ಮುಂಡೂರು ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ ದಲ್ಲಿ ದೀಪಾರಾಧನೆ ರಾಮ ಜಪ ಪಠನೆ 

Puttur_Advt_NewsUnder_1
Puttur_Advt_NewsUnder_1
ನರಿಮೊಗರು :ಅಯೋದ್ಯೆಯಲ್ಲಿ ಶ್ರೀರಾಮ ಜನ್ಮ ಭೂಮಿಯಲ್ಲಿ ಮಂದಿರದ  ಭೂಮಿ ಪೂಜೆ ಯ ಸವಿ ನೆನಪಿಗೆ ಮತ್ತು ಮುಂದಿನ ಎಲ್ಲ ಕೆಲಸ ಕಾರ್ಯಕ್ರಮ ಯಶಸ್ವಿ ಯಾಗಲೆಂದು ಪ್ರಾರ್ಥಿಸಿ ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ ದಲ್ಲಿ  ಪುತ್ತಿಲ ಶ್ರೀರಾಮ ಗೆಳೆಯರ ಬಳಗ ದ ಆಶ್ರಯದಲ್ಲಿ ನಡೆಯಿತು.
ಕರಸೇವೆಯಲ್ಲಿ ಭಾಗವಹಿಸಿದ ಸೀತಾರಾಮ ಆಚಾರಿ ಅವರನ್ನು ಶಾಲು ಹೊದಿಸಿ  ಪೇಟಾ ತೊಡಿಸಿ ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರಾ.ಪಂ. ಮಾಜಿ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣ್ ಪುತ್ತಿಲ, ಹೊನ್ನಪ್ಪ ನಾಯ್ಕ,ಬಾಲಚಂದ್ರ ಸೊರಕೆ ಗೌರವಿಸಿದರು.
ಸನ್ಮಾನಿತ ಸೀತಾರಾಮ ಆಚಾರಿ ಯವರು ತಮ್ಮ ಅನುಭವ ಹಂಚಿಕೊಂಡು, ಭಾಗವಹಿಸಲು ಸಿಕ್ಕಿದ ಅವಕಾಶ ನನ್ನ ಜೀವನ ದಲ್ಲಿ ಮರೆಯಲು ಅಸಾಧ್ಯ ಎಂದರು. ನಂತರ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು. ಶ್ರೀಧರ ನಾಯ್ಕ ಸ್ವಾಗತಿಸಿ. ಯೋಗೀಶ್ ಕಲ್ಲಮ ಧನ್ಯವಾದ ನೀಡಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.