ರಕ್ತದಾನ ಮಾಡಿ ಬಕ್ರಿದ್ ಹಬ್ಬಕ್ಕೆ ಮತ್ತಷ್ಟು ಮೆರಗು| ಪುತ್ತೂರು ಎಸ್ಸೆಸ್ಸೆಫ್, ಎಸ್.ವೈ.ಎಸ್‌ನಿಂದ ಶಿಬಿರ: 50ಕ್ಕೂ ಮಿಕ್ಕಿ ಜೀವದಾನಿಗಳ ಮಾದರಿ ಕಾರ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ಸುನ್ನೀ ದಅವಾ ವಿಂಗ್ ಸಾಥ್
  • ದ.ಕ ಜಿಲ್ಲಾ ಬ್ಲಡ್ ಸೈಬೋದ ಯಶಸ್ವಿ 163ನೇ ಶಿಬಿರ ಆಯೋಜನೆ

@  ಇಬ್ರಾಹಿಂ ಖಲೀಲ್ ಪುತ್ತೂರು

ಪುತ್ತೂರು: ರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಮತ್ತು ಕರ್ನಾಟಕ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್) ರಾಜ್ಯಾದ್ಯಂತ ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ. ಕಳೆದ ನಾಲ್ಕೈದು ತಿಂಗಳಲ್ಲಿ ಲಾಕ್‌ಡೌನ್‌ನಲ್ಲೂ ಈ ಸುನ್ನೀ ಕುಟುಂಬದ ಕಾರ್ಯಕರ್ತರು ಸೇವೆಯಲ್ಲಿ ನಿರತರಾಗಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಲಾಕ್‌ಡೌನ್ ಭೀತಿಯಿಂದಾಗಿ ರಕ್ತದ ಪೊರೈಕೆಗೆ ತೀರಾ ಸಂಕಷ್ಟಕ್ಕೀಡಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆ ತುರ್ತು ಅಗತ್ಯ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಾಣುತ್ತಿದೆ.

ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಹಾಗೂ ಎಸ್.ವೈ.ಎಸ್ ಪುತ್ತೂರು ಬ್ರಾಂಚ್, ಪುತ್ತೂರು ಸುನ್ನೀ ದಅವಾ ವಿಂಗ್ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹಕಾರದೊಂದಿಗೆ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಬ್ಲಡ್ ಸೈಬೋದ 163ನೇ ರಕ್ತದಾನ ಶಿಬಿರವನ್ನು ಜು.31ರಂದು ಬನ್ನೂರಿನ ಸುನ್ನಿ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು. ತ್ಯಾಗ, ಸಹಬಾಳ್ವೆಯ ಪ್ರತೀಕವಾಗಿರುವ ಈದುಲ್ ಅದ್ಹಾ ಹಬ್ಬದ ನಡುವೆಯೂ ದಾನಿಗಳು ರಕ್ತ ನೀಡುವೊಂದರೊಂದಿಗೆ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸಿ ಮಾದರಿಯಾಗಿದ್ದಾರೆ.

ಸೀಮಿತ ಅವಧಿಯಲ್ಲಿ 50ಕ್ಕೂ ಮಿಕ್ಕಿ ಮಂದಿ ರಕ್ತದಾನ
ಹಬ್ಬದ ದಿನವಾಗಿರುವುದರಿಂದ ಶಿಬಿರಕ್ಕೆ ಸೀಮಿತ ಸಮಯವನ್ನು ನಿಗದಿಪಡಿಸಲಾಗಿದ್ದರು, ಸ್ಥಳೀಯರು ಹಾಗೂ ವ್ಯಾಪ್ತಿಯಲ್ಲಿರುವ ಕೆಲವು ಶಾಖೆಗಳ ಕಾರ್ಯಕರ್ತರೂ ಬಂದು ಸ್ವಯಂಪ್ರೇರಿತರಾಗಿ ರಕ್ತ ನೀಡಿ ಜೀವದಾನಿಗಳಾಗಿದ್ದಾರೆ. ಈ ವರುಷದ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದ್ದಲ್ಲದೇ ಮಾದರಿ ಕಾರ್ಯಕ್ಕೆ ಸಾಕ್ಷಿಯಾಗಿದೆ. ಶಿಬಿರವನ್ನು ಸರಕಾರದ ನಿಯನುಸಾರವಾಗಿಯೇ ನಡೆಸಲಾಗಿದ್ದು, ಸುಮಾರು 50ಕ್ಕೂ ಮಿಕ್ಕಿ ರಕ್ತದಾನಿಗಳು ರಕ್ತ ನೀಡಿ ಶಿಬಿರವನ್ನು ಯಶಸ್ವಿಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾಅತ್‌ನ ಉಸ್ತುವಾರಿ ಅಬ್ಲುಲ್ ರ್ರಹ್ಮಾನ್ ಮೊಗರ್ಪಣೆ, ಎಸ್.ವೈ.ಎಸ್ ನಾಯಕರಾದ ಇಕ್ಬಾಲ್ ಬಪ್ಪಳಿಗೆ, ಸ್ವಾಲೀಹ್ ಮುರ, ಶಾಹುಲ್ ಹಮೀದ್ ಕಬಕ, ಅಝೀಝ್ ಕೆಮ್ಮಾಯಿ, ಎಸ್ಸೆಸ್ಸಫ್ ಡಿವಿಷನ್ ಉಪಾಧ್ಯಕ್ಷ ಹಮೀದ್ ಸಖಾಫಿ ರೆಂಜ, ಬ್ಲಡ್ ಸೈಬೋದ ಜಿಲ್ಲಾ ಉಸ್ತುವಾರಿ ಕರೀಂ ಕದ್ಕಾರ್, ಡಿವಿಷನ್ ಉಸ್ತುವಾರಿಗಳಾದ ಮುಹಮ್ಮದ್ ಹಾರೀಶ್ ಅಡ್ಕ, ಶಿಹಾಬುರ್ರಹ್ಮಾನ್, ಸೆಕ್ಟರ್ ಅಧ್ಯಕ್ಷ ಸಲಾಂ ಹನೀಫಿ, ಸುನ್ನೀ ಸೆಂಟರ್ ಅಧ್ಯಕ್ಷ ಫಾರೊಕ್ ಬನ್ನೂರು, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯನಿರ್ವಾಹಕ ಪ್ರವೀಣ್ ಕುಮಾರ್, ಎಸ್.ವೈ.ಎಸ್ ಬನ್ನೂರು ಬ್ರಾಂಚ್‌ನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್, ರಿಯಾಝ್ ಪಾಪ್ಲಿ, ಎಸ್ಸೆಸ್ಸೆಫ್‌ನ ಸಮೀರ್ ಬನ್ನೂರು ಜಾಬೀರ್ ಬನ್ನೂರು, ಉಲ್ಪಾತುಲ್ಲಾಹ್, ಹನೀಫ್ ಬನ್ನೂರು, ಬಾತೀಷ್ ಬನ್ನೂರು, ಝಾಹಿರ್, ಲೇಡಿಗೋಷನ್ ಆಸ್ಪತ್ರೆಯ ಪ್ರೀತೇಶ್ ಹಾಗೂ ಸಿಬ್ಬಂದಿ ವರ್ಗ, ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರೂ ಉಪಸ್ಥಿತರಿದ್ದರು.

ಮದುವೆ ದಿನದಂದು ರಕ್ತ ನೀಡಿದ ಮದುಮಗ
ತಾಲೂಕಿನ ಬ್ಲಡ್ ಸೈಬೊ ಡಿವಿಷನ್ ಉಸ್ತುವಾರಿ ಮುಹಮ್ಮದ್ ಹಾರೀಶ್ ಅಡ್ಕರವರ ವೈವಾಹಿಕ ದಿನದಂದು ತನ್ನ ನಿವಾಸದಲ್ಲಿಯೇ ರಕ್ತದಾನದ ಶಿಬಿರವನ್ನು ಆಯೋಜಿಸಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಯುವಕರಲ್ಲಿ ಉತ್ತೇಜನೆ ನೀಡಿದ್ದಾರೆ. ಕುಂಬ್ರ ಎಸ್ಸೆಸ್ಸೆಫ್ ಸೆಕ್ಟರ್ ಮತ್ತು ಬ್ಲಡ್ ಸೈಬೋದ ವತಿಯಿಂದ ನಡೆಸಲಾದ ಶಿಬಿರದಲ್ಲಿ ಸುಮಾರು 50ರಷ್ಟು ಯುನಿಟ್ ರಕ್ತ ಸಂಗ್ರಹವಾಗಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

ಎಸ್ಸೆಸ್ಸೆಫ್ ಬ್ಲಡ್ ಸೈಬೊ, ದಅವಾ ವಿಂಗ್‌ನ ಅಭೂತಪೂರ್ವ ಸೇವೆ: ದ.ಕ ಜಿಲ್ಲಾ ಬ್ಲಡ್ ಸೈಬೋ ಕಳೆದ ಮೂರು ವರುಷಗಳಿಂದ ನಿರಂತರ ಜಿಲ್ಲೆಯಲ್ಲಿ ರಕ್ತದ ಕ್ರಾಂತಿಯನ್ನೇ ಸೃಷ್ಟಿಸಿದೆ ಎನ್ನಬಹುದು. ಈ ವರೆಗೆ ಸುಮಾರು 163 ಶಿಬಿರಗಳನ್ನು ಏರ್ಪಡಿಸಿದ್ದು, ಜಿಲ್ಲೆಯ ಪ್ರತಿ ಡಿವಿಷನ್‌ನಡಿಯಲ್ಲಿ ಶಿಬಿರ ನಡೆಯುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಪುತ್ತೂರು ಡಿವಿಷನ್‌ನ 6 ಸೆಕ್ಟರ್ ಕೇಂದ್ರಗಳಿಂದ 18 ಶಿಬಿರಗಳನ್ನು ಆಯೋಜಿಸಿದೆ. ಸುಮಾರು 1500ಕ್ಕೂ ಮಿಕ್ಕಿ ಕಾರ್ಯಕರ್ತರು ರಕ್ತದಾನ ಮಾಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಕಳೆದ ವರುಷ ಕೊಡಗಿನ ನಾನಾ ಕಡೆಗಳಲ್ಲಿ ನಡೆದ ಪ್ರವಾಹ ಭೀತಿಯಲ್ಲಿ ಸಿಲುಕಿಕೊಂಡವರಿಗೆ ಅಗತ್ಯ ವಸ್ತುಗಳ ಪೊರೈಕೆ, ಶ್ರಮದಾನ ಮಾಡಿರುವ ಪುತ್ತೂರು ದಅವಾ ವಿಂಗ್‌ನ ನಾಯಕರು ಮತ್ತು ಕಾರ್ಯಕರ್ತರ ಸೇವೆ ವಿಶೇಷವಾದುದ್ದು. ಅಂತಯೇ ಲಾಕ್‌ಡೌನ್ ಸಂದರ್ಭದಲ್ಲಿ ಜನಪರ ಸೇವೆಯನ್ನು ಮಾಡಿದೆ.

                                             ಕರೀಂ ಕದ್ಕಾರ್

ನಡೆದಾಡುವ `ಬ್ಲಡ್ ಬ್ಯಾಂಕ್’ ಕರೀಂ ಕದ್ಕಾರ್: ಜಿಲ್ಲೆಯಾದ್ಯಂತ ಇದೀಗ ಬರೋಬ್ಬರಿ 163 ಶಿಬಿರಗಳನ್ನು ಏರ್ಪಡಿಸಿದಲ್ಲದೆ, ತುರ್ತು ಸಂದರ್ಭದಲ್ಲಿ ರಕ್ತ ಪೂರೈಕೆಗಾಗಿ ವಿಶೇಷ ವಾಟ್ಸಾಪ್ ಗ್ರೊಪ್ ರಚಿಸಿದ್ದು ಇದರಲ್ಲಿ ರಕ್ತದಾನಿಗಳು ಬೇಡಿಕೆಯಿರುವ ರೋಗಿಗಳಿಗೆ ಇದುವರೆಗೆ ಸುಮಾರು 15 ಸಾವಿರ ಯುನಿಟ್ ರಕ್ತ ಪೂರೈಕೆ ಮಾಡಿದೆ. ಎಸ್ಸೆಸ್ಸೆಫ್ ಜಿಲ್ಲಾ ಬ್ಲಡ್ ಸೈಬೋದ ಕನ್ವೀನರ್, ನಡೆದಾಡುವ `ಬ್ಲಡ್ ಬ್ಯಾಂಕ್’ ಎಂದೇ ಕರೆಯಲ್ಪಡುವ ಕರೀಂ ಕದ್ಕಾರ್‌ರವರು ಸುಮಾರು 43 ಬಾರಿ ರಕ್ತದಾನ ಮಾಡುವುದರೊಂದಿಗೆ ಯುವ ರಕ್ತದಾನಿಗಳಿಗೆ ಪ್ರೇರಣೆ ತುಂಬಿದ್ದಾರೆ. ಬ್ಲಡ್ ಸೈಬೋ ಇನ್ನು ಬೇರೆ ಜಿಲ್ಲೆಯಲ್ಲೂ ಸಕ್ರಿಯವಾಗಲಿದೆ. ಈ ಸಾಮಾಜಿಕ ಕಾಳಜಿ ಸೇವೆಗೆ ಹಲವು ಬಾರಿ ದ.ಕ ಜಿಲ್ಲಾಧಿಕಾರಿಯವರು ವಿಶೇಷವಾಗಿ ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.