ಅಯೋಧ್ಯೆ ಕರಸೇವೆಯಲ್ಲಿ ಪಾಲ್ಗೊಂಡ ಜನೇಶ್ ಭಟ್ ರವರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕೆಂದು ನಡೆದ ಹೋರಾಟ, ಧರಣಿ, ಜಾಗೃತಿ, ರಥಯಾತ್ರೆಯಲ್ಲಿ ಭಾಗವಹಿಸುವುದರ ಮೂಲಕ ಅಯೋಧ್ಯೆಯಲ್ಲಿ ಕರಸೇವೆಯಲ್ಲಿಯೂ ಭಾಗವಹಿಸಿ, ಕುದ್ಮಾರು ಗ್ರಾಮದಲ್ಲಿ ಮನೆ ಮನೆಗೆ ತನ್ನ ತಂಡದೊಂದಿಗೆ ತೆರಳಿ ಶ್ರೀ ರಾಮಜನ್ಮ ಭೂಮಿಯ ಮಹತ್ವವನ್ನು ಇಡೀ ಗ್ರಾಮಕ್ಕೆ ಜಾಗೃತಿ ಮೂಡಿಸಿರುವ ಕುದ್ಮಾರು ಗ್ರಾಮದ ಬರೆಪ್ಪಾಡಿ ಜನೇಶ್ ಭಟ್ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಭೂಮಿ ಪೂಜೆಯ ದಿವಸದಂದೇ ಜನೇಶ್ ಭಟ್ ಅವರ ಮನೆಯಲ್ಲಿ ಆ.5ರಂದು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕುದ್ಮಾರು ಶ್ರೀ ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷರಾದ ದೇವರಾಜ ನೂಜಿ, ಕಾರ್ಯದರ್ಶಿ ಪದ್ಮನಾಭ ಕೆರೆನಾರು, ಉಮೇಶ್ ಕೆರೆನಾರು, ಶಿವಾನಂದ ಕೆಡೆಂಜಿಕಟ್ಟ, ಚಿದಾನಂದ ಕೆರೆನಾರು, ಧನಂಜಯ ಬರೆಪ್ಪಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.