Breaking News

ಕಡಬ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ಕಡಬದಲ್ಲಿ ಭಜನೆ,-ಕರಸೇವಕರಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ವಿ.ಹಿಂ.ಪ ವತಿಯಿಂದ ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ಕಡಬ ಸಿ.ಎ ಬ್ಯಾಂಕ್ ಆವರಣದಲ್ಲಿ ಕಾರ್ಯಕ್ರಮ ದ ನೇರಪ್ರಸಾರ ಹಾಗೂ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ದಲ್ಲಿ ದುರ್ಗಾಂಬಿಕಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕೃಷ್ಣ ಶೆಟ್ಟಿ ಕಡಬ, ಸತೀಶ್ ನಾಯಕ್, ಕರಸೇವಕರಾದ ರಘು ನೆಟ್ಟಣ,ಸುರೇಶ್ ಕೂಡೂರು,ನಾರಾಯಣ ಪೂಜಾರಿ,ಸೀತಾರಾಮ ಮಾಯಿಪ್ಪಾಜೆ ಅವರುಗಳು ತಮ್ಮ ಕರಸೇವೆಯ ಅನುಭವ ಹಂಚಿಕೊಂಡರು. ಸ್ವಯಂ ಸೇವಕ ಸಂಘದ ರಾಮಚಂದ್ರ ಟೈಲರ್ ಅವರು ಶ್ರೀ ರಾಮ ತಾರಕ ಮಂತ್ರ ವಾಚಿಸಿದರು. ಈ ಸಂದರ್ಭದಲ್ಲಿ ವಿ.ಹಿಂ.ಪ.ಗೌರವಾಧ್ಯಕ್ಷ ಜನಾರ್ದನ ರಾವ್, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಗೌಡ ಕೊಲ್ಲೆಸಾಗು ವಂದಿಸಿದರು, ಮೂಲಚಂದ್ರ ಕಾಂಚನ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.