ಕರೈ: ಗಾಳಿ – ಮಳೆಗೆ ರಸ್ತೆಗುರುಳಿದ ಮರಗಳು- ವಿದ್ಯುತ್ ಕಂಬಕ್ಕೆ ಹಾನಿ| ಕೆಲಹೊತ್ತು ಸಂಚಾರ ಸ್ಥಗಿತ

Puttur_Advt_NewsUnder_1
Puttur_Advt_NewsUnder_1
  • ನಾಗರೀಕರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮರಗಳ ತೆರವು

ವಿಟ್ಲ: ಮುಂಜಾನೆಯಿಂದ ಬೀಸುತ್ತಿದ್ದ ಭಾರೀ ಗಾಳಿ ಮಳೆಗೆ ಹಲವಾರು ಬೃಹದಾಕಾರದ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಲವು ಹೊತ್ತು ರಸ್ತೆ ಸಂಚಾರಕ್ಕೆ ತೊಡಕಾದ ಘಟನೆ ಕೊಳ್ನಾಡು ಗ್ರಾಮದ  ಕರೈ ಎಂಬಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಸ್ಥಳಕ್ಕಾಗಮಿಸಿ, ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ, ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರವನ್ನು ತುಂಡರಿಸಿ ತೆಗೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಾಗರಿಕರು ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವ ಮೂಲಕ ಮರತೆರವುಗೊಳಿಸಿದರು.

ಸಾಮಾಜಿಕ ಕಾರ್ಯಕರ್ತ ಎಚ್,ಎಂ ಖಾಲೀದ್ ಕೊಳ್ನಾಡು,ಅರೀಪ್ ಕರೈ,ಅಸೀಪ್ ಕರೈ, ಕರೀಂಬುರಾಕ್,ಸಂಶುದ್ದೀನ್,ಮುಸ್ತಫಾ,ರಝಕ್,ಅಸೀಕ್,ಹಾರೀಶ್,ನಬಾಸ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಘಟನೆಯಿಂದಾಗಿ  ಕೆಲ ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ‌. ಸ್ಥಳಕ್ಕೆ ಮೆಸ್ಕಾಂ ಶಾಖಾ ಅಧಿಕಾರಿ ಪ್ರಸನ್ನ ಸಕಾಲದಲ್ಲಿ ಬೇಟಿ ನೀಡಿ ರಸ್ತೆ ತೆರವುಗೊಳಿಸಲು ಮಾರ್ಗದರ್ಶನ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.