Breaking News

ನೂಜಿಬಾಳ್ತಿಲ: ಅಯೋಧ್ಯೆಗೆ ತೆರಳಿದ ಕರಸೇವಕರಿಗೆ ಸನ್ಮಾನ ಕಾರ್‍ಯಕ್ರಮ

Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ; ಅಯೋದ್ಯೇಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಭೂಮಿಪೂಜೆ ಆ.5ರಂದು ನಡೆಯುತ್ತಿರುವಾಗಲೇ ೧೯೯೨-೯೨ ರಲ್ಲಿ ಅಯೋಧ್ಯೆಗೆ ಕರಸೇವೆಗೆ ತೆರಳಿದ್ದ ನೂಜಿಬಾಳ್ತಿಲ -ರೆಂಜಿಲಾಡಿಯ ಕರಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಪಿ ಗಿರೀಶ್ ರವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಸತೀಶ್ ನಾಯಕ್ ಕಡಬ ಅವರು ಕರಸೇವಕರನ್ನು ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.

ರಾಮಚಂದ್ರ ಗೌಡ ಸಾಂತ್ಯಡ್ಕ, ಚಂದ್ರಶೇಖರ ಶೆಟ್ಟಿ ಕೂರಾಟ, ಸುದರ್ಶನ್ ಜೈನ್ ಹೊಸಮನೆ, ಹಾಗೂ ದಿ. ತಿಮ್ಮಪ್ಪ ಗೌಡರ ಪರವಾಗಿ ಅವರ ಪುತ್ರ ವಿಘ್ನೇಶ್ ಕೆಳಗಿನಪುದ್ದೋಟು ಅವರನ್ನು ನೂಜಿಬಾಳ್ತಿಲದಲ್ಲಿ ಸನ್ಮಾನಿಸದರೆ, ಹಿರಿಯರಾದ ಹರಿಶ್ಚಂದ್ರ ಶೆಟ್ಟಿ ಕೂರಾಟರವರನ್ನು ಅವರ ಮನೆಗೆ ತೆರಳಿ  ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಿ. ಹರಿಕಾಚಿಂತಾಯ ನೂಜಿ, ಶ್ಯಾಮ್ ಪ್ರಸಾದ್ ರೈ ಪದಕ, ಜಗತ್ಪಾಲ್ ಜೈನ್ ಹೆಟ್ಟೋಳಿಗೆರವರನ್ನು ಸ್ಮರಸಿ ಗೌರವ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಸದಸ್ಯರಾದ ಚಂದ್ರಶೇಖರ ಗೌಡ ಹಳೆನೂಜಿ, ಉಮೇಶ್ ಶೆಟ್ಟಿ ಸಾಯಿರಾಂ, ಕಡಬ ಸಿ.ಎ ಬ್ಯಾಂಕ್ ನಿರ್ದೇಶಕ ಹರಿಶ್ಚಂದ್ರ ಪೂಜಾರಿ ಪಲೆಯಮಜಲು, ಪ್ರಮುಖರಾದ ಮೋನಪ್ಪ ಗೌಡ ಅರಿಮಜಲು, ಕಿಟ್ಟು ಕಲ್ಲುಗುಡ್ಡೆ, ಅನಿಲ್ ಕುಮಾರ್ ಕೇರ್ನಡ್ಕ, ಜಯಕುಮಾರ್ ಜೈ ಭಗವಾನ್ ಕಲ್ಲುಗುಡ್ಡೆ, ದುರ್ಗಾಪ್ರಸಾದ್ ಕೆ.ಪಿ, ಹರೀಶ್ ನಡುವಳಿಕೆ, ಲತೀಶ್ ಕಂಪ, ಕುಶಾಲಪ್ಪ ಗೌಡ ನಡುವಳಿಕೆ, ರವಿಪ್ರಸಾದ್ ಕರೆಂಬಿಲ, ಪ್ರಭಾಕರ ಗೌಡ ಪದಕ, ಲಿಂಗಪ್ಪ ಗೌಡ ಕನದಬಾಗಿಲು, ರವೀಂದ್ರ ನಿಡ್ಡೋ, ರಾಘುರಾಜ್ ಕೇರ್ನಡ್ಕ, ಹರೀಶ್ ಅಡೆಂಜ, ಮನುಪ್ರಸಾದ್ ಕೇರ್ನಡ್ಕ, ಬಾಲಚಂದ್ರ ಕೇರ್ನಡ್ಕ, ಮಹೇಶ್ ಪಲೆತ್ತಾಡಿ, ಗಿರೀಶ್ ಪಲೆಮಜಲು, ಪದ್ಮನಾಭ ಕೇಪುಂಜ, ಕಿಶೋರ್ ಪಾದೆ, ಜಯಪ್ರಕಾಶ್ ಶಾಂತಿಗುರಿ. ಮೊದಲದವರು ಉಪಸ್ಥಿತರಿದ್ದರು, ಹರ್ಷಿತ್ ನಡುವಳಿಕೆ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.