ರಾಮಮಂದಿರ ಹೋರಾಟದಲ್ಲಿ ಭಾಗವಹಿಸಿದ್ದ ಕರಸೇವಕರಿಗೆ ಬಿಜೆಪಿಯಿಂದ ಗೌರವ

Puttur_Advt_NewsUnder_1
Puttur_Advt_NewsUnder_1
  • ಶ್ರೀರಾಮನ ಮೂಲಕ ಆಧ್ಯಾತ್ಮಿಕ ಸ್ವಾತಂತ್ರ್ಯ ಲಭಿಸಿದೆ – ಸಂಜೀವ ಮಠಂದೂರು
  • ಅಯೋಧ್ಯೆಯಲ್ಲಿ ಸ್ವರ್ಗ ನಿರ್ಮಾಣ – ಜಗದೀಶ್ ಹಿರೇಮಣಿ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಕುರಿತು ಜಾಗೃತಿ ಮೂಡಿಸಲು ದೇಶದ್ಯಾಂತ ರಥಯಾತ್ರೆ ನಡೆದ ಸಂದರ್ಭ ಶ್ರೀ ರಾಮಮಂದಿರ ನಿರ್ಮಾಣದ ಹೋರಾಟದಲ್ಲಿ ಆಯೋಧ್ಯೆಗೆ ತೆರಳಿದ್ದ ಕರಸೇವಕರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯಕ್ರಮ ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ಆ.೫ರಂದು ನಡೆಯಿತು.

ಕರಸೇವೆಯಲ್ಲಿ ಭಾಗಿಯಾದವರ ಪೈಕಿ ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಪುತ್ತೂರು ಕೋ ಆಪರೆಟೀವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ, ವಿಶ್ವನಾಥ ಕುಲಾಲ್, ಯೋಗೀಶ್ ಭಕ್ತ, ವೆಂಕಟ್ರಮಣ ಗೌಡ, ಅಶೋಕ್ ರಾಜ್, ನಿರ್ಮಲ. ಪುರಸಭೆ ಮಾಜಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಶೇಖರ ನಾರಾವಿ, ರಾಮಚಂದ್ರ ಗೌಡ ಬೊಳ್ವಾರು, ಶಿಲ್ಪಿ ಗುಣವಂತೇಶ್ವರ ಭಟ್ ಅವರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

 

 

ಶ್ರೀರಾಮನ ಮೂಲಕ ಆದ್ಯಾತ್ಮಿಕ ಸ್ವಾತಂತ್ರ್ಯ ಲಭಿಸಿದೆ
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಶ್ರೀ ರಾಮನ ಆದರ್ಶಗಳನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸುವ ಕೆಲಸ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡುವ ಮೂಲಕ ನೆರವೇರಿದ್ದು ದೇಶಕ್ಕೆ ೨ನೇ ಸ್ವಾತಂತ್ರ್ಯ ಆಧ್ಯಾತ್ಮ ಲಭಿಸಿದೆ ಎಂದು ಹೇಳಿದರು. ಆ ನೆವ ೧೩೦ ಕೋಟಿ ಜನ ಜಾತಿ, ಧರ್ಮ ಬಿಟ್ಟು ದೇಶದ ಶ್ರದ್ದಾ ಬಿಂದು ರಾಮನ ಆದರ್ಶಗಳನ್ನು ನೆನಪಿಸುವುದು ಇವತ್ತಿನ ಕಾರ್ಯಕ್ರಮವಾಗಿದೆ. ಈ ಆದ್ಯಾತ್ಮಿಕ ಹೋರಾಟದಲ್ಲಿ ಹಿಂದೆ ಮುಂದೆ ನೋಡದೆ ಸಮರ್ಪಣಾ ಮನೋಭಾವದಿಂದ ಹೋರಾಟ ಮಾಡಿದವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯುವ ಪೀಳಿಗೆ ಇದನ್ನು ಮೈಗೂಡಿಸಬೇಕೆಂದು ಹೇಳಿದರು.

ಅಯೋಧ್ಯೆಯಲ್ಲಿ ಸ್ವರ್ಗ ನಿರ್ಮಾಣ:
ಸಪಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿರುವ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮಣಿ ಅವರು ಮಾತನಾಡಿ ಅಯೋಧ್ಯೆಯ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಹಲವಾರು ಮಂದಿ ಬಲಿದಾನ ಮಾಡಿದ್ದಾರೆ. ಎಲ್ಲಾ ಆಂದೋಲನಕ್ಕೆ ಪ್ರೇರಕ ಶಕ್ತಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಿತ್ತು. ಈ ದೇಶ ಜಗತ್ತಿಗೆ ಗುರುವಾಗಿರುವ ಸಂಕಲ್ಪ ಸಮಾಜಕ್ಕೆ ಮಾತ್ರವಲ್ಲ ಮಾಡಿ ತೋರಿಸಲಾಗಿದೆ. ಸುದೈವ ಎಂಬಂತೆ ನಾವು ಜೀವಂತ ಆಗಿರುವ ಸಂದರ್ಭದಲ್ಲೇ ನಾವು ರಾಮ ಮಂದಿರ ನೋಡುವ ಭಾಗ್ಯ ಒದಗಿದೆ ಎಂದರು. ಕರಸೇವೆಕರಲ್ಲಿ ಚಂದ್ರಶೇಖರ್ ರಾವ್ ಬಪ್ಪಳಿಗೆ, ಶೇಖರ್ ನಾರಾವಿ, ಗುಣವಂತೇಶ್ವರ ಭಟ್ ಅವರು ಕರಸೇವೆಯಲ್ಲಿ ಭಾಗಿಯಾಗಿದ್ದ ಸಂದರ್ಭದ ವಿಚಾರವನ್ನು ಹಂಚಿಕೊಂಡರು. ವೇದಿಕೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಜಿಲ್ಲಾ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಂಡಲದ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಉಪಾಧ್ಯಕ್ಷೆ ನಾಯಕ್ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ನಗರಸಭೆ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿದರು. ಯುವರಾಜ್ ವಂದಿಸಿದರು. ಬಿಜೆಪಿ ಪ್ರಮುಖರಾದ ರಾಧಾಕೃಷ್ಣ ನಂದಿಲ, ಇಂದುಶೇಖರ, ನಗರ ಮಂಡಲ ಕಾರ್ಯದರ್ಶಿಗಳಾದ ಅಶೋಕ್ ಹಾರಾಡಿ, ಶ್ರೀಮತಿ ಅರ್ಪಣಾ ಪಡೀಲು, ಗೋವರ್ಧನ್ ಬನ್ನೂರು , ತಾ.ಪಂ ಸದಸ್ಯ ಮುಕುಂದ ಬಜತ್ತೂರು, ರೈತ ಮೋರ್ಚಾದ ಮಾಜಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಆಳ್ವ ಸಾಂತ್ಯ, ಜಿಲ್ಲಾ ಯುವ ಮೋರ್ಚಾದ ಸದಸ್ಯ ಕಿರಣ್ ಶಂಕರ್ ಮಲ್ಯ, ನವೀನ್ ಪಡಿವಾಳ್, ನಗರಸಭಾ ಸದಸ್ಯ ಅಶೋಕ್ ಶೆಣೈ, ಶಿವರಾಮ ಸಪಲ್ಯ, ನಗರ ಮಂಡಲ ಮಾಜಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ರಾಘವೇಂದ್ರ ಪ್ರಭು, ಸಂದೀಪ್ ಲೋಬೋ, ಶಾಸಕರ ಆಪ್ತ ಸಹಾಯಕರಾದ ವಸಂತ ವೀರಮಂಗಲ, ಜೀವನ್ ಈಶ್ವರಮಂಗಲ, ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ರುಕ್ಮಯ್ಯ ಇದ್ಪಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.