ಭಾರತದ ಪ್ರಪ್ರಥಮ ವರ್ಚುವಲ್ ಜ್ಯುವೆಲ್ಲರಿ ಎಕ್ಸಿಬಿಷನ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಳಿಯ ಜ್ಯುವೆಲ್ಸ್ ಕರ್ನಾಟಕದ ಹೆಸರುವಾಸಿ ಚಿನ್ನದ ಮಳಿಗೆ ಸದಾ ಹೊಸತನದೊಂದಿಗೆ ಹಾಗೂ ಪಾರಂಪರಿಕ ಆಭರಣಗಳನ್ನು ವಿನೂತನ ಶೈಲಿಗಳಲ್ಲಿ ಪರಿಚಯಿಸುವ ಬ್ರಾಂಡ್. ಸದ್ಯದ ಕೊರೊನಾ ಹಿನ್ನಲೆಯಲ್ಲಿ ವ್ಯಾಪಾರವನ್ನು ಜಾಗೃತೆಯಲ್ಲಿ ನಡೆಸುವ ಮತ್ತು ವೆಬ್ ಮೂಲಕ ನಡೆಸುವುದನ್ನು ಮನಗಂಡು ಮುಳಿಯ ಭಾರತದ ಏಕೈಕ ಹಾಗೂ ಪ್ರತಿಷ್ಟಿತ ಜುವೆಲ್ಲರಿ ಮ್ಯಾಗಝೀನ್ ’ಆರ್ಟ್ ಆಫ್ ಜ್ಯುವೆಲರಿ’ ಸಹಯೋಗದಲ್ಲಿ “ಭಾರತದ ಪ್ರಪ್ರಥಮ ವರ್ಚುವಲ್ ಜ್ಯುವೆಲರಿ ಎಕ್ಸಿಬಿಷನ್” ನಡೆಸುತ್ತಿದೆ. ಇದೇ ಆಗಸ್ಟ್ ೮ ರಂದು ೧೧ ಗಂಟೆಗೆ ಝೋಮ್ ಮೂಲಕ ಉದ್ಘಾಟನೆಗೊಂಡು ಆರ್ಟ್ ಆಫ್ ಜುವೆಲ್ಲರಿಯ ಮುಖ್ಯಸ್ಥ ಆಡಳಿತ ನಿರ್ದೇಶಕ ಸುಮೇಶ್ ವಧೇರಾರಿಂದ ನಾವರಣಗೊಳ್ಳಲಿದೆ. ಜಯ ಆಚಾರ್ಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗೂ ಸಂಸ್ಥೆಯ ಹಿರಿಯರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಮಾಲಜಿಸ್ಟ್, ಅನುಭವಿ ಹಾಗೂ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ರವರು ಆಭರಣಗಳ ಪ್ರಾತ್ಯಕ್ಷಿಕತೆ ನಡೆಸಿಕೊಡಲಿದ್ದಾರೆ. ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮತ್ತು ಕನ್ಸಲ್ಟೆಂಟ್ ವೇಣು ಶರ್ಮ ಕಾರ್ಯಕ್ರಮವ ನಿರ್ವಹಿಸಲಿದ್ದಾರೆ.

ಮುಳಿಯ ಜ್ಯುವೆಲ್ಸ್ : ೭೫ ವರ್ಷಗಳ ಇತಿಹಾಸದ ಮುಳಿಯ ಜ್ಯುವೆಲ್ಸ್ ವಿನೂತನ ಡಿಸೈನ್ ಗಳಿಗೆ ಮತ್ತು ಹೊಸತನಕ್ಕೆ ತುಡಿಯುವ ಸಂಸ್ಥೆ. ಕೊಕ್ಕೆತಾತಿ, ಪತಾಕ್, ಗುಂಡು ಸರ, ವೈವಿಧ್ಯಮಯ ಕರಿಮಣಿ, ಗಿಳಿಯೋಲೆ, ಕೊತ್ತಂಬರಿ ಸರ, ಜೀರಿಗೆ ಸರ, ಅಡಿಕೆ ಮಾಲೆ ಹೀಗೆ ವಿನೂತನ ಆಭರಣಗಳ ಮಹಾಪೂರವನ್ನು ಈ ಪ್ರದರ್ಶನ ಮತ್ತು ಮಾರಾಟದಲ್ಲಿ ನಿರೀಕ್ಷಿಸಿ.

ಈ ಪ್ರದರ್ಶನ ಮುಳಿಯ ಫೇಸ್ ಬುಕ್ ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ. Zoom invite IDID: ೪೧೮೬೬೩೪೪೭೬, ಹೆಚ್ಚಿನ ವಿವರಗಳಿಗಾಗಿ ವೇಣು ಶರ್ಮ : ೯೬೨೦೯೫೯೯೦೦ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.