ಕಾಣಿಯೂರು ಬಿಜೆಪಿ ಗ್ರಾ.ಸಮಿತಿ ವತಿಯಿಂದ ಅಯೋಧ್ಯೆ ಕರಸೇವಕರಿಗೆ ಗೌರವ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: 1992 ರ ಅಯೋಧ್ಯೆಯ ಹೋರಾಟದಲ್ಲಿ ಕರಸೇವಕರಾಗಿ ಪಾಲ್ಗೊಂಡ ಕಾಣಿಯೂರು ಭಾಗದ ಮಹನೀಯರಾದ ಶ್ರೀ ವೆಂಕಟ್ರಮಣ ಗೌಡ ಮಾದೋಡಿ, ಶ್ರೀ ಪುರೋಷೋತ್ತಮ ಗೌಡ ಅಗಳಿ,ಕಾಣಿಯೂರು,ಮತ್ತು ಶ್ರೀ ಚಂದ್ರಶೇಖರ ಚೆಟ್ಟಿಯಾರ್ ಅವರ ಪರವಾಗಿ ಅವರ ಅಣ್ಣ ಶ್ರೀ ಕೃಷ್ಣ ಚೆಟ್ಟಿಯಾರ್ ರವರಿಗೆ ಗುಲಾಬಿ ಹೂ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು.

ಮಹನೀಯರನ್ನು ಗುರುತಿಸುವ ಸಂದರ್ಭದಲ್ಲಿ ಹಿರಿಯರಾದ ಬೆಳಿಯಪ್ಪ ಗೌಡ ದೇವರತ್ತಿಮಾರು, ಲಕ್ಷ್ಮಣ ಗೌಡ ಮುಗರಂಜ, ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಗಣೇಶ್ ಉದನಡ್ಕ, ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಆನಂದ ಗೌಡ ಮೇಲ್ಮನೆ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷರಾದ ವಾಸುದೇವ ನಾಯ್ಕ್ ತೋಟ,ಕಾರ್ಯದರ್ಶಿ ಜಯಂತ ಅಬೀರ,ಸದಸ್ಯ ಹರೀಶ್ ಮುಗರಂಜ, ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಮಣ್ಣ ಗೌಡ ಮುಗರಂಜ ಹಾಗೂ ಸುರೇಶ್ ಓಡಬಾಯಿ ಉಪಸ್ಥಿತರಿದ್ದರು.

ಭಜನಾಸೇವೆ,ಗಿಡನೆಡುವ ಕಾರ್ಯಕ್ರಮ: ಅಯೋಧ್ಯೆ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ಶೀಘ್ರವಾಗಿ ನೆರವೇರಲೆಂದು,ಭೂಮಿಪೂಜೆಯ ಶುಭದಿನದ ನಿಮಿತ್ತ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಸೇವೆ ನಡೆಯಿತು. ಈ ಶುಭದಿನದ ಸವಿನೆನಪಿಗಾಗಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ವಠಾರದಲ್ಲಿ ಗಿಡವನ್ನು ನೆಡಲಾಯಿತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.