ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆ | ಮನೆಗಳಲ್ಲಿ ದೀಪೋತ್ಸವ ಆಚರಿಸಲು ವಿ.ಹಿಂ.ಪ ಕರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆ.5ರಂದು ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ಭೂಮಿ ಪೂಜೆ ನಡೆಯುವ ಮೂಲಕ ಶತಮಾನಗಳ ಹಿಂದೂಗಳ, ರಾಮಭಕ್ತರ ಕನಸು ನನಸಾಗಲಿದೆ. ಇಂತಹ ಸಂದರ್ಭದಲ್ಲಿ ಆ ದಿನ ಮನೆ ಮನೆಗಳಲ್ಲಿ ಭಗವಾಧ್ವಜ, ತಳಿರು ತೋರಣ ಸಿಂಗರಿಸಿ, ದೀಪಗಳನ್ನು ಹಚ್ಚಿ ದೀಪೋತ್ಸವ ರೀತಿ ಸಂಭ್ರಮ ಆಚರಿಸಲು ವಿಶ್ವಹಿಂದೂ ಪರಿಷತ್ ಕರೆ ನೀಡಿದೆ ಎಂದು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆ.5ರಂದು ಬೆಳಿಗ್ಗೆ 11.30 ರಿಂದ 12.30ರ ತನಕ ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಲಿದೆ. ಇದನ್ನು ದೂರದರ್ಶನ ಮುಖಾಂತರ ನಡೆಯುವ ನೇರಪ್ರಸಾರ ನೋಡುವ ಮೂಲಕ ರಾಮನಾಮ ಜಪ, ತಪ ವಿಶೇಷ ಪೂಜೆಗಳನ್ನು ಆಚರಿಸಬೇಕು. ಮನೆಗಳಲ್ಲಿ, ದೇಗುಲ, ಮಠ ಮಂದಿರಗಳಲ್ಲಿ ಪೂಜೆ ನೆರವೇರಿಸುವಂತೆ ಭಕ್ತರಲ್ಲಿ ವಿನಂತಿ ಮಾಡುತ್ತಿದ್ದೇವೆ ಎಂದರು. ಪುತ್ತೂರು ಜಿಲ್ಲೆಯ ಎಲ್ಲಾ ಮಠಮಂದಿರ, ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳನ್ನು ತಳಿರು ತೋರಣದಿಂದ ಅಲಂಕರಿಸಿ, ಭಜನೆ ಸಂಕೀರ್ತನೆ, ಜಪ, ಪೂಜೆ, ದೀಪ ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸುವಂತೆ ವಿನಂತಿಸಿದ ಅವರು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಾಲಯ ವಜ್ರ ಸಂಜೀವಿನಿಯಲ್ಲಿ ಕರಸೇವಕರನ್ನು ಗುರುತಿಸಿ ಸನ್ಮಾನಿಸುವ ಮತ್ತು ಅವರೊಂದಿಗೆ ನೇರಪ್ರಸಾರ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನೆಹರುನಗರ ವೀರಾಂಜನೇಯ ಕ್ಷೇತ್ರದಲ್ಲಿ ಪೂಜೆ:
ವಿಶ್ವಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಅವರು ಮಾತನಾಡಿ ಶ್ರೀ ರಾಮ ಮಂದಿರದ ಭೂಮಿ ಪೂಜೆಯ ದಿನ ಸಂಜೆ ನೆಹರುನಗರ ನೆಲಪ್ಪಾಲುವಿನಲ್ಲಿರುವ ವೀರಾಂಜನೇಯ ಕ್ಷೇತ್ರದಲ್ಲಿ ವಿಶೇಷ ಪೂಜೆ ಮತ್ತು ಶ್ರೀರಮ ತಾರಕ ಮಂತ್ರ ಜಪ ನಡೆಯಲಿದೆ ಎಂದು ಹೇಳಿದರು. ಎಲ್ಲಾ ಕಾರ್ಯಕ್ರಮಗಳು ಕೋವಿಡ್-19 ಸುರಕ್ಷತಾ ಕ್ರಮವನ್ನು ಅನುಸರಿಸಿಕೊಂಡು ಆಯೋಜಿಸಲಾಗಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.