ಕಡಬ: ಅಕ್ರಮ ಪಿಸ್ತೂಲ್ ಹೊಂದಿದ ವ್ಯಕ್ತಿಯ ಬಂಧನ, ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಪರವಾನಿಗೆ ಇಲ್ಲದ ಪಿಸ್ತೂಲ್ ಹೊಂದಿದ ವ್ಯಕ್ತಿಯ ಮನೆಗೆ ದಾಳಿ ನಡೆಸಿದ ಕಡಬ ಪೊಲೀಸರು, ಆತನನ್ನು ಬಂದಿಸಿ ಪಿಸ್ತೂಲ್ ವಶಪಡಿಸಿಕೊಂಡ ಘಟನೆ ಆ.5 ರಂದು ನಡೆದಿದೆ.

ಕಡಬ ಗ್ರಾಮದ ಪಾಲೋಲಿ ನಿವಾಸಿ ಜನಾರ್ಧನ್ ಗೌಡ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ನಕಲಿ ಪಿಸ್ತೂಲ್ ಹೊಂದಿರುವ ಬಗ್ಗೆ ಖಚಿತ ಮಾಹಿತಿಯಂತೆ ಕಡಬ ಪೊಲೀಸರು ದಾಳಿ ನಡೆಸಿ ಆರೋಪಿ ಜನಾರ್ದನ ಗೌಡ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ, ಈ ವೇಳೆ ಅವರಲ್ಲಿದ್ದ ಎರಡು ನಕಲಿ ಪಿಸ್ತೂಲ್, ಎರಡು ಖಾಲಿ ತೋಟೆ, ರಂಜಕ,ಪೊಟಾಷಿಯಂ,ಕೇಪುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಅಕ್ರಮವಾಗಿ ಶಸ್ತ್ರಾಸ್ತ್ರ ಗಳನ್ನು ಶೇಖರಿಸಿ ಇಟ್ಟುಕೊಳ್ಳುವುದು ಅಪರಾಧವಾಗಿರುವ ಹಿನ್ನೆಲೆಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಿರಿಯ ಅಧಿಕಾರಿಗಳ ಸಲಹೆಯಂತೆ ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ರುಕ್ಮಾ ನಾಯ್ಕ್ ಹಾಗೂ ಎ.ಎಸ್.ಐ ಚಿದಾನಂದ ರೈ, ಎಚ್.ಸಿ ಗಳಾದ ಸ್ಕರಿಯ,ಪಿಸಿ ಭವಿತ್ ರೈ, ಶ್ರೀಶೈಲ್, ಮಹೇಶ್ ಜೀಪು ಚಾಲಕ ಕನಕರಾಜ್ ರವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.