HomePage_Banner
HomePage_Banner
HomePage_Banner
HomePage_Banner

ಕಾಣಿಯೂರು: ಮಧ್ಯಾಹ್ನ ಬಳಿಕದ ಸ್ವಯಂಪ್ರೇರಿತ ಲಾಕ್‌ಡೌನ್ ವಾಪಸ್

Puttur_Advt_NewsUnder_1
Puttur_Advt_NewsUnder_1
  • ಎಂದಿನಂತೆ ನಡೆಯಿತು ವ್ಯಾಪಾರ, ವ್ಯವಹಾರ

ಚಿತ್ರ: ಸುಧಾಕರ್ ಕಾಣಿಯೂರು


ಕಾಣಿಯೂರು: ಕಾಣಿಯೂರು, ಬೆಳಂದೂರು, ಕುದ್ಮಾರು ವ್ಯಾಪ್ತಿಯಲ್ಲೂ ಕೊರೋನಾ ಸೋಂಕಿನ ಪ್ರಕರಣಗಳು ಕಂಡು ಬಂದಿದ್ದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಾಣಿಯೂರಿನಲ್ಲಿ ಜು.23ರಿಂದ ಜು 31ರ ತನಕ ಮಧ್ಯಾಹ್ನ 2 ಗಂಟೆಯ ತನಕ ವ್ಯವಹಾರಕ್ಕೆ ಸೀಮಿತಗೊಳಿಸಿ ಜಾರಿಯಲ್ಲಿದ್ದ ಸ್ವಯಂಪ್ರೇರಿತ ಲಾಕ್‌ಡೌನ್ ವಾಪಸ್ ಪಡೆದುಕೊಂಡಿದ್ದು, ಅ. 1ರಂದು ಎಂದಿನಂತೆ ವ್ಯಾಪಾರ, ವ್ಯವಹಾರ ನಡೆದಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಮಾತ್ರ ವಿರಳವಾಗಿತ್ತು.

ಜಗತ್ತಿನಾದ್ಯಂತ ಕಾಡುತ್ತಿರುವ ಮಾರಕ ರೋಗ ಕೊರೋನಾ ವೈರಸ್ ದಿನ ಹೋದಂತೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜು.23ರಿಂದ ಜು 31ರವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ವ್ಯವಹಾರ ನಡೆಸಿ, ಮಧ್ಯಾಹ್ನದ ಬಳಿಕ ಸ್ವಯಂಪ್ರೇರಿತ ಸಂಪೂರ್ಣ ಲಾಕ್‌ಡೌನ್ ನಡೆಸಲು ಕಾಣಿಯೂರಿನಲ್ಲಿ ವರ್ತಕರು ನಿರ್ಧಾರ ತೆಗೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಕಾಣಿಯೂರಿನ ಜನತೆ ಮಧ್ಯಾಹ್ನದ ಬಳಿಕದ ಸ್ವಯಂ ಪ್ರೇರಿತ ಲಾಕ್‌ಡೌನ್‌ಗೆ ಬೆಂಬಲವನ್ನು ಸೂಚಿಸಿದ್ದರು. ಸ್ವಯಂ ಪ್ರೇರಿತ ಲಾಕ್‌ಡೌನ್ ಸಂದರ್ಭದಲ್ಲಿ ಕಾಣಿಯೂರು ಪೇಟೆ ಸಂಪೂರ್ಣ ಸ್ತಬ್ಧವೂ ಗೊಂಡಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.