ಟೆರೇಸ್ ಕೃಷಿ ಮಾಹಿತಿ, ಬ್ರಿಜಿಡ್ ಕಾನ್ವೆಂಟ್‌ನಲ್ಲಿ ಅನುಷ್ಠಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನೆಯ ಟೆರೇಸ್‌ನಲ್ಲಿ ತರಕಾರಿ ಅಥವಾ ಹಣ್ಣು ಹಂಪಲುಗಳ ಕೃಷಿ ಹೇಗೆ ಮಾಡಬಹುದು ಎಂದು ಕಲ್ಲಿಮಾರಿನಲ್ಲಿರುವ ನಿವಾಸಿ ಪ್ರಫುಲ್ಲರವರ ಮನೆಯಲ್ಲಿ ಟೆರೇಸ್ ಕೃಷಿ ಕುರಿತು ರೋಟರಿ ಸ್ವರ್ಣದ ಪದಾಧಿಕಾರಿಗಳು ಹಾಗೂ ಸದಸ್ಯರು ಮಾಹಿತಿ ಪಡೆದು, ಬಳಿಕ ಅದನ್ನು ಸಂತ ಬ್ರಿಜಿಡ್ ಕಾನ್ವೆಂಟ್‌ನಲ್ಲಿ ಹೇಗೆ ಅನುಷ್ಠಾನಗೊಳಿಸುವುದು ಎಂಬುದರ ಬಗ್ಗೆ ಕಾರ್ಯಕ್ರಮವು ಆ.೨ ರಂದು ನಡೆಯಿತು.

ಪ್ರಫುಲ್ಲರವರ ಮನೆಯ ಟೆರೇಸ್‌ನಲ್ಲಿ ಸಪೋಟ, ದ್ರಾಕ್ಷಿ, ಡ್ರಾಗನ್ ಫ್ರುಟ್, ತರಕಾರಿ ಗಿಡಗಳು, ರಾಮ ಫಲ, ಲಕ್ಷ್ಮಣ ಫಲ ಹಾಗೂ ಇತರ ಸಸಿಗಳನ್ನು ನೆಟ್ಟು ಅದರ ಫಲ ಪಡೆಯುತ್ತಿರುವ ಬಗ್ಗೆ ರೋಟರಿ ಸ್ವರ್ಣದ ಸದಸ್ಯರಿಗೆ ಪ್ರಫುಲ್ಲರವರು ಮಾಹಿತಿ ನೀಡಿದರು. ಬಳಿಕ ಸಂತ ಬ್ರಿಜಿಡ್ ಕಾನ್ವೆಂಟ್‌ಗೆ ತೆರಳಿ ಕಾನ್ವೆಂಟ್‌ನ ಟೆರೇಸ್ ಮೇಲೆ ಮೇಲೆ ತಿಳಿಸಲಾದ ಹಣ್ಣುಹಂಪಲುಗಳ ಮತ್ತು ತರಕಾರಿಗಳ ಕೃಷಿಯನ್ನು ಅನುಷ್ಠಾನಗೊಳಿಸಲಾಯಿತು.

ಮಾಯಿದೆ ದೇವುಸ್ ಚರ್ಚ್‌ನ ನೂತನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಆಶೀರ್ವಚನ ನೀಡಿ ಚಾಲನೆ ಶುಭಹಾರೈಸಿದರು. ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ರೋಟರಿ ಸ್ವರ್ಣ ಅಧ್ಯಕ್ಷೆ ಸೆನೋರಿಟ ಆನಂದ್, ಕಾರ್ಯದರ್ಶಿ ಆಶಾ ರೆಬೆಲ್ಲೋ, ವಲಯ ಸೇನಾನಿ ಮನೋಹರ್ ಕುಮಾರ್, ನಿಯೋಜಿತ ಆಧ್ಯಕ್ಷ ಭಾಸ್ಕರ ಕೋಡಿಂಬಾಳ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ನಿರ್ದೇಶಕ ಸುಂದರ್ ರೈ, ಪೋಲಿಯೋ ನಿರ್ದೇಶಕ ವಿಜಯ್ ಡಿ’ಸೋಜ, ಬ್ರಿಜಿಡ್ ಕಾನ್ವೆಂಟ್‌ನ ಸುಪೀರಿಯರ್ ಸಿಸ್ಟರ್ ಜಾನೆಟ್, ಸಿಸ್ಟರ್ ಸೆರ್ವಿನ್, ಸಿಸ್ಟರ್ ಲೋರಾ, ಬೆಥನಿ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಆಗ್ನೇಸ್ ಫ್ರ್ಯಾಂಕ್, ಲಿಟ್ಲ್ ಫ್ಲವರ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರಶಾಂತಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಮೋಲಿ ಫೆರ್ನಾಂಡೀಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.