ಕೊರೋನಾ ಮಹಾಮಾರಿ ಅಲ್ಲವೇ ಅಲ್ಲ – ಯಾರೂ ಭಯಪಡಬೇಡಿ ಕೊವೀಡ್ ಚಿಕಿತ್ಸೆ ಪಡೆದ ನಗರಸಭೆ ಮಾಜಿ ಸದಸ್ಯ ಸಂಕಪ್ಪ ಗೌಡ ವಿನಂತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕಿನ ಕುರಿತು ಜನರಲ್ಲಿ ಭಯದ ವಾತಾವರಣ ಇದೆ. ಆದರೆ ಕೊರೋನಾ ಮಾರಾಣಾಂತಿಕ ಕಾಯಿಲೆ ಅಲ್ಲ. ಮಹಾ ಮಾರಿ ಅಲ್ಲವೇ ಅಲ್ಲ. ಇಲ್ಲಿ ಯಾರೂ ಭಯಪಡಬೇಡಿ ಎಂದು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನಗರಸಭೆ ಮಾಜಿ ಸದಸ್ಯ ಸಂಕಪ್ಪ ಗೌಡ ವಿನಂತಿ ಮಾಡಿರುವ ವಿಡಿಯೋ ಆ.1ರಂದು ಸಂಕಪ್ಪ ಗೌಡರು ಕೊರೋನಾದಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬಳಿಕ ವೈರಲ್ ಆಗಿದೆ.


ಪಡ್ನೂರು ಗ್ರಾಮದ ಅಜೇಯನಗರ ನಿವಾಸಿಯಾಗಿರುವ ನಗರಸಭೆ ಮಾಜಿ ಸದಸ್ಯ ಸಂಕಪ್ಪ ಗೌಡ ಅವರು ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ವೇಳೆ ಅವರಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ದಾಖಲಾದರು. ಈ ಸಂದರ್ಭ ಅಲ್ಲಿನ ಕೊರೋನಾ ವಾರಿಯರ್‍ಸ್‌ರವರ ಆರೈಕೆಗಳನ್ನು ನೋಡಿ ಮೆಚ್ಚಿಕೊಂಡಿರುವುದನ್ನು ಮತ್ತು ಕೊರೋನಾ ಬಂದರೆ ಭಯ ಬಿಟ್ಟು ಹೇಗೆ ನಮ್ಮ ಆರೋಗ್ಯ ಕಾಪಾಡಬೇಕೆಂಬುದನ್ನು ತಮ್ಮ ವಿಡಿಯೋ ಮೂಲಕ ವಿವರಿಸಿದ್ದಾರೆ ಮತ್ತು ಕೊರೋನಾದಿಂದ ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಯಾವುದಕ್ಕೂ ಜಗ್ಗದ ಸಮಾಜ ಮೂರು ಅಕ್ಷರದ ಕೊರೋನಾದ ಭಯ ಏಕೆ ?

ಯಾವುದಕ್ಕೂ ಜಗ್ಗದ ಸಮಾಜ ಮೂರು ಅಕ್ಷರದ ಕೊರೋನಾಕ್ಕೆ ಭಯ ಪಟ್ಟಿದೆ. ನನ್ನ ಮನೆಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ಜ್ವರ ಬಂದಿತ್ತು. ಅವರಿಗೆ ಕಡಿಮೆ ಆದ ಬಳಿಕ ನನಗೆ ಜ್ವರ ಬಂತು. ಎರಡು ಮೂರು ದಿವಸ ಕಷಾಯ ಕುಡಿದು ಕಡಿಮೆಯಾಗದಾಗ ಸಮಾಜಕ್ಕೆ ದುಷ್ಪರಿಣಾಮ ಆಗುವುದು ಬೇಡ ಎಂಬ ಉದ್ದೇಶದಿಂದ ನಾನು ಸ್ವ ಇಚ್ಚೆಯಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡೆ. ಆಗ ನನಗೆ ಕೊರೋನಾ ಪಾಸಿಟಿವ್ ಎಂಬ ವರದಿ ಬಂತು. ನಾನು ಸರಕಾರಿ ಆಸ್ಪತ್ರೆಯಲ್ಲೇ ದಾಖಲಾದೆ. ಅಲ್ಲಿ ಉತ್ತಮ ಆರೈಕೆ ಮಾಡಿದ್ದಾರೆ. ಅದರೆ ಜನರ ಮನಸ್ಸಿನಲ್ಲಿ ಕೊರೋನಾದ ಭಯ ಇದೆ. ಕೊರೋನ ಮಾರಣಾಂತಿಕ ಕಾಯಿಲೆ ಅಲ್ಲ. ಈ ಕುರಿತು ಸರಿಯಾದ ವಿಚಾರವನ್ನು ಸಮಾಜ ನಮಗೆ ತಿಳಿಸಿಲ್ಲ. ಮಾಧ್ಯಮಗಳ ಕೊರೋನಾ ವೈಭವೀಕರಣದಿಂದ ಜನರು ಬೇಸತು. ಕಿಲ್ಲರ್ ಕೊರೋನಾ ಎಂದು ಬಳಕೆ ಮಾಡಿ ಎಲ್ಲರಿಗೂ ಭಯ ಉಂಟಾಗಿದೆ. ಕೊರೋನಾ ಎಂಬ ಮಹಾಮಾರಿ ಅಲ್ಲವೇ ಅಲ್ಲ. ಸರಿಯಾದ ಮುಂಜಾಗ್ರತೆ ಕ್ರಮ ತೆಗೆದು ಕೊಂಡರೆ ನೂರಕ್ಕೆ ನೂರು ಕೊರೋನಾ ರೋಗದಿಂದ ಪಾರಾಗಬಹುದು. ನಾವು ಮೊದಲು ಸಮಾಜದಲ್ಲಿ ಭಯದ ವಾತಾವರಣವನ್ನು ದೂರ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕೊರೋನಾ ರೋಗಿಯನ್ನು ದೂರ ಇಡಬೇಡಿ:
ಕೊರೋನಾ ಸೋಂಕು ತಗಲಿದೆ ಎಂದು ಸೋಂಕಿತನನ್ನು ದೂರವಿಡಬೇಡಿ. ಅವರಿಗೆ ಸಾಕಷ್ಟು ಸೇವೆ ಸಲ್ಲಿಸುವ ಮೂಲಕ ನಮ್ಮ ಸಮಾಜ ರಕ್ಷಣೆ ಮಾಡಬೇಕು. ಜೊತೆಗೆ ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಲು ಹಿಂದು ಮುಂದೆ ನೋಡಬೇಡಿ. ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಉತ್ತಮ ಸೇವೆ ನೀಡುತ್ತಾರೆ. ಪ್ರತಿ ಭಾರಿ ಬೆಳಿಗ್ಗೆ ಪರೀಕ್ಷೆ ಮಾಡುವ ಮೂಲಕ ನಮ್ಮ ಆರೈಕೆ ಮಾಡುತ್ತಾರೆ. ಪೌಷ್ಟಿಕ ಅಂಶದ ಆಹಾರ ನೀಡುತ್ತಾರೆ. ಬಿಸಿ ನೀರಿನ ವ್ಯವಸ್ಥೆ ಇದೆ. ಇದರೊಂದಿಗೆ ನಾವು ಸ್ವಚ್ಛತೆ ಕಾಪಾಡುವಲ್ಲಿ ಬಹಳಷ್ಟು ಶ್ರಮ ವಹಿಸಬೇಕೆಂದು ಅವರು ವಿಡಿಯೋ ಮೂಲಕ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.