ವೀರಾಂಜನೇಯ ದೇವಾಲಯದಲ್ಲಿ ಶ್ರೀ ರಾಮಸಂಕೀರ್ತನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದ ದಿನವಾದ ಆ.೫ರಂದು ಉಪ್ಪಿನಂಗಡಿಯ ಶ್ರೀ ವನಭೋಜನ ವೀರಾಂಜನೇಯ ದೇವಸ್ಥಾನದಲ್ಲಿ ಶ್ರೀ ರಾಮ ಸಂಕೀರ್ತನೆ ಹಾಗೂ ವಿಶೇಷ ಪೂಜೆ ನಡೆಯಿತು. ಈ ಸಂದರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು ಭಾಗವಹಿಸಿ, ಪ್ರಸಾದ ಪಡೆದರು.

ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ವೀರಾಂಜನೇಯ ದೇವರನ್ನು ಇಂದು ಸಿಂಧೂರ ಅಲಂಕಾರ ಮಾಡಿ ಪೂಜಿಸಲಾಯಿತು. ಶ್ರೀ ಲಕ್ಷ್ಮೀವೆಂಕಟ್ರಮಣ ಭಜನಾ ಮಂಡಳಿ ಸದಸ್ಯರು ಶ್ರೀ ರಾಮ ಸಂಕೀರ್ತನೆಯನ್ನು ಹಾಡಿದರು. ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದಲ್ಲಿ ಶ್ರೀ ದೇವರುಗಳಿಗೆ ಸ್ವರ್ಣಾಭರಣ ಹಾಗೂ ಸೀತಾ ದೇವಿಯ ಅಲಂಕಾರ ಮಾಡಿ, ಪೂಜಿಸಲಾಯಿತು.

ಈ ಸಂದರ್ಭ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಆಡಳಿತ ಮೊಕ್ತೇಸರ ಬೇಕಲ ಗಣೇಶ್ ಶೆಣೈ, ಮೊಕ್ತೇಸರ ಯು. ನಾಗರಾಜ್ ಭಟ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಬಿಜೆಪಿ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಆನಂದ ಕುಂಟಿನಿ, ರೈತ ಮೋರ್ಚಾ ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ತಾ.ಪಂ. ಸದಸ್ಯರಾದ ಮುಕುಂದ ಗೌಡ ಬಜತ್ತೂರು, ಸುಜಾತಕೃಷ್ಣ ಆಚಾರ್ಯ, ರಮೇಶ್ ಭಂಡಾರಿ, ಭಜನಾ ಮಂಡಳಿಯ ಹರೀಶ್ ಪೈ, ಸತೀಶ್ ಕಿಣಿ ಕೆ., ರಾಜೇಶ್ ಪ್ರಭು, ದಾಮೋದರ ಪ್ರಭು, ಕೇದರನಾಥ ಶೆಣೈ, ವಿನಾಯಕ ಪ್ರಭು, ಮಂಜುನಾಥ್ ನಾಯಕ್, ಗಣೇಶ್ ಭಟ್, ಶಾಂತರಾಮ ಭಟ್, ಶ್ರೀನಿವಾಸ್ ಭಟ್, ಶ್ರೀ ದೇವಾಲಯದ ವ್ಯವಸ್ಥಾಪಕರಾದ ರಾಮಕೃಷ್ಣ ಪ್ರಭು, ಶ್ರೀನಿವಾಸ ಭಟ್ ಉಪಸ್ಥಿತರಿದ್ದರು. ಅರ್ಚಕರಾದ ರವೀಂದ್ರ ಭಟ್ ಹಾಗೂ ಸಂದೀಪ್ ಭಟ್ ಪೂಜೆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.