HomePage_Banner
HomePage_Banner
HomePage_Banner
HomePage_Banner

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆ ಮದ್ದು ಯೋಜನೆ| ಶಾಸಕರ ವಾರ್ ರೂಮ್ ನಿಂದ ಗಿಡಮೂಲಿಕೆಗಳ ನರ್ಸರಿ ಸಿದ್ಧತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ಹರಡದಂತೆ ಮತ್ತು ಸೋಂಕು ಬಾರದಂತೆ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದಿಕ್ ಮಾತ್ರೆಗಳನ್ನು ವಿತರಣೆಯನ್ನು ನಡೆಸಿದ ಶಾಸಕರ ವಾರ್‌ರೂಮ್ ಮನೆ ಮದ್ದಿಗೂ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಆಯುರ್ವೇದಿಕ್ ಗಿಡಮೂಲಕೆಗಳನ್ನು ಮನೆಯಂಗಳದಲ್ಲಿ ಬೆಳೆಸುವ ಕುರಿತು ಚಿಂತನೆ ನಡೆಸಿದ್ದಾರೆ.  

ಶಾಸಕರ ವಾರ್ ರೂಮ್ ಮಾರ್ಗದರ್ಶನದಂತೆ ಪುತ್ತೂರು ನಗರ ಬಿಜೆಪಿ ಎಸ್ಸಿ ಮತ್ತು ಎಸ್ಟಿ ಮೋರ್ಚಾದಿಂದ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ನೇತೃತ್ವದಲ್ಲಿ ೧ ಸಾವಿರ ಅಮೃತ ಬಳ್ಳಿ ಮತ್ತು ೧ ಸಾವಿರ ನೆಲನೆಲ್ಲಿ ನರ್ಸರಿ ಕಾರ್ಯ ಬೊಳುವಾರಿನಲ್ಲಿ ನಡೆಯಿತು. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ನರ್ಸರಿ ಕಾರ್ಯಕ್ಕೆ ಚಾಲನೆ ನೀಡಿದರು. ನರ್ಸರಿ ಗಿಡಗಳು ಚಿಗುರೊಡೆದ ಬಳಿಕ ಆಯ್ದ ಮನೆಗಳಿಗೆ ಉಚಿತವಾಗಿ ಔಷಧಿ ಗಿಡಗಳನ್ನು ಕೊಟ್ಟು ಮನೆಯಂಗಳದಲ್ಲಿ ನಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದರು.

ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಎಸ್ಸಿ ಮೋರ್ಚಾ ಅಧ್ಯಕ್ಷ ತಿಮ್ಮಪ್ಪ ನೀರ್ಪಾಜೆ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಎಸ್ ಟಿ ಮೋರ್ಚಾದ ಅಧ್ಯಕ್ಷ ಅಶೋಕ್, ಬಿಜೆಪಿ ಮಂಡಲದ ಉಪಾಧ್ಯಕ್ಷ ಇಂಧುಶೇಖರ್, ಕಿರಣ್ ಶಂಕರ್ ಮಲ್ಯ, ನಗರಸಭಾ ಸದಸ್ಯ ವಸಂತ ಕಾರೆಕ್ಕಾಡು, ನವೀನ್ ಪಡಿವಾಳ್, ಪ್ರೇಮದಾಸ್, ಪವನ್ ಕುಮಾರ್, ವಿಶ್ವನಾಥ ನೀರ್ಪಾಜೆ, ಪ್ರವೀಣ್ ನೀರ್ಪಾಜೆ, ರಾಮಚಂದ್ರ ಘಾಟೆ, ಸಂದಿಪ್ ಲೋಬೊ ಮತ್ತಿರರು ನರ್ಸರಿ ಕಾರ್ಯದಲ್ಲಿ ತೊಡಗಿದರು.

ಔಷಧೀಯ ಸಸ್ಯಗಳನ್ನು ಬೆಳೆಸಬೇಕೆಂಬ ಉದ್ದೇಶದಿಂದ ಎಸ್ಸಿ ಮತ್ತು ಎಸ್ಟಿ ಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಸೇರಿಕೊಂಡು ೧ಸಾವಿರಕ್ಕೂ ಮಿಕ್ಕಿ ಅಮೃತ ಬಳ್ಳಿ ಮತ್ತು ನೆಲನೆಲ್ಲಿಯನ್ನು ನರ್ಸರಿ ಮಾಡಲಾಗಿದೆ. ಒಂದು ವಾರದ ಬಳಿಕ ಅದನ್ನು ಎಲ್ಲಿ ಅಗತ್ಯ ಇದೆಯೋ ಆ ಮನೆಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು-  ಪಿ.ಜಿ.ಜಗನ್ನಿವಾಸ ರಾವ್

ಕೊರೋನಾದ ತೊಂದರೆ ಹೆಚ್ಚಾದ ಸಂದರ್ಭದಲ್ಲಿ ನಾವು ಭಯ ಪಡಬೇಕಾದ ಅಗತ್ಯವಿಲ್ಲ. ಕಾಯಿಲೆಯಿಂದ ನಮ್ಮನ್ನು ರಕ್ಷಣೆ ಮಾಡಲು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಅನೇಕ ತರದ ಗಿಡಮೂಲಿಕೆಗಳನ್ನು ನಾವು ಬೆಳೆಸಬೇಕೆಂದು ಬಿಜೆಪಿ ಕಾರ್ಯಕರ್ತರು ಗಿಡಗಳ ನರ್ಸರಿ ಕಾರ್ಯದಲ್ಲಿ ತೊಡಗಿದ್ದು ಮುಂದೆ ಎಲ್ಲರಿಗೂ ಉಚಿತವಾಗಿ ನೀಡುವರಿದ್ದಾರೆ. -ಮಲ್ಲಿಕಾ ಪ್ರಸಾದ್, ಮಾಜಿ ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.