ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ ಸಮಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇವುಗಳ ನೇತೃತ್ವದಲ್ಲ್ಲಿ ಪ್ರಧಾನ ಮಂತ್ರಿಯವರ ಆತ್ನನಿರ್ಭರ ಭಾರತದ ಪರಿಕಲ್ಪನೆಯಡಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಆತ್ಮನಿರ್ಭರ ಭಾರತದ ಆಶಯ ಗೀತೆಯೊಂದಿಗೆ ಆರಂಭಗೊಂಡಿತು.

ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ಇವರು, ಇಂದು ಕಾರ್ಯಕ್ರಮದ ಸಮಾರೋಪ ಆದರೆ ನಮ್ಮ ಜೀವನದ ಆರಂಭ ಇವತ್ತಿನಿಂದ ಆಗಬೇಕಾಗಿದೆ. ಸಾಧನೆ ಮಾಡುವ ಇಚ್ಛಾಶಕ್ತಿ ಇದ್ದರೆ ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಅವಕಾಶಗಳು ನಮಗೆ ಮುಕ್ತವಾಗಿದೆ. ಅವುಗಳನ್ನು ಉಪಯೋಗಿಸಿಕೊಂಡು ನಮ್ಮ ಜೀವನವನ್ನು ಹೇಗೆ ನಡೆಸಬಹುದು ಎಂದು ಈ ತರಬೇತಿ ತಿಳಿಸಿಕೊಡುತ್ತದೆ. ಇಂತಹ ತರಬೇತಿಯನ್ನು ಈ ಸಂಸ್ಥೆ ಹಮ್ಮಿಕೊಂಡಿರುವುದು ಶ್ಳಾಘನಿಯ. ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕರಾದ ಶ್ರೀ ಶಿವಪ್ರಸಾದ್ ಇ ಮಾತನಾಡುತ್ತಾ, ಶಿಬಿರಾರ್ಥಿಗಳು ಈ ತರಬೇತಿಯನ್ನು ಸವಾಲಾಗಿ ತೆಗೆದುಕೊಂಡು ಧೈರ್ಯದಿಂದ ಮುನ್ನುಗ್ಗಿ ತಮ್ಮ ತಮ್ಮ ಊರುಗಳಲ್ಲಿ ಯಶಸ್ವಿ ಉದ್ದಿಮೆದಾರರಾಗಿ, ಹಾಗೂ ತಮ್ಮ ಗ್ರಾಮಗಳಲ್ಲಿ ಇಂತಹ ತರಬೇತಿಗಳನ್ನು ನಡೆಸಿ , ನಿಮ್ಮ ಜೀವನದ ಪಯಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಅತಿಥಿಗಳು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್, ಪ್ರಗತಿ ಪ್ಯಾರಾಮೇಡಿಕಲ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರೀತಾ ಎ ಉಪಸ್ಥಿತರಿದ್ದರು. ವಿವೇಕಾನಂದ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳೀಧರ ಯಸ್ ಇವರು ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಶಿಬಿರಾರ್ಥಿಗಳ ಅನಿಸಿಕೆ:
ಶಂಕರನಾರಾಯನ ಭಟ್ : ತುಂಬಾ ಒಳ್ಳೆಯ ಪ್ರಯೋಜನಕಾರಿ ತರಬೇತಿ ಕಾರ್ಯಕ್ರಮ, ಇಷ್ಟು ಒಳ್ಳೆಯ ತರಬೇತಿ ಯಾವ ಸಂಸ್ಥೆಯೂ ಮಾಡಿರಲಿಕಿಲ್ಲ, ಇಲ್ಲಿ ಯಾವುದೇ ಲಾಭಕ್ಕಾಗಿ ಅಥವಾ ನಾಮಕಾವಸ್ಥೆ ತರಬೇತಿ ನಡೆಸಿಲ್ಲ, ನೈಪುಣ್ಯತೆ ನಮಗೆ ಇಲ್ಲಿ ಸಿಕ್ಕಿದೆ. ಇನ್ನು ಮುಂದೆ ಸಮಾಜ ಹಾಗೂ ಸಂಸ್ಥೆ ಒಟ್ಟಾಗಿ ಇಂತಹ ಕಾರ್ಯಕ್ರಮ ಯೋಜಿಸಬೇಕು ಎಂದರು.

ಮಹೇಶ್: ಸ್ವಾವಲಂಬಿಗಳಾಗಿ ಎಂದು ಪ್ರಧಾನಿ ಹೇಳಿದ ಮಾತಿಗನುಸಾರವಾಗಿ ಮುಂದುವರಿಯಲು ಇಂತಹ ತರಬೇತಿಗಳು ನಮಗೆ ಸಹಾಯ ಮಾಡುತ್ತವೆ. ಜೀವನ ನಡೆಸಲು ಬೇಕಾದ ದಾರಿಯನ್ನು ನಮಗೆ ತಿಳಿಸಿ ಕೊಡುತ್ತದೆ ಎಂದರು.

ಆಶಾ ಬೆಳ್ಳಾರೆ : ಚಿಕ್ಕ ಸಂಖ್ಯೆ, ಪರಿಣಾಮಕಾರಿ ಮಾತು ಶಿಬಿರದ ವಿಶೇಷತೆ. ಅತಿ ಕಡಿಮೆ ವೆಚ್ಚದಲ್ಲಿ ಒಳ್ಳೆಯ ತರಬೇತಿ ಸಿಕ್ಕಿದೆ. ಇದರಲ್ಲಿ ಭಾಗವಹಿಸಿದ್ದು ಸಾರ್ಥಕತೆ ಕೊಟ್ಟಿದೆ. ಎಂದರು

ಸುರೇಶ್: ಲಾಕ್‌ಡೌನ್ ಸಮಯದಲ್ಲಿ ಇರುವ ಭಯದ ವಾತಾವರಣದಲ್ಲಿ ಕೂಡಾ ಈ ತರಬೇತಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಜೀವನದಲ್ಲಿ ಮುಂದುವರಿಯಲು ದಾರಿ ತೋರಿಸಿ ಸ್ವಂತ ಉದ್ಯಮ ನಡೆಸಬಹುದು ಎಂಬ ದೈರ್‍ಯವನ್ನು ಈ ತರಬೇತಿ ಕೊಟ್ಟಿದೆ. ಎಂದರು
ಸೌಮ್ಯ ಮರಿಯ: ಸಂಸ್ಥೆ ಒದಗಿಸಿದ ಈ ತರಬೇತಿಗೆ, ಹಾಗೂ ನೀಡಿದ ಸೌಕರ್ಯಕ್ಕೆ ಆಭಾರಿ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.