ಕೋಡಿಂಬಾಡಿ ಪರನೀರಿನಲ್ಲಿ ಸರಕಾರಿ ಜಾಗ ಸ್ವಾಧೀನ ಪಡಿಸಿ ರಸ್ತೆ ನಿರ್ಮಾಣಕ್ಕೆ ಅಡ್ಡಿ

Puttur_Advt_NewsUnder_1
Puttur_Advt_NewsUnder_1
  • ರಸ್ತೆ ನಿರ್ಮಿಸಿಕೊಡುವಂತೆ ನಾಗರಿಕರಿಂದ ತಹಶೀಲ್ದಾರ್‌ಗೆ ಮನವಿ – ಪರಿಶೀಲಿಸಿ ಸೂಕ್ತ ಕ್ರಮ ತಹಶೀಲ್ದಾರ್ ಭರವಸೆ

ಪುತ್ತೂರು:ಕೋಡಿಂಬಾಡಿ ಗ್ರಾಮದ ಪರನೀರು ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಸರಕಾರಿ ಜಾಗವನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ನಮಗೆ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ರಸ್ತೆಯನ್ನು ನಿರ್ಮಿಸಿಕೊಡುವಂತೆ ಅಲ್ಲಿನ ೮ ಮನೆಗಳ ನಿವಾಸಿಗಳು ಆ.೩ರಂದು ತಹಶೀಲ್ದಾರ್ ರಮೇಶ್ ಬಾಬುರವರಿಗೆ ಮನವಿ ಮಾಡಿದರು.

ಎಂಟು ಮನೆಗಳಿರುವ ಪರನೀರು ನಿವಾಸಿಗಳಾದ ನಾವು ಕಳೆದ ೨೫ ವರ್ಷಗಳಿಂದ ತಮ್ಮ ಸ್ವಂತ ವಾಸ್ತವ್ಯ ಜಾಗಗಳಿಗೆ ತೆರಳಲು ರಸ್ತೆಯ ಸೌಲಭ್ಯವಿಲ್ಲದೆ ವಂಚಿತರಾಗಿದ್ದೇವೆ. ಪ್ರತಿ ದಿನ ಕಾಲುದಾರಿಯಲ್ಲಿಯೇ ಸಾಗಬೇಕಾಗಿದೆ. ನಮಗೆ ರಸ್ತೆ ನಿರ್ಮಾಣಕ್ಕೆ ಅವಕಾಶವಿರುವ ಸರಕಾರಿ ಭೂಮಿಯನ್ನು ಡೆಕ್ಕಾಜೆ ಕೊರಗು ಪೂಜಾರಿಯವರ ಪುತ್ರ ವೀರಪ್ಪ ಪೂಜಾರಿಯವರು ಅನಧಿಕೃತವಾಗಿ ಸ್ವಾಧೀನ ಪಡಿಸಿಕೊಂಡಿರುತ್ತಾರೆ. ರಸ್ತೆ ನಿರ್ಮಾಣಕ್ಕಾಗಿ ನಾವು ಹಲವಾರು ಭಾರಿ ಪ್ರಯತ್ನ ಪಟ್ಟಿದ್ದು ಅವರು ನಮಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಲ ನೀಡಿ ಅಡ್ಡಿ ಪಡಿಸುತ್ತಿದ್ದಾರೆ. ನಮಗೆ ರಸ್ತೆ ನಿರ್ಮಾಣಕ್ಕೆ ಬೇರೆ ಯಾವುದೇ ಅವಕಾಶಗಳಿಲ್ಲ. ಹೀಗಾಗಿ ನಾವು ಬೆಳೆಸಿದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವುದು, ರಾಸಾಯನಿಕ ಗೊಬ್ಬರ ಸಾಗಾಟ ಇತ್ಯಾದಿ ಮನೆಗಳಿಗೆ ಆವಶ್ಯವಿರುವ ಸಾಮಾನು ಸರಂಜಾಮುಗಳನ್ನು ೨ ಕೀ.ಮೀನಷ್ಟು ದೂರ ತಲೆಯಲ್ಲಿ ಹೊತ್ತು ಸಾಗಬೇಕಾದ ಅನಿವಾರ್ಯತೆಯಿದೆ. ಅಲ್ಲದೆ ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಸಾಗಬೇಕಾದ ಪರಿಸ್ಥಿತಿಯಿದೆ. ರಸ್ತೆ ಸೌಲಭ್ಯವಿಲ್ಲ ದೆ ಸಣ್ಣ ಪ್ರಮಾಣದ ರೈತರಾದ ನಮಗೆ ಕೃಷಿಗೆ ನೀರಾವರಿ ಸೌಲಭ್ಯಕ್ಕಾಗಿ ಕೊಳವೆ ಬಾವಿ ಕೊರೆಯಲು ಅಸಾಧ್ಯವಾಗಿದ್ದು ಕೃಷಿ ಭೂಮಿ ಒಣಗಿಹೋಗುವಂತಾಗಿದೆ.

ನಮ್ಮ ದಯನೀಯ ಪರಿಸ್ಥಿತಿಯ ಕುರಿತು ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಗೃಹ ಇಲಾಖೆ, ಶಾಸಕರು, ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂಧನೆ ದೊರೆತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕ್ರಮ:
ಮನವಿ ಸ್ವೀಕರಿಸಿ, ಸಮಸ್ಯೆಗಳನ್ನು ಆಳಿಸಿದ ತಹಶೀಲ್ದಾರ್ ರಮೇಶ್ ಬಾಬುರವರು, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಕಾರ್ಯದರ್ಶಿ ಇಬ್ರಾಹಿಂ ಕಲೀಲ್, ಪುಚ್ಚತ್ತಡ್ಕ, ಪರನೀರು ನಿವಾಸಿಗಳಾದ ಪದ್ಮಪ್ಪ ಪೂಜಾರಿ, ಶೀನಪ್ಪ ಪೂಜಾರಿ, ಉಗ್ಗಪ್ಪ ಪೂಜಾರಿ, ಹೊನ್ನಪ್ಪ ಪೂಜಾರಿ, ಧರ್ಣಪ್ಪ ಪೂಜಾರಿ, ಪದ್ಮನಾಭ ಆಚಾರ್ಯ ಮೊದಲಾದವರು ಮನವಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.