Breaking News

ತಂಗಿಗೆ ಬಿಸಿ ನೀರು ಎರಚಿದ ಅಣ್ಣ ಕೊಡಿಪ್ಪಾಡಿ ಶೇವಿರೆಯಲ್ಲಿ ನಡೆದ ಘಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಣ್ಣನೋರ್ವ ಬಿಸಿ ನೀರು ಎರಚಿ ತಂಗಿಗೆ ಗಾಯಗೊಳಿಸಿದ ಘಟನೆ ಕೊಡಿಪ್ಪಾಡಿ ಶೇವಿರೆ ಎಂಬಲ್ಲಿ ಆ.೩ರಂದು ನಡೆದಿದ್ದು ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶೇವಿರ ನಿವಾಸಿ ನಾರಾಯಣ ನಾಯ್ಕ ದಂಪತಿ ಪುತ್ರಿ ಪವಿತ್ರಾ(೨೨ವ)ರವರು ಗಾಯಾಳು. ಆಕೆಯ ಅಣ್ಣ ರಮೇಶ ಎಂಬವರು ಮೈ ಮೇಲೆ ಬಿಸಿ ನೀರು ಎರಚಿ ಜೀವ ಬೆದರಿಕೆಯೊಡ್ಡಿದ್ದಾರೆ. ರಮೇಶ್ ಅವರು ಮನೆಯಲ್ಲಿ ತಂದೆ ತಾಯಿಯ ಪ್ರತಿ ದಿನ ಗಲಾಟೆ ಮಾಡಿದ್ದನ್ನು ಪ್ರಶ್ನಿಸಿದ ತಂಗಿ ಪವಿತ್ರಾ ಅವರಿಗೆ ಬಚ್ಚಲು ಮನೆಯಲ್ಲಿ ಸ್ನಾನಕ್ಕೆಂದು ಇಟ್ಟಿದ್ದ ಬಿಸಿ ನೀರನ್ನು ಮೈ ಮೇಲೆ ಎರಚಿದ್ದಾರೆ. ಬಿಸಿ ನೀರು ಮೈ ಮೇಲೆ ಬಿದ್ದ ಪರಿಣಾಮ ಪವಿತ್ರಾ ಅವರ ಮುಖದಲ್ಲಿ ಸುಟ್ಟಗಾಯವಾಗಿದೆ. ಕೈ ಮತ್ತು ಕಾಲಿನಲ್ಲಿ ಕೂಡಾ ಸುಟ್ಟ ಗಾಯವಾಗಿದೆ. ಘಟನೆಯ ಕುರಿತು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪವಿತ್ರಾ ಅವರು ನೀಡಿದ ದೂರಿನಂತೆ ಆರೋಪಿ ರಮೇಶ್ ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ೫೦೪, ೩೨೪, ೫೦೬ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.