Breaking News

ಕೃಷ್ಣನಗರದಲ್ಲಿ ಅಯೋಧ್ಯಾ ಕರಸೇವಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕೃಷ್ಣನಗರ, ಶಿವಶಕ್ತಿ ಯುವಕಮಂಡಲ ಕೃಷ್ಣನಗರ ಇದರ ನೇತೃತ್ವದಲ್ಲಿ ಅಯೋಧ್ಯೇಯ ಹೋರಾಟದಲ್ಲಿ ಭಾಗವಹಿಸಿದ ಸ್ಥಳೀಯರಾದ ಶ್ರೀ ಸುಂದರನಾಥ್ ಕೇಪುಳು, ಶ್ರೀ ಉದಯ ಕುಮಾರ್ ಆಚಾರ್ಯ, ಶ್ರೀ ಗಣೇಶ್ ಆಚಾರ್ಯರನ್ನು ನಗರ ಸಭಾ ಸದಸ್ಯರಾದ ಶ್ರೀಮತಿ ಲೀಲಾವತಿ ಅಣ್ಣು ನಾಯ್ಕ ರವರ ಮನೆಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಉದಯ ಕುಮಾರ್ ಆಚಾರ್ಯರು ಹೋರಾಟದ ಅನುಭವವನ್ನು ಹಂಚಿಕೊಂಡರು. ಸಭೆಯಲ್ಲಿ ಅಣ್ಣು ನಾಯ್ಕ, ರವಿ ಆಚಾರ್ಯ ಕೃಷ್ಣನಗರ, ಪ್ರಶಾಂತ್ ಕೃಷ್ಣನಗರ, ನಾರಾಯಣ ಗೌಡ, ಪುಷ್ಪರಾಜ್ (ಮುನ್ನ), ಪ್ರಕಾಶ್K.R, ಹರೀಶ್ ಆಚಾರ್ಯ, ದಿನೇಶ್ ಆಚಾರ್ಯ, ಶ್ರೀನಿವಾಸ ನಾಯ್ಕ, ಲಲಿತಾ ನಾಯಕ್, ವೇದಾವತಿ ಆಚಾರ್ಯ ಮತ್ತು ಮಾಲಿನಿ ಆಚಾರ್ಯ ಉಪಸ್ಥಿತರಿದ್ದರು. ರವಿ ಆಚಾರ್ಯ ಕೃಷ್ಣನಗರ ಸ್ವಾಗತಿಸಿದರು. ಪ್ರಶಾಂತ್ ಕೃಷ್ಣನಗರ ಧನ್ಯವಾದ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.