ವಿಕಲಚೇತನ ನೌಕರರ ಸಂಘದ ದ.ಕ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ಪ ರಾಥೋಡ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ/ಅರೆ ಸರಕಾರಿ ವಿಕಲಚೇತನರ ನೌಕರರ ಸಂಘ ಬೆಂಗಳೂರು ಇದರ ದ.ಕ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ಪ ರಾಥೋಡ್ ಆಯ್ಕೆಯಾಗಿದ್ದಾರೆ.

 

ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಗಡಿ ಚಿಲವಾಡಗಿ ಅವರು ಈ ನೇಮಕಾತಿ ಮಾಡಿರುತ್ತಾರೆ. ಶಿವಪ್ಪ ರಾಥೋಡ್ ಅವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರಾಗಿ ಕರ್ತವ್ಯದಲ್ಲಿದ್ದಾರೆ. ಪುತ್ತೂರು ತಾಲೂಕು ಕ್ಷೇತ್ರ ಸಂಪನ್ಮೂಲ ಸಮನ್ವಯ ಕೇಂದ್ರದ ವಿಕಲಚೇತನ ಮಕ್ಕಳ ವಿಭಾಗದಲ್ಲಿ ಹಾಗೂ ಜಿಲ್ಲಾ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಜಿಲ್ಲಾದ್ಯಂತ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿರುತ್ತಾರೆ. ಪ್ರಸ್ತುತ ಇವರು ದ.ಕ ಜಿಲ್ಲಾ ವಿಕಲಚೇತನರ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶಿವಪ್ಪ ರಾಥೋಡ್ ಅವರು ಪತ್ನಿ ಸವಿತಾ ಹಾಗೂ ಪುತ್ರಿಯರಾದ ರೇವತಿ, ರಿಯಾ, ಪುತ್ರ ರಿಷಿಯವರೊಂದಿಗೆ ಕುಂಬ್ರದಲ್ಲಿ ವಾಸವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.