ಅಯೋಧ್ಯೆ ಭೂಮಿ ಪೂಜೆ: ಒಳಮೊಗ್ರು ಕುಕ್ಕುಮುಗೇರು ಕ್ಷೇತ್ರದಲ್ಲಿ ಪ್ರಾರ್ಥನೆ, ಕರಸೇವಕರಿಗೆ ಗೌರವರ್ಪಾಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಐತಿಹಾಸಿಕ ದಿನದ ಪ್ರಯುಕ್ತ ಒಳಮೊಗ್ರು ಗ್ರಾಮದ ಆರಾಧ್ಯ ದೈವ ಕುಕ್ಕುಮುಗೇರು ಇರ್ವೆರ್ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ಸಾನಿಧ್ಯ ರಾಜಮಾಡದಲ್ಲಿ ಹಿಂದೂಭಾಂಧವರೆಲ್ಲ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ಭೂಮಿಪೂಜೆ ಶ್ರೀರಾಮ ಮಂದಿರಕ್ಕೆ ನೆರವೇರಲಿದ್ದು ಸಾಂಗವಾಗಿ ಕೆಲಸ ಕಾರ್ಯಗಳು ನಡೆಯಲಿ ಎಂದು ಆಡಳಿತ ಮೊಕ್ತೇಸರ ವಿಜಯಕುಮಾರ್ ರೈ ಮುಗೇರು ಭಕ್ತಾದಿಗಳ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಅಯೋಧ್ಯೆಯ ಹಿನ್ನಲೆ, ಗತಿಸಿಹೋದ ಹೋರಾಟ, ಚಳುವಳಿ ಮತ್ತು ಇತಿಹಾಸದ ಬಗ್ಗೆ ಪ್ರಕಾಶ್ಚಂದ್ರ ರೈ ಕೈಕಾರ ವಿವರಿಸಿದರು. ಕುಂಬ್ರ ದುರ್ಗಪ್ರಸಾದ್ ರೈ ಮತ್ತು ಹಿರಿಯರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ೧೯೯೦ ರ ಅವಧಿಯಲ್ಲಿ ರಾಮ ಜನ್ಮಭೂಮಿ ಕರಸೇವ ಕಾರ್ಯಕ್ರಮದಲ್ಲಿ ಒಳಮೊಗ್ರು ಗ್ರಾಮದಿಂದ ಭಾಗವಹಿಸಿದ ಸಂಘದ ಸ್ವಯಂ ಸೇವಕರಾದ ಕರುಣಾ ರೈ ಬಿಜಲ ಅವರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ,ಸಸಿ ಕೊಟ್ಟು ಗೌರವಿಸಲಾಯಿತು. ಈ ಒಂದು ಐತಿಹಾಸಿಕ ದಿನದ ನೆನಪಿಗಾಗಿ ದೈವಸ್ಥಾನದ ಸುತ್ತ ಸುಮಾರು ೫೦ ಗಿಡಗಳನ್ನು ಸೇರಿದ್ದ ಭಕ್ತಾದಿಗಳು ನೆಟ್ಟು ಸಹಕರಿಸಿದರು.

ಕಾರ್ಯಕ್ರಮದಲ್ಲಿ ರಕ್ಷಿತ್ ರೈ ಮುಗೇರು, ಶ್ರೀನಿವಾಸ ರೈ ಕುಂಬ್ರ, ವೆಂಕಪ್ಪ ಗೌಡ ಬೊಲ್ಲಾಡಿ, ರಾಜೇಶ್ ರೈ ಪರ್ಪುಂಜ, ನಿತೀಶ್ ಶಾಂತಿವನ, ಹರೀಶ್ ಬಿಜಾತ್ರೆ, ಮಹೇಶ್ ಕೇರಿ, ಉಷಾನಾರಾಯಣ, ಪುರಂದರ ಶೆಟ್ಟಿ ಮುಡಾಲ, ರಾಮಕೃಷ್ಣ ಮುಡಾಲ, ಶೀನಪ್ಪ ನಾಯ್ಕ ಮುಡಾಲ, ಶ್ರವನ್ ಶೆಟ್ಟಿ ಮುಡಾಲ, ಉಷಾನಾರಾಯಣ ಕುಂಬ್ರ, ತ್ರಿವೇಣಿ ಪಲ್ಲತ್ತಾರು, ವಿನೋದ್ ಶೆಟ್ಟಿ ಮುಡಾಲ, ಮೋಹನದಾಸ್ ರೈ ಕುಂಬ್ರ, ಮಿತ್ರದಾಸ ರೈ ಡೆಕ್ಕಳ, ಪ್ರೇಮ್ ರಾಜ್ ರೈ ಪರ್ಪುಂಜ,ಮುಕುಂದ ಶಾಂತಿವನ, ಅಶೋಕ್ ಬೊಲ್ಲಾಡಿ, ರಾಜಶೇಖರ್ ಶೆಟ್ಟಿ ಮುಡಾಲ, ಮಾಧವ ರೈ ಕುಂಬ್ರ, ರಾಧಾಕೃಷ್ಣ ರೈ ತುಂಡುಬೈಲು,ಮಂಜನ ಪೂಜಾರಿ ಉರ್ವ, ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ, ಶಿವರಾಮ ಗೌಡ ಬೊಲ್ಲಾಡಿ, ಜೀವನ್ ಅಮೀನ್ ಪರ್ಪುಂಜ, ಸುಜಿತ್ ಪಿದಪಟ್ಲ , ಪ್ರಜನ್ ರೈ ತೋಟ್ಲ ಮತ್ತಿತರರು ಭಾಗವಹಿಸಿದ್ದರು. ಸಂತೋಷ್ ರೈ ಕೈಕಾರ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್‍ಸ್ ಸಂಸ್ಥೆಯ ವತಿಯಿಂದ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.