹಿತೆ ಕಲಂ.೨೭೯,೩೩೭,೩೩೮,೩೦೪(ಎ) ರನ್ವಯದಂತೆ ಶಿಕ್ಷಾರ್ಹ ಅಪರಾಧವೆಸಗಿರುವುದಾಗಿ ಅವರ ವಿರುದ್ಧ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್ ನ್ಯಾಯಾಲಯವು ಈ ಪ್ರಕರಣವನ್ನು ಕೈಗೆತ್ತಿಕೊ೦ಡು ಸುಮಾರು ೧೫ ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ಪ್ರಾಸಿಕ್ಯೂಶನ್ ಈ ಪ್ರಕರಣವನ್ನು ಸ೦ಶಯಾತೀತವಾಗಿ ಸಾಬೀತುಪಡಿಸಿದೆ ಎಂದು ತೀರ್ಮಾನಿಸಿ, ಆರೋಪಿಗೆ 8 ತಿಂಗಳ ಕಾರಾಗೃಹ ಶಿಕ್ಷೆ ಮತ್ತು 2,500/- ದಂಡ ನೀಡಬೇಕೆಂದು ಆದೇಶಿಸಿತ್ತು. ಸದ್ರಿ ಆದೇಶವನ್ನು ಪ್ರಶ್ನಿಸಿ, ಆರೋಪಿದಯಾನಂದರವರು ತನ್ನ ಪರ ವಕೀಲರ ಮುಖಾಂತರ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಕೀಲ ಮಹೇಶ್ ಕಜೆಯವರು ಸದ್ರಿ ಅಪಘಾತ ನಡೆದಿತ್ತು ಎನ್ನಲಾದ ಸಂದರ್ಭದಲ್ಲಿ ಜೀಪಿನಲ್ಲಿ ಮಿತಿಗಿಂತ ಜಾಸ್ತಿ ಜನರಿದ್ದು, ಓವರ್- ಲೋಡ್ ಆಗಿ ವಾಹನವು ನಿಯಂತ್ರಣ ತಪ್ಪಿರುತ್ತದೆ ಹೊರತು, ಆರೋಪಿಯ ತಪ್ಪಿನಿಂದ ಅಪಘಾತ ನಡೆದಿದೆ ಎಂಬುವುದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ ಎಂಬಿತ್ಯಾದಿ ಅಂಶಗಳ್ನು ವಾದಿಸಿದ್ದರು. ವಾದವನ್ನು ಆಲಿಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೆಳ ನ್ಯಾಯಾಲಯವು ನೀಡಿದ್ದ ಆದೇಶವನ್ನು ತಳ್ಳಿಹಾಕಿ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿ, ಆರೋಪಿಯನ್ನು ನಿರಪರಾಧಿಯೆಂದು ಖುಲಾಸೆಗೊಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.