ರೆಂಜಿಲಾಡಿ ಆಕೊಟೆಜಾಲ್‌ ನಲ್ಲಿ 25ಕೆ ಸಿ ಎ ವಿದ್ಯುತ್ ಪರಿವರ್ತಕ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ: ಕಲ್ಲುಗುಡ್ಡೆ ಕೊನಾಜೆ ರಸ್ತೆಯಲ್ಲಿ ಆಕೊಟೆಜಾಲ್ ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಮಾರು 8.5ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 25 ಕೆ ಸಿ ಎ ವಿದ್ಯುತ್ ಪರಿವರ್ತಕವನ್ನು ಆ.3ರಂದು ಸುಳ್ಯ ಶಾಸಕ ಯಸ್ ಅಂಗಾರರವರು ಉದ್ಘಾಟಿಸಿ ಮಾತನಾಡಿದ ಅವರು ಜನರ ಬೇಡಿಕೆಗೆ ತಕ್ಕಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಗೆ ಗಮನ ಹರಿಸಲಾಗುತ್ತಿದೆ ಎಂದರು. ಈ ಭಾಗದ ವಿದ್ಯುತ್ ಸಮಸ್ಯೆಯನ್ನರಿತು ಕೂಡಲೇ ಸ್ಪಂದಿಸಿ ಅತೀ ಶೀಘ್ರದಲ್ಲಿ ಟಿ ಸಿ ಅಳವಡಿಸಿ ವಿದ್ಯುತ್ ಸಮಸ್ಯೆ ನಿವಾರಿಸಿದ ಕಡಬ ಸಹಾಯಕ ಇಂಜಿನಿಯರ್ ಸತ್ಯನಾರಾಯಣರವರನ್ನು ಗ್ರಾಮಸ್ಥರು ಶಾಸಕರಿಂದ ಸ್ಮರಣಿಕೆ ಕೊಡಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರೇಷ್ಮಾ ಹಾರ್ಡ್‌ವೇರ್ ನ ಲಿಂಗಪ್ಪ ಗೌಡ ಕಾನದ ಬಾಗಿಲು ಪದ್ಮನಾಭ ಕೇಪುಂಜ, ಕೊನಾಜೆ ಗ್ರಾ ಪಂ ನಿಕಟ ಪೂರ್ವ ಉಪಾಧ್ಯಕ್ಷ ಯಶೋಧರ ಗೌಡ, ಜನಾರ್ದನ ಪರವ ಕೊನಾಜೆ, ಗಣೇಶ್ ತಲೆಕ್ಕಿ ಉಮೇಶ್ ಆಕೊಟೆಜಾಲು, ಪರಮೇಶ್ವರ ಸಂಕೇಶ, ರೋಹಿತ್ ಬಾಂತಾಜೆ, ವಾಸುದೇವ ಗೌಡ ಮಾರಪ್ಪೆ,  ಶೇಖರ ಗೌಡ ಮಾರಪ್ಪೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.