ಐತ್ತೂರು, ಕೊಂಬಾರು, ಬಿಳಿನೆಲೆ ಗ್ರಾ.ಪಂ ಕೊರೋನಾ ಕಾರ್ಯಪಡೆ ಸಭೆ| ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಿ, ಆರೋಗ್ಯದ ಕಡೆ ಗಮನ ಕೊಡಿ-ತಹಶೀಲ್ದಾರ್ ಜಾನ್‌ಪ್ರಕಾಶ್

Puttur_Advt_NewsUnder_1
Puttur_Advt_NewsUnder_1

ಕಡಬ: ಐತ್ತೂರು, ಕೊಂಬಾರು ಹಾಗೂ ಬಿಳಿನೆಲೆ ಗ್ರಾ.ಪಂ ಮಟ್ಟದ ಕೋವಿಡ್-೧೯ ಕೊರೋನಾ ಕಾರ್ಯಪಡೆ ಸಭೆ ಐತ್ತೂರು ಗ್ರಾ.ಪಂ.ನ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಬ ತಾಲೂಕು ತಹಶೀಲ್ದಾರ್ ಜಾನ್‌ಪ್ರಕಾಶ್ ರಾಡ್ರಿಗಸ್‌ರವರು ಕೊರೋನಾವನ್ನು ತಡೆಗಟ್ಟಲು ವಾರಿಯರ್‍ಸ್ ತಂಡದಿಂದ ಸತತ ಪ್ರಯತ್ನ ನಡೆಯುತ್ತಿದೆ, ಪ್ರತಿಯೊಬ್ಬರೂ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದು ಹೇಳಿದರು.

ಜಿ.ಪಂ ಸದಸ್ಯ ಪಿ.ಪಿ ವರ್ಗಿಸ್ ಮಾತನಾಡಿ ಕೊರೋನಾ ಜತೆಗೆ ಡೆಂಗ್ಯೂ, ಮಲೇರಿಯಾ ಬಗ್ಗೆಯೂ ಜನತೆ ಜಾಗೃತಿ ವಹಿಸಬೇಕಾಗಿದೆ ಎಂದು ಹೇಳಿದರು.ತಾ.ಪಂ ಸದಸ್ಯರಾದ ಪಿ.ವೈ ಕುಸುಮ, ಗಣೇಶ್ ಗೌಡ ಕೈಕುರೆ, ಬಿಳಿನೆಲೆ ಗ್ರಾ.ಪಂ ಆಡಳಿತಾಧಿಕಾರಿ ಭರತ್ ಬಿ.ಎಂ, ಐತ್ತೂರು ಗ್ರಾ.ಪಂ ಮಾಜಿ ಸದಸ್ಯರಾದ ಇಸ್ಮಾಯಿಲ್ ಯಂ.ಯಚ್, ಯೂಸುಫ್ ಎಂ.ಪಿ, ನಸೀರಾ ಸಿ.ಕೆ ಉಪಸ್ಥಿತರಿದ್ದರು. ಐತ್ತೂರು ಗ್ರಾ.ಪಂ ಆಡಳಿತಾಧಿಕಾರಿ ಹೊನ್ನಪ್ಪ ಗೌಡ, ಕಡಬ ಕಂದಾಯ ನಿರೀಕ್ಷಕ ಅವೀನ್ ರಂಗತ್ತಮಲೆ, ಆಲಂಕಾರು ವಿ.ಎ ರಮೇಶ್ ಮಾಹಿತಿ ನೀಡಿದರು. ಬಿಳಿನೆಲೆ ಗ್ರಾ.ಪಂ ಮಾಜಿ ಅಧ್ಯಕ್ಷ ಶಾರದಾ ದಿನೇಶ್, ಕೊಂಬಾರು ಗ್ರಾ.ಪಂ ಪಿಡಿಒ ರಾಘವೇಂದ್ರ ಗೌಡ, ಶಿರಿಬಾಗಿಲು ಕೈಕಂಬ ಕಿ.ಆ.ಸಹಾಯಕಿ ವಿಜಯ ಸುಂಕದಕಟ್ಟೆ, ಕಿ.ಆ.ಸಹಾಯಕಿ ಉಷಾ, ಬಿಳಿನೆಲೆ ಕಿ.,ಆ.ಸಹಾಯಕಿ ಮಾಲತಿ ವಿವಿಧ ವಿಚಾರಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಬಿಳಿನೆಲೆ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಚೆರಿಯನ್, ಮಾಜಿ ಸದಸ್ಯ ಸತೀಶ್ ಕಳಿಗೆ, ಐತ್ತೂರು ಗ್ರಾಮ ಕರಣಿಕ ಶ್ರೀರಾಜ್, ಬ್ಲಾಕ್ ಸೊಸೈಟಿ ಪ್ರತಿನಿಧಿ ಸುಶೀಲ, ಸ್ತ್ರೀಶಕ್ತಿ ಪ್ರತಿನಿಧಿ ಧನ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಸುಶೀಲ, ಜಯಲಕ್ಷ್ಮೀ, ಸರಸ್ವತಿ, ದೇವಕಿ, ಲಿಂಗಮ್ಮ, ಶರ್ಲಿ, ರಾಧಾ, ಕಮಲಾಕ್ಷಿ, ಕವಿತಾ, ವನಜಾಕ್ಷಿ, ಪಾರ್ವತಿ, ಗೀತಾ, ಜೆಮಿನಿ, ವೀಣಾ, ವಿಜಯಕುಮಾರ್, ಚಿದಾನಂದ ಗೌಡ, ಸುಮತಿ, ಜಯಂತಿ, ತುಕರಾಮ ಗೌಡ, ಲೋಕನಾಥ್, ಅಶ್ವಿನಿ, ಆಶಾ ಕಾರ್ಯಕರ್ತೆಯರಾದ ಶ್ಯಾಮಲಾ, ಗಂಗಮ್ಮ, ಭವಾನಿ, ಯಮುನಾ, ದಿವ್ಯ, ಶೋಭಾ, ಉಮಾವತಿ, ಸುನಿತಾ, ಸೇವಾ ದೀಕ್ಷಿತ್, ಸರೋಜಿನಿ ಉಪಸ್ಥಿತರಿದ್ದರು. ಐತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ ಕೊಂಬಾರು ಗ್ರಾಮ ಕರಣಿಕ ರಂಜನ್ ವಂದಿಸಿದರು.

ಸಮಸ್ಯೆಯಲ್ಲಿ ರೈಲ್ವೆ ಸಿಬ್ಬಂದಿಗಳು: ಸಿರಿಬಾಗಿಲು ಗ್ರಾಮದ ರೈಲ್ವೆ ಸ್ಟೇಶನ್‌ನ ವಸತಿ ಗೃಹದಲ್ಲಿರುವ ರೈಲ್ವೆ ಸಿಬ್ಬಂದಿಗಳಿಗೆ ಮೂಲಸೌಕರ್ಯ ಇಲ್ಲದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೊಂಬಾರು ಪಿ.ಡಿ.ಓ ರಾಘವೇಂದ್ರ ಗೌಡರವರು ಮಾತನಾಡಿ ಕೊಂಬಾರು ಗ್ರಾ.ಪಂನ ಹಾಗೂ ಸಿರಿಬಾಗಿಲು ಗ್ರಾಮದ ಗಡಿಭಾಗದಲ್ಲಿರುವ ರೈಲ್ವೆ ಸ್ಟೇಶನ್ ಸಿಬ್ಬಂದಿಗಳಿಗೆ ಯಾವುದೇ ಮೂಲ ಸೌಕರ್ಯವಿಲ್ಲದೇ ವಿವಿಧ ರೋಗ ಹರಡುವ ಭೀತಿಯಿದ್ದು ತಾವು ಗ್ರಾ.ಪಂನ ಕೊರೋನಾ ಕಾರ್‍ಯಪಡೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ೧೭ ಜನ ಸಿಬ್ಬಂದಿಗಳು ವಾಸ್ತವ್ಯವಿರುವ ಈ ರೈಲ್ವೆ ಕ್ವಾಟ್ರಸ್‌ನಲ್ಲಿ ಸ್ನಾನಗೃಹ, ಶೌಚಾಲಯವಿರುವುದಿಲ್ಲ. ಸ್ನಾನಕ್ಕೆ, ಕುಡಿಯಲು ನೀರಿನ ಸಮಸ್ಯೆ ಇದೆ. ಅಲ್ಲಿ ಪರಿಶೀಲನೆ ನಡೆಸಿದಾಗ ಓರ್ವರಿಗೆ ಜ್ವರ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಸ್ಟೇಶನ್ ಮಾಸ್ಟರ್‌ರನ್ನು ಸಂಪರ್ಕಿಸಿದಾಗ ಸ್ಪಂದನೆ ದೊರಕಿಲ್ಲ. ಈ ಬಗ್ಗೆ ಗ್ರಾ.ಪಂ ಅಧಿಕಾರಿಗಳಿಗೆ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ರೈಲ್ವೆ ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. ಈ ಬಗ್ಗೆ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ತಹಶೀಲ್ದಾರ್ ಜಾನ್ ಪ್ರಕಾಶ್ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.