Breaking News

ಮನೆ ಮನೆ ತ್ಯಾಜ್ಯ ವಿಲೇವಾರಿಗೆ ನಗರ ಸಭೆಯಿಂದ ನೂತನ 10 ವಾಹನಗಳಿಗೆ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ಸಾರ್ವಜನಿಕರು ತಮ್ಮದು ಎಂಬ ಭಾವನೆಯಿಂದ ಸಹಕರಿಸಿ-ಶಾಸಕ ಮಠಂದೂರು

ಪುತ್ತೂರು: ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ನಗರ ಸಭಾ ವಾರ್ಡ್‌ಗಳಲ್ಲಿ ಮನೆ ಮನೆಯಿಂದ ತ್ಯಾಜ್ಯ ವಿಲೇವಾರಿ ಮಾಡಲು ನಗರ ಸಭೆಯ ರೂ.81ಲಕ್ಷ ಅನುದಾನದಲ್ಲಿ ಖರೀದಿಸಿ 10 ವಾಹನಗಳಿಗೆ ಆ.3ರಂದು ಚಾಲನೆ ನೀಡಲಾಯಿತು.

ಶಾಸಕ ಸಂಜೀವ ಮಠಂದೂರು ತೆಂಗಿನ ಕಾಯಿ ಒಡೆದು ನೂತನ ವಾಹನಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪುತ್ತೂರು ನಗರ ಸಭೆಯು ಇತರ ನಗರ ಸಭೆಗಳಿಗೆ ಮಾಧರಿಯಾಗಿರಬೇಕು. ಸ್ವಚ್ಚ ಪುತ್ತೂರು ಸುಂದರ ಪುತ್ತೂರು ಕಲ್ಪಣೆಗೆ ಆಧ್ಯತೆ ನೀಡಿ ಸ್ವಚ್ಚಂದ ಪರಿಸರ ನಿರ್ಮಾಣಕ್ಕೆ ನಗರ ಸಭೆಯು ರೂ.81ಲಕ್ಷ ಅನುದಾನದಲ್ಲಿ 10 ವಾಹನಗಳನ್ನು ಖರೀದಿಸಿದ್ದು ಎಲ್ಲಾ ವಾರ್ಡ್‌ಗಳಲ್ಲಿ ಮನೆ ಬಾಗಿಲಿಗೆ ತೆರಳಿ ತ್ಯಾಜ್ಯ ವಿಲೇವಾರಿ ಮಾಡಲಿದೆ. ಅಂಗಡಿ ಮುಂಗ್ಗಟ್ಟುಗಳು, ಮನೆಯವರು ಸೇರಿದಂತೆ ಪ್ರತಿಯೊಬ್ಬ ಸಾರ್ವಜನಿಕರು ತಮ್ಮದು ಎಂಬ ಭಾವನೆಯಿಂದ ನಗರ ಸಭೆಯೊಂದಿಗೆ ಸಹಕರಿಸಿಬೇಕು. ತ್ಯಾಜ್ಯ ವಿಲೇವಾರಿಗೆ ನಗರ ಸಭೆಯ ಯೋಜನೆಯನ್ನು ಶೇ.100ರಷ್ಟು ಸದುಪಯೋಗ ಪಡಿಸಿಕೊಳ್ಳಬೇಕು. ಸಾರ್ವಜನಿಕರು ತ್ಯಾಜ್ಯವನ್ನು ಹಸಿಕಸ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಿದಾಗ ಶೇ.100 ಸ್ವಚ್ಚ ಪುತ್ತೂರು, ಸುಂದರ ಪುತ್ತೂರು ಕಲ್ಪಣೆಯು ಸಾಕಾರಗೊಳ್ಳಲಿದೆ. ತ್ಯಾಜ್ಯ ವಿಲೇವಾರಿ ಮಾಡುವ ವಾಹನವು ಸ್ವಚ್ಚವಾಗಿರಬೇಕು. ಇದಕ್ಕಾಗಿ ಚಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ವಾಹನವನ್ನು ತನ್ನ ಮನೆಯ ವಾಹನದಂತೆ ನಿರ್ವಹಣೆ ಮಾಡಬೇಕು. ಆಗ ನಿರಂತಯರವಾಗಿ ಸೇವೆ ನೀಡಲು ಸಾಧ್ಯ ಎಂದು ಹೇಳಿದರು.

ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ನಗರ ಸಭಾ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಅನುಷ್ಠಾನಗೊಂಡ 4.49 ಕೋಟಿಗಳಿ ಡಿಪಿಆರ್ ತಯಾರಿಸಿ ಅದರ ಆದಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಷೇರು ಮತ್ತು ನಗರ ಸಭಾ ಬಂಡವಾಳನ್ನು ಸೇರಿಸಿ 10 ವಾಹನ ಖರೀದಿಸಲಾಗಿದ್ದು ನಗರ ಸಭಾ ವ್ಯಾಪ್ತಿಯ ಪ್ರತಿ ಮನೆಗಳಿಗೆ ತೆರಳಿ ತ್ಯಾಜ್ಯ ನಿರ್ವಹಣೆ ಮಾಡಲಿದೆ ಎಂದರು.

ನಗರ ಸಭಾ ಸದಸ್ಯರಾದ ಜೀವಂಧರ್ ಜೈನ್, ಪಿ.ಜಿ ಜಗನ್ನಿವಾಸ ರಾವ್, ಶಿವರಾಮ ಸಪಲ್ಯ, ಗೌರಿ ಬನ್ನೂರು, ಸುಂದರ ಪೂಜಾರಿ ಬಡಾವು, ಮೋಹಿನಿ ವಿಶ್ವನಾಥ, ಶೀನಪ್ಪ ನಾಯ್ಕ, ಇಂದಿರ ಪುರುಷೋತ್ತಮ ಆಚಾರ್ಯ, ಮನೋಹರ್ ಕಲ್ಲಾರೆ, ಸಂತೋಷ್ ಕುಮಾರ್ ಬೊಳುವಾರು, ಪೂರ್ಣಿಮಾ, ಪ್ರೇಮಲತಾ ನಂದಿಲ, ಶಶಿಕಲಾ ಸಿ.ಎಸ್, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾಕಿರಣ್, ನಗರ ಸಭಾ ಅಧಿಕಾರಿ ಹಾಗೂ ಸಿಬಂದಿಗಳು, ಪೌರ ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೌರಾಯಕ್ತೆ ರೂಪಾ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.