Breaking News

ವಿರೋಧ ಪಕ್ಷದಿಂದ ಕೊರೋನಾ ರಾಜಕೀಯ – ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ -19ಗೆ ಸಂಬಂಧಿಸಿ ಲಾಕ್‌ಡೌನ್ ಆದ ಬಳಿಕ ತಮ್ಮ ಇಲಾಖೆಯಿಂದ ಖರೀದಿ, ಕೆಲಸಗಳ ಕುರಿತು ಪತ್ರಿಕೆಗಳಲ್ಲಿ ಪಾರದರ್ಶಕವಾಗಿ ಸರಕಾರದ 5 ಮಂದಿ ಸಚಿವರು ಪತ್ರಿಕೆಗಳ ಮುಂದಿಟ್ಟಿದ್ದಾರೆ. ಆದರೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊರೋನಾ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಮಿನಿ ವಿಧಾನ ಸೌಧದಲ್ಲಿ ಶಾಸಕರ ಕಚೇರಿಯಲ್ಲಿ ಪತ್ರಿಕಾ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಕೊವೀಡ್ ಕುರಿತು ಮುಖ್ಯಮಂತ್ರಿಗಳು ಕೂಡಾ ಏನೆನು ಆಗಿದೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಆದರೆ ಇವತ್ತು ರಾಜಕೀಯ ಉದ್ದೇಶವೋ ದುರುದ್ದೇಶವೋ ಗೊತ್ತಿಲ್ಲ. ವಿಪಕ್ಷದವರಿಗೆ ವಿರೋಧ ಮಾಡುವುದು ಒಂದೇ ಒದ್ದೇಶ ಬಹುಶಃ ಈ ಸಂದರ್ಭದಲ್ಲಿ ಯಾವುದೇ ಆರೋಪ ಮಾಡಲು ಕಾರಣ ಇಲ್ಲದ ಕಾರಣ ಕೊರೋನಾ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅವರಿಗೆ ಅಧಿಕೃತ ಲೆಕ್ಕ ಬೇಕಾದರೆ ಸರಕಾರದಲ್ಲಿ ಇದೆ. ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಲೆಕ್ಕ ಕೊಡುತ್ತಾರೆ. ಸಾರ್ವಜನಿಕವಾಗಿ ಪತ್ರಿಕೆಗಳ ಮೂಲಕ ಲೆಕ್ಕ ಕೊಡಿ ಎಂದು ಹೇಳುವುದು ಇದು ರಾಜಕೀಯ ಪ್ರೇರಿತವಾದ ಕೆಲಸ ಎಂದು ಅವರು ಹೇಳಿದ ಅವರು ನಾನು ಕಂಡುಕೊಂಡಂತೆ ಎಲ್ಲವೂ ಪಾರದರ್ಶಕವಾಗಿ ಇದೆ. ಕೋವಿಡ್ ಏನೆನು ನಿಯಮ ಇದೆಯೋ ಅದರ ಅಡಿಯಲ್ಲೇ ಕೆಲಸ ಆಗುತ್ತಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.