Breaking News

ಫಿಲೋಮಿನಾ ಪಿಯು ಕಾಲೇಜಿನಲ್ಲಿ ನೂತನ ಸಂಚಾಲಕರಿಗೆ ಸ್ವಾಗತ

Puttur_Advt_NewsUnder_1
Puttur_Advt_NewsUnder_1
  • ಜವಾಬ್ದಾರಿ, ವಿಶ್ವಾಸಾರ್ಹತೆಯಿದ್ದಲ್ಲಿ ಸಂಸ್ಥೆ ಮುನ್ನೆಡೆಯಬಲ್ಲುದು-ವಂ|ಲಾರೆನ್ಸ್

ಪುತ್ತೂರು: ಸಂಸ್ಥೆಯ ಅಭಿವೃದ್ಧಿ ಒಬ್ಬರಿಂದ ಸಾಧ್ಯವಿಲ್ಲ. ಸಂಸ್ಥೆಯಲ್ಲಿ ದುಡಿಯುವ ಪ್ರತಿಯೋರ್ವರು ಟೀಮ್‌ವರ್ಕ್‌ನಿಂದ ದುಡಿದಲ್ಲಿ ಸಂಸ್ಥೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಸ್ಥೆಯಲ್ಲಿ ದುಡಿಯುವ ಪ್ರತಿಯೋರ್ವರು ತಮ್ಮ ಜವಾಬ್ದಾರಿ ಅರಿತು, ಪರಸ್ಪರ ವಿಶ್ವಾಸಾರ್ಹತೆಯೊಂದಿಗೆ ಸೇವೆ ನೀಡಿದಾಗ ಸಂಸ್ಥೆ ಮುನ್ನೆಡೆಯಬಲ್ಲುದು ಎಂದು ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ನೂತನ ಸಂಚಾಲಕರಾದ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಲ್ಯಾಬ್‌ನಲ್ಲಿ ಆ.೫ ರಂದು ಜರಗಿದ ಕಾಲೇಜಿನ ನೂತನ ಸಂಚಾಲಕರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಹೂಗುಚ್ಛ ಸ್ವಾಗತವನ್ನು ಸ್ವೀಕರಿಸಿ ಮಾತನಾಡಿದರು. ಫಿಲೋಮಿನಾ ವಿದ್ಯಾಸಂಸ್ಥೆಗಳು ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿಯೂ ನಾವು ಮತ್ತಷ್ಟು ಉತ್ತಮ ಕೆಲಸಗಳನ್ನು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಮೂಲಕ ಸಂಸ್ಥೆಯ ಹೆಸರನ್ನು ನಾಲ್ಕು ಧಿಕ್ಕಿಗೂ ಪಸರಿಸುವ ಕೆಲಸವಾಗಲಿ. ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಕಾಲೇಜು ಉತ್ತಮ ಸಾಧನೆ ಮಾಡಿರುವುದರ ಹಿಂದೆ ಪ್ರಾಂಶುಪಾಲರ, ಉಪನ್ಯಾಸಕರ ಟೀಮ್ ವರ್ಕ್ ಬಹಳಷ್ಟಿದೆ. ಮುಂದಿನ ವರ್ಷಗಳಲ್ಲಿಯೂ ವಿದ್ಯಾಸಂಸ್ಥೆಗಳ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿದಾಗ ಸಂಸ್ಥೆಯು ಅಭಿವೃದ್ಧಿ ಹೊಂದುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರು ಮಾತನಾಡಿ, ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳು ಜಂಟಿಯಾಗಿ ಅತ್ತ್ಯುತ್ತಮವಾದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ನೂತನ ಸಂಚಾಲಕರ ನೇತೃತ್ವದಲ್ಲಿ ಈ ಕಾರ್ಯವು ಇನ್ನಷ್ಟು ಯಶಸ್ವಿಯಾಗಲಿ. ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಈವರೆಗೆ ಸೇವೆ ಸಲ್ಲಿಸಿರುವ ಎಲ್ಲಾ ಕಡೆಗಳಲ್ಲಿ ಉತ್ತಮವಾದ ಛಾಪನ್ನು ಒತ್ತಿದ್ದು, ಇಲ್ಲಿಯೂ ಕೂಡ ನಾವು ಅಂತಹುದೇ ನಿರೀಕ್ಷೆಯನ್ನು ಹೊಂದಿದ್ದೇವೆ ಮತ್ತು ನಾವೆಲ್ಲರೂ ಸಂಪೂರ್ಣವಾದ ಸಹಕಾರವನ್ನು ನೀಡುತ್ತೇವೆ ಎಂದರು.

ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ಹಾಗೂ ಫಿಲೋಮಿನಾ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ|ಆಂಟನಿ ಪ್ರಕಾಶ್ ಮೊಂತೇರೋ ಮಾತನಾಡಿ, ನೂತನ ಸಂಚಾಲಕರಿಗೆ ಹಲವಾರು ಸವಾಲುಗಳ ಜೊತೆಗೆ ಫಿಲೋಮಿನಾ ಕ್ಯಾಂಪಸ್ ಅತ್ತ್ಯುತ್ತಮವಾದ ಅವಕಾಶಗಳನ್ನು ಕೂಡ ನೀಡಲಿದ್ದು ಸಂಚಾಲಕರೊಂದಿಗೆ ಫಿಲೋಮಿನಾ ವಿದ್ಯಾಸಂಸ್ಥೆಗಳು ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿ ಎಂದು ಶುಭ ಹಾರೈಸಿದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಲವೀನಾ ಸಾಂತ್‌ಮಾಯೆರ್ ಸ್ವಾಗತಿಸಿ, ಹಿಂದಿ ವಿಭಾಗದ ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ವಿಭಾಗದ ಡೀನ್ ಯಶ್ವಂತ್ ಎಂ.ಡಿ, ವಾಣಿಜ್ಯ ವಿಭಾಗದ ಡೀನ್ ಗೋವಿಂದ ಪ್ರಕಾಶ್, ಕಲಾ ವಿಭಾಗದ ಡೀನ್ ಭರತ್ ಕುಮಾರ್, ಕಾಲೇಜು ಆಡಳಿತ ವಿಭಾಗದ ಮುಖ್ಯಸ್ಥ ಮೆಲ್ವಿನ್ ಗೊನ್ಸಾಲ್ವಿಸ್ ಸಹಿತ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು.

ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ನಾಲ್ಕು ರ್‍ಯಾಂಕ್‌ಗಳು…
ಪ್ರಸ್ತುತ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೋವಿಡ್ ನಡುವೆಯೂ ವಿದ್ಯಾರ್ಥಿಗಳು ಗಮನಾರ್ಹವಾದ ಸಾದನೆಯನ್ನು ಮಾಡಿದ್ದು ಕಾಲೇಜು ಶೇ.೯೪ ಫಲಿತಾಂಶ ಪಡೆದಿರುತ್ತದೆ. ಮಾತ್ರವಲ್ಲದೆ ವಾಣಿಜ್ಯ ವಿಭಾಗದಲ್ಲಿ ಈ ಬಾರಿ ನಾಲ್ಕು ರ್‍ಯಾಂಕ್‌ಗಳನ್ನು ಪಡೆದಿರುವುದು ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ. ಕಳೆದ ಬಾರಿಯೂ ಕಾಲೇಜು ಮೂರು ರ್‍ಯಾಂಕ್‌ಗಳನ್ನು ಪಡೆದಿತ್ತು ಎನ್ನುವುದು ಗಮನಾರ್ಹ. ಜೊತೆಗೆ ಕಾಲೇಜು ಕ್ರೀಡೆ ಹಾಗೂ, ಪಠ್ಯೇತರ ವಿಭಾಗಗಳಲ್ಲೂ ಸಾಧನೆ ಮಾಡಿದೆ. ಕಾಲೇಜು ಉತ್ತಮ ಕಲಿಕಾ ವಾತಾವರಣವನ್ನು ಹೊಂದಿದ್ದು, ಕಾಲೇಜಿನ ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವೃಂದ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘವು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ವಂ|ವಿಜಯ್ ಲೋಬೋ, ಪ್ರಾಂಶುಪಾಲರು, ಫಿಲೋಮಿನಾ ಪಿಯು ಕಾಲೇಜು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.