Breaking News

ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗ್ಗಡೆಯವರಿಂದ ಡಾ.ಉಮಾನಾಥ ಶೆಣೈರವರ ವೆಬ್‌ಸೈಟ್‌ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಧರ್ಮಸ್ಥಳ: ಪ್ರಸಿದ್ಧ ಇತಿಹಾಸ ಪ್ರೋಪೆಸರ್‌ ಉಮನಾಥ್‌ ಶೆಣೈಯವರ ಕುರಿತಾದ ನೂತನ ವೆಬ್‌ಸೈಟ್(www.umanathashenoy.com)ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗ್ಗಡೆಯವರು ಜು.31ರಂದು ಧರ್ಮಸ್ಥಳದ ಬೀಡಿನಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದಡಾ ಹೆಗ್ಗಡೆಯವರು, ಐತಿಹಾಸಿಕ ಪುರಾವೆ ಹಾಗೂ ಹಿನ್ನಲೆಯನ್ನು ತಿಳಿಸುವ ಮಾಹಿತಿಯನ್ನು ಡಿಜಿಟಲೀಕರಣದ ಮೂಲಕ ಡಾಂಕ್ಯುಮೆಂಟೇಶನ್ ಮಾಡುತ್ತಿರುವುದು ಉತ್ತಮಕಾರ್‍ಯ. ಇಂತಹ ದಾಖಲೀಕರಣ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಬಲ್ಲದು. ಸಂಶೋಧನೆ ಎಂಬುದು ಎಂದೂ ನಿವೃತ್ತಿ ಇಲ್ಲದ ಕೆಲಸ. ಅದರಿಂದ ಜೀವನದಲ್ಲಿ ಪಕ್ವತೆ ಹೆಚ್ಚಲು ಸಾದ್ಯ. ಇದಕ್ಕೇ ಸಾಕ್ಷಿ ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರು ಸಾಕ್ಷಿ ಎಂದು ಪತ್ರಿಕೆಯಲ್ಲಿ ಓದಿದ ನೆನಪು ಎಂದು ತಿಳಿಸಿದರು. ಐತಿಹಾಸಿಕ ದಾಖಲೆಗಳ ಅಧ್ಯಯನ ಇನ್ನೂ ಉನ್ನತ ಮಟ್ಟದಲ್ಲಿ ಮುಂದು ವರೆಯಲಿ ಎಂದು ಶುಭ ಹಾರೈಸಿದರು. ಈ ಕಾರ್‍ಯಕ್ರಮದಲ್ಲಿ ಶಣೈಯವರ ಧರ್ಮಪತ್ನಿ ವಿಜಯಾಕುಮಾರಿ( ನಿವೃತ್ತಕೆ.ಎ.ಎಸ್ ಅಧಿಕಾರಿ ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಆಂಗ್ಲ ಉಪನ್ಯಾಸಕ ರವಿ ಶೆಣೈ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.