ಸವಣೂರು : ಅಯೋಧ್ಯ ಹೋರಾಟದಲ್ಲಿ ಪಾಲ್ಗೊಂಡ ವಾಸುದೇವ ಇಡ್ಯಾಡಿ ಅವರಿಗೆ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1
ಸವಣೂರು : ಪೆರಿಯಡ್ಕ ಶ್ರೀಆದಿಶಕ್ತಿ ಭಜನಾ ಮಂಡಳಿ ಮತ್ತು ಭಾಜಪಾ ಬೂತ್ ಸಮಿತಿ ಮೊಗರು-66 ಸವಣೂರು ಇದರ ಸಹಯೋಗದಲ್ಲಿ ಜು.5ರ ಬುಧವಾರ ಅಯೋಧ್ಯೆಯಲ್ಲಿ ನಡೆದ ರಾಮಜನ್ಮಭೂಮಿ ಯಲ್ಲಿ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ದ ಅಂಗವಾಗಿ  ರಾಮಜನ್ಮಭೂಮಿಗಾಗಿ ನಡೆದ ಹೋರಾಟದ ಲ್ಲಿ ಕಾರ್ಯಕರ್ತರಾಗಿ ಶ್ರಮಿಸಿದ ವಾಸುದೇವ ಇಡ್ಯಾಡಿ ಇವರಿಗೆ ಭಜನಾ ಮಂಡಳಿಯ ಪರವಾಗಿ ಗೌರವ ಸಮರ್ಪಣೆ ಅವರ ಮನೆಯಲ್ಲಿ ನಡೆಸಲಾಯಿತು. 
ನಂತರ ಗಂಗಾಧರ ಪೆರಿಯಡ್ಕ ಇವರ ಮನೆಯ ವಠಾರದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ದ ಸವಿನೆನಪಿಗಾಗಿ ತೆಂಗಿನ ಸಸಿ ನೆಡುವ ಕಾರ್ಯಕ್ರಮವನ್ನು ಶ್ರೀಧರ ಇಡ್ಯಾಡಿ ನೆರವೇರಿಸಿದರು.
ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ಕುಕ್ಕುಜೆ, ಗ್ರಾ.ಪಂ. ಮಾಜಿ ಸದಸ್ಯರಾದ ಸತೀಶ್ ಅಂಗಡಿಮೂಲೆ, ಬೂತ್ ಸಮಿತಿ ಕಾರ್ಯದರ್ಶಿಯಾದ ದಯಾನಂದ ಮೆದು, ಗೌರವಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ  ,ಗಂಗಾಧರ ಪೆರಿಯಡ್ಕ, ಮಹಾಬಲ ಪೆರಿಯಡ್ಕ, ಶ್ರೀಧರ ಇಡ್ಯಾಡಿ, ಚೇತನ್ ಇಡ್ಯಾಡಿ, ಜಗದೀಶ್ ಇಡ್ಯಾಡಿ, ರಾಜೇಶ್ ಇಡ್ಯಾಡಿ, ರಾಜೇಂದ್ರ ಪ್ರಸಾದ್ ಇಡ್ಯಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.