ಪಾದೆಬಂಬಿಲ :ಶ್ರೀದುರ್ಗಾ ಭಜನ ಮಂದಿರದಲ್ಲಿ ದೀಪ ಪೂಜನ,ರಾಮನಾಪ ಜಪ

Puttur_Advt_NewsUnder_1
Puttur_Advt_NewsUnder_1
ಸವಣೂರು : ಅಯೋಧ್ಯೆಯಲ್ಲಿ ನಡೆದ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ದ ಅಂಗವಾಗಿ ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ದೀಪ ಪೂಜನ,ರಾಮನಾಮ ತಾರಕ ಮಂತ್ರ ಜಪ,ರಕ್ಷಾ ಬಂಧನ ,ಅಯೋಧ್ಯೆ ಹೋರಾಟದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಆ.5 ರಂದು ರಾತ್ರಿ‌ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ,ಭಜನ ಮಂದಿರದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಅವರು ಹಿಂದೂಗಳ ಅಸ್ಮಿತೆಯ ಪ್ರತೀಕವಾದ ರಾಮ‌ಜನ್ಮ‌ ಭೂಮಿಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವಾಗುತ್ತಿರುವುದು ಇಡೀ ಹಿಂದೂಗಳಿಗೆ ಸಂಭ್ರಮದ ವಿಚಾರ.ಸುಧೀರ್ಘ ಆಂದೋಲನದ ಬಳಿಕ ಶ್ರೀರಾಮನಿಗೆ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಮೂಲಕ ಶ್ರೀರಾಮನ ಅನುಗ್ರಹ ಎಲ್ಲರಿಗೂ ಪ್ರಾಪ್ತವಾಗಿದೆ.ಇಂದಿನ ಸಂಭ್ರಮಕ್ಕೆ ಕಾರಣರಾಗಿ ವೀರ‌ಮರಣವನ್ನಪ್ಪಿದವರು ಕಾರಣ.ಮಂದಿರ ನಿರ್ಮಾಣದ ಕಾರ್ಯ ಅಂತಹವರಿಗೆ‌ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದೆ ಎಂದರು.
ವೇದಿಕೆಯಲ್ಲಿ ಭಜನ ಮಂದಿರದ ಅಧ್ಯಕ್ಷ ವಿಜಯ ಬಿ.ಜೆ,ಕಾರ್ಯದರ್ಶಿ ಸಚಿನ್,ಸ್ಥಾಪಕಾಧ್ಯಕ್ಷ ಸೋಮಪ್ಪ ಗೌಡ ,ಮಾಜಿ ಅಧ್ಯಕ್ಷರಾದ ಲೋಕಯ್ಯ ಗೌಡ,ಹೊನ್ನಪ್ಪ ಗೌಡ ಬಿ.ಜೆ,ಜಯಾನಂದ ಬಿ.ಜೆ,ಸತೀಶ್ ಅಂಗಡಿಮೂಲೆ ಹಾಗೂ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮಾಜಿ ಕಾರ್ಯದರ್ಶಿ ಪುಟ್ಟಣ್ಣ ಪರಣೆ ಸ್ವಾಗತಿಸಿ ,ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.