ಕಡಬ ತಾಲೂಕು ಸ್ವಾತಂತ್ರ್ಯೋತ್ಸವ ಆಚರಣೆ-ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ಯೋತ್ಸವ ಆಚರಣೆ ಬಗ್ಗೆ ಪೂರ್ವಭಾವಿ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ಆ.6 ರಂದು ನಡೆಯಿತು. ಸಭೆಯಲ್ಲಿ ಈ ಭಾರಿಯ ಸ್ವಾತ್ಂತ್ಸೋವನ್ನು ಸರಕಾರದ ಮಾರ್ಗಸೂಚಿ ಯಂತೆ ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು. ಬೆಳಿಗ್ಗೆ ಕಡಬ ತಹಸೀಲ್ದಾರ್ ಕಛೇರಿಯಲ್ಲಿ ಧ್ವಜಾರೋಹಣ, ಬಳಿಕ ಎಪಿಎಂಸಿ ಪ್ರಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್‌ ಗಳಿಗೆ ಸನ್ಮಾನ ಕಾರ್ಯಕ್ರಮ ಇದ್ದು ಈ ಸಂಬಂಧ ಪ್ರತಿ ಆರೋಗ್ಯ ಕೇಂದ್ರದಿಂದ ಆಯ್ಕೆ ಮಾಡಲಾದ ಗಳಾದ ಆಶಾ ಕಾರ್ಯಕರ್ತೆ ಯರಿಗೆ, ಪ್ರತಿಯೊಂದು ಪಂಚಾಯತ್ ನಿಂದ ಒಬ್ಬರಿಗೆ ಅಂತೆಯೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ತಲಾ ಒಬ್ಬಬ್ಬೊರನ್ನು ಮತ್ತು ಪತ್ರಕರ್ತರೋರ್ವರನ್ನು ಸನ್ಮಾನ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಕಡಬ ತಹಸೀಲ್ದಾರ್ ಜಾನ್ ಪ್ರಕಾಶ್, ಕಡಬ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ.ಸದಸ್ಯ ರಾದ ತೇಜಶ್ವಿನಿ, ಜಯಂತಿ ಆರ್,ಗಣೇಶ್ ಕೈಕುರೆ, ಪಿ.ವೈ.ಕುಸುಮಾ, ಅಶೋಕ ನೆಕ್ರಾಜೆ, ಸೈಹದ್ ಮೀರಾ ಸಾಹೇಬ್, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಚಿತ್ರಾ ರಾವ್, ಎ.ಇ.ಇ ಸತ್ಯನಾರಾಯಣ, ಕ್ಲಸ್ಟರ್ ಮುಖ್ಯಸ್ಥ ಕುಮಾರ್, ಕೃಷಿ ಇಲಾಖೆಯ ಗೀತಾ,ಭೂಮಾಪನ ಪರ್ಯವೇಕ್ಷಕ ಮಂಜುನಾಥ, ಪಿಡಿಒ ಚೆನ್ನಪ್ಪ ಗೌಡ, ಎ.ಎಸ್.ಐ ಸುರೇಶ್,ಗ್ರಾಮಕರಣಿಕ ಹರೀಶ್,ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್, ಮಾಜಿ ಗ್ರಾ.ಪಂ.ಸದಸ್ಯ ರಟದ ಹನೀಪ್ ಕೆ.ಎಂ.ಸೂಸಮ್ಮ ಮತ್ತಾಯಿ ಮೊದಲಾದವರು ಉಪಸ್ಥಿತರಿದ್ದರು. ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪ ತಹಸೀಲ್ದಾರ್ ಮನೋಹರ್ ಕೆ.ಟಿ ವಂದಿಸಿದರು. ಭಾರತಿ, ಉದಯ ಕುಮಾರ್, ಹರೀಶ್ ಬೆದ್ರಾಜೆ, ವಿಜಯಕುಮಾರ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.