ರಾಮ ಮಂದಿರ ಶಿಲನ್ಯಾಸ, ಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗುವಂತೆ ರಾಮನಗರ ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜನ್ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಲಿ ಹಾಗು ಭವ್ಯ ಮಂದಿರವು ಶೀಘ್ರ ನಿರ್ವಿಘ್ನವಾಗಿ ನಿರ್ಮಾಣವಾಗಲಿ ಎಂದು ಮಿತ್ತೂರು, ರಾಮನಗರ ಶ್ರೀ ಸೀತಾರಾಮಾಂಜನೇಯ ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಬೈಪದವು ಗೋಪಾಲಕೃಷ್ಣ ಭಟ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್, ಪುತ್ತೂರು ಬಿಜೆಪಿ ಮಂಡಲದ ಕೋಶಾಧಿಕಾರಿ ರಮೇಶ್ ಭಟ್ ಮಿತ್ತೂರು, ಶ್ರೀ ಸೀತಾರಾಮಾಂಜನೇಯ ಭಜನಾ ಸಮಿತಿಯ ಗೌರವಾಧ್ಯಕ್ಷ ವಾಸುದೇವ ಕುಲಾಲ್, ಅಧ್ಯಕ್ಷ ಸಂಜೀವ ಪೂಜಾರಿ, ಇಡ್ಕಿದು ಬಿಜೆಪಿ ಶಕ್ತಿಕೇಂದ್ರದ ಸಂಚಾಲಕ ಎಂ. ಸುಧೀರ್ ಕುಮಾರ್ ಶೆಟ್ಟಿ, ಈಶ್ವರ ಗೌಡ ಕೂವೆತ್ತಿಲ, ಶಿವಪ್ರಸಾದ್ ಕೂವೆತ್ತಿಲ, ತಾರನಾಥ ಕುಲಾಲ್, ಸಂದೀಪ್ ದರ್ಬೆ, ಮನೋಜ್ ಕುಮಾರ್, ಈಶ್ವರ ಕುಲಾಲ್, ಗಂಗಾಧರ ಡಿ., ಸಂಕೇತ್ ಕುಮಾರ್, ಯಾಧವ ಕುಲಾಲ್, ಗುರುಪ್ರಸಾದ್, ಮೋಹನ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ವಠಾರದಲ್ಲಿ ಗಿಡ ನಡೆಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.