ನೂಜಿಬಾಳ್ತಿಲಕ್ಕೆ ಶಾಸಕ ಎಸ್. ಅಂಗಾರ, ಎಂ.ಎಲ್.ಸಿ. ಪ್ರತಾಪ್ ಸಿಂಹ ನಾಯಕ್ ಭೇಟಿ | ವಿವಿಧ ಕಾಮಗಾರಿಗಳ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮಕ್ಕೆ ಶಾಸಕ ಎಸ್.ಅಂಗಾರ ಹಾಗೂ ಎಂ.ಎಲ್.ಸಿ. ಪ್ರತಾಪ್ ಸಿಂಹ ನಾಯಕ್ ಆ.3ರಂದು ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು.

 

ನೂಜಿಬಾಳ್ತಿಲ ಗ್ರಾಮದ ನೀರಾರಿ ಬರೆಮೇಲು ಕಾಂಕ್ರೀಟ್ ರಸ್ತೆಗೆ ಎಂ.ಎಲ್‌.ಸಿ. ಪ್ರತಾಪ್ ಸಿಂಹ ಚಾಲನೆ ನೀಡಿದರು. ರೆಂಜಿಲಾಡಿ ಗ್ರಾಮದ ಮಾರಪ್ಪೆ ಕಡ್ಯ ಕೊಣಾಜೆ ಸಂಪರ್ಕ ಕಾಂಕ್ರೀಟ್ ರಸ್ತೆಯನ್ನು ಕಾಣದಬಾಗಿಲು ಎಂಬಲ್ಲಿ ಶಾಸಕ ಎಸ್.ಅಂಗಾರ ಉದ್ಘಾಟಿಸಿದರು. ರೆಂಜಿಲಾಡಿ ಬೀಡಿದ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಎ.ಪಿ.ಎಂ.ಸಿ. ಅಧ್ಯಕ್ಷ ದಿನೇಶ್ ಮೆದು, ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ಸದಸ್ಯ ಮೇದಪ್ಪ ಗೌಡ, ಪಿ.ಎಲ್.ಡಿ. ಬ್ಯಾಂಕ್ ಅದ್ಯಕ್ಷ ಭಾಸ್ಕರ ಗೌಡ ಎಸ್., ನೂಜಿಬಾಳ್ತಿಲ ಪಿಡಿಒ ಆನಂದ ಎ., ಐತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಕೆ., ಪ್ರಮುಖರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಮೃತ್ಯುಂಜಯ ಬೀಡೆ ಕೆರೆತೋಟ, ಕೊಣಾಜೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಯಶೋಧರ ಗೌಡ, ಶ್ರೀಧರ ಗೌಡ ಗೋಳ್ತಿಮಾರ್, ಡಾ.ಬೇಬಿ ಮ್ಯಾಥ್ಯು, ಚಂದ್ರಶೇಖರ ಗೌಡ ನೂಜಿ, ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ., ಪ್ರ.ಕಾರ್ಯದರ್ಶಿ ಮಧುಸೂದನ್, ಜಯಂತ ಬರೆಮೇಲು, ಹರಿಶ್ಚಂದ್ರ ಪೂಜಾರಿ ಪಲಯಮಜಲು, ವಾಸುದೇವ ಭಟ್ ಕೊಣಾಜೆ, ವಿಠಲ ಭಟ್ ಕೊಣಾಜೆ, ರಮೇಶ್ ಕಲ್ಪುರೆ, ರಘುರಾಜ್ ಮನೆಜಾಲು, ರಜಿತಾ ಪದ್ಮನಾಭ, ಉಮೇಶ್ ಶೆಟ್ಟಿ ಸಾಯಿರಾಮ್, ಲಿಂಗಪ್ಪ ಗೌಡ ಕಾಣದಬಾಗಿಲು, ಚಂದ್ರಾವತಿ ಎಳುವಾಳೆ, ರವೀಂದ್ರ ನಿಡ್ಡೊ, ಕಡಬ ಮೆಸ್ಕಾಂ ಎಇ ಸತ್ಯಮಾರಾಯಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ವೇತಾ ಕಾಣದಬಾಗಿಲು ಪ್ರಾರ್ಥಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.