Breaking News

ಪಡ್ನೂರು: ಮದಗ ಜನಾರ್ದನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕರಸೇವಕ, ಹೋರಾಟಗಾರರಿಗೆ ಗೌರವಾರ್ಪನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಅಯೊಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ಹಾಗೂ ಮಂದಿರ ನಿರ್ಮಾಣ ಸಾಂಗವಾಗಿ ನಡೆಯುವಂತೆ ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಕರಸೇವಕರು, ಹೋರಾಟದಲ್ಲಿ ಭಾಗಿಯಾದವರಿಗೆ ಗೌರವಾರ್ಪನೆಯು ಆ.೫ರಂದು ನಡೆಯಿತು.

ದೇವಸ್ಥಾನದ ಅರ್ಚಕ ಚಂದ್ರಶೇಖರ ಮಯ್ಯ ಪೂಜೆ ನೆರವೇರಿಸಿದರು. ೧೯೯೨ರಲ್ಲಿ ಅಯೋಧ್ಯೆ ಕರಸೇವಕರಾಗಿ ಭಾಗವಹಿಸಿದ ರಮೇಶ್ ಕಡ್ತಿಮಾರ್, ೨೦೦೩ರಲ್ಲಿ ನಡೆದ ಅಯೋಧ್ಯ ಚಲೋ ಹೋರಾಟದಲ್ಲಿ ಭಾಗವಹಿಸಿದ ಲಕ್ಷ್ಮಣ ದೇಂತಡ್ಕ, ವಿನೋದ್ ಕುಂಜಾರು ಹಾಗೂ ನವೀನ್ ಪಡ್ನೂರುರವರನ್ನು ಗೌರವಿಸಲಾಯಿತು. ರಾಮ ಮಂದಿರ ಶಿಲಾನ್ಯಾಸ ದಿನದ ಸವಿನೆನಪಿಗಾಗಿ ದೇವಸ್ಥಾನದ ವಠಾರದಲ್ಲಿ ಗಿಡ ನೆಡಲಾಯಿತು.

ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಸಂಘ ಪರಿವಾರದ ಮುಖಂಡ, ನ್ಯಾಯವಾದಿ ವಿಜಯ ನಾರಾಯಣ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಬಾಲಕೃಷ್ಣ ಜೋಯಿಷ ಯರ್ಮುಂಜ, ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರಮಣಿ ಡಿ ಗಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮುಖರಾದ ಶ್ರೀನಿವಾಸ ಪೆರ್‍ವೋಡಿ, ಪೂವಪ್ಪ ದೇಂತಡ್ಕ, ರಮೇಶ್ ರೆಂಜಾಳ, ರಾಧಾಕೃಷ್ಣ ಕುಂಜಾರು, ರಾಜೇಶ್ ಬೇರಿಕೆ, ಸೀತಾರಾಮ ಬೇರಿಕೆ, ಶೇಖರ ಪಲ್ಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಮೋಹನದಾಸ ರಾಮನಗರ, ಲೋಕೇಶ್ ಮುಂಡಾಜೆ, ಬಾಬು ಸಪಲ್ಯ ರಾಮನಗರ, ಅರುಣೋದಯ ಕೆದಿಲ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.