Breaking News

ಅಯೋಧ್ಯೆ ಭೂಮಿ ಪೂಜೆ: ತಿಂಗಳಾಡಿ ದೇವಗಿರಿ ಭಜನಾ ಮಂದಿರದಲ್ಲಿ ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸದ ಪ್ರಯುಕ್ತ ಕೆದಂಬಾಡಿ ಗ್ರಾಮದ ಬಿಜೆಪಿ ೧೮೬ ೧೮೭ನೇ ಬೂತ್ ನ ಪರವಾಗಿ ತಿಂಗಳಾಡಿ ಶ್ರೀಕ್ಷೇತ್ರ ದೇವಗಿರಿ ಭಜನಾ ಮಂದಿರದಲ್ಲಿ ದೀಪ ಬೆಳಗಿಸಿ ಶ್ರೀರಾಮಮಂದಿರದ ಕೆಲಸ ಕಾರ್ಯಗಳು ಯಾವುದೇ ವಿಘ್ನಗಳು ಇಲ್ಲದೆ ಪೂರ್ಣಗೊಳ್ಳಲಿ ತಿಂಗಳಾಡಿ ಬಿಜೆಪಿ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ತಿಂಗಳಾಡಿ ಇದರ ಅಧ್ಯಕ್ಷ ಮಾದೋಡಿ ಭಾಸ್ಕರ ರೈ ನಂಜೆ, ಬೂತ್ ಸಂಖ್ಯೆ ೧೮೬ರ ಅಧ್ಯಕ್ಷ ಬಾಲಚಂದ್ರ ರೈ ಚಾವಡಿ, ಪ್ರಧಾನ ಕಾರ್ಯದರ್ಶಿ ಶರತ್ ಗೌಡ ಗುತ್ತು, ಕಾರ್ಯದರ್ಶಿ ಗೀತಾ ಸತೀಶ ರೈ ಕೆದಂಬಾಡಿ ಗುತ್ತು, ಬೂತ್ ಸಂಖ್ಯೆ ೧೮೭ರ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ, ಮಾಜಿ ಅಧ್ಯಕ್ಷ ಸೂರ್ಯಪ್ರಸನ್ನ ರೈ ಎಂಡೆಸಾಗು, ದೇವತಾ ಭಜನಾ ಮಂಡಳಿಯ ಅಧ್ಯಕ್ಷ ಆನಂದ ರೈ ಮಠ, ಗಣೇಶ್ ರೈ ಮಿತ್ರಂಪಾಡಿ, ಜಯರಾಮ ರೈ ಬಾಲಯ, ಲೋಹಿತ್ ಗೌಡ ಗುತ್ತು, ಅಜಿತ್ ರೈ ದೇವಗಿರಿ ಮತ್ತಿತರರು ಭಾಗವಹಿಸಿದ್ದರು.
ಚಿತ್ರ: ತಿಂಗಳಾಡಿ ದೇವಗಿರಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.