Breaking News

ಕಡಬ ಮೆಸ್ಕಾಂನಲ್ಲಿ ಜನಪ್ರತಿನಿಧಿಗಳಿಂದ ಚರ್ಚೆ: ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ

Puttur_Advt_NewsUnder_1
Puttur_Advt_NewsUnder_1

ಕಡಬ ಮೆಸ್ಕಾಂ ನಲ್ಲಿ ಜನಪ್ರತಿನಿಧಿ ಗಳಿಂದ. ಚರ್ಚೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕಡಬ ಮೆಸ್ಕಾಂ ಕಚೇರಿಯಲ್ಲಿ ಕಡಬ ವ್ಯಾಪ್ತಿಯ ಜನಪ್ರತಿನಿದಧಿಗಳು ಕಾಂಗ್ರೇಸ್ ಮುಖಂಡರು ಆ 6ರಂದು ವಿದ್ಯುತ್ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮಾಹಿತಿ ಪಡೆದು ಕೊಂಡರು.

ಕಡಬ ತಾ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಕಳೆದ 6 ತಿಂಗಳ ಹಿಂದೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಅಧಿಕಾರಿಗಳು ಕೂಡಲೇ ಸ್ಪಂದಿಸಿ ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದ್ದೇವೆ ಅದು ಏನೆಲ್ಲಾ ಕಾರ್ಯಗತವಾಗಿದೆ ಎಂದು ಕೇಳಿದ ಜಿ ಪಂ ಸದಸ್ಯ ಪಿ ಪಿ ವರ್ಗೀಸ್ ರವರು 33ಕೆ ವಿ ವಿದ್ಯುತ್ ಅಳವಡಿಸುವುದು ಅಲ್ಲದೆ 12’5 M V A  ಸಾಮರ್ಥ್ಯದ ಹೆಚ್ಚು ವರಿ ಪರಿವರ್ತಕ ಸೇರಿದಂತೆ ಈ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಇದೆ ಎಂದರು. ಈ ಬಗ್ಗೆ ಮಾಹಿತಿ ನೀಡಿದ ಕಡಬ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಸಜಿ ಕುಮಾರ್ ರವರು ಈಗಾಗಲೇ 12’5 MVA ಸಾಮರ್ಥ್ಯದ ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು ಪರಿವರ್ತಕ ಅಲವಡಿಸಲು ಬಾಕಿ ಇದ್ದು ಮುಂದಿನ 1ತಿಂಗಳ ಒಳಗೆ ಕೆಲಸ ಪೂರ್ತಿಯಾಗಲಿದೆ. ಪುತ್ತೂರು ಕಡಬ 33ಕೆವಿ ಲೈನ್ ಆಲಂಕಾರು ವರೇಗೆ ದ್ವೀಮಾರ್ಗ ಕಾಮಗಾರಿ ಮುಕ್ತಾಯದ ಹಂತದಲ್ಲಿ ದ್ದು ಒಟ್ಟು 25ಕಿ ಮೀ ಕಾಮಗಾರಿ ಯಲ್ಲಿ 22ಕಿ ಮೀ ಕಾಮಗಾರಿ ಈಗಾಗಲೇ ಮುಕ್ತಾಯ ಗೊಂಡಿದ್ದು ಹಂತ ಹಂತವಾಗಿ 14ದಿನಗಳಲ್ಲಿ ವಿದ್ಯುತ್ ನಿಲುಗಡೆ ಗೊಳಿಸಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು. ಮುಂದಿನ ಬೇಸಿಗೆ ಸಮಯಕ್ಕಾಗುವಾಗ ಕಡಬ ತಾಲೂಕು ವ್ಯಾಪ್ತಿಯಲ್ಲಿ ಸಂಪೂರ್ಣ ಗುಣಮಟ್ಟದ ವಿದ್ಯುತ್ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಕಡಬ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ತಾ ಪಂ ಸದಸ್ಯ ಗಣೇಶ್ ಗೌಡ ಕೈಕುರೆ ವಿವಿಧ ಸಮಸ್ಯೆಗಳ ಬಗ್ಗೆ ಸ್ಪಂದಿಸುವಂತೆ ಕೇಳಿಕೊಂಡ ಅವರು ಮೀನಾಡಿ ಹತ್ತಿರ ಹೆಚ್ಚುವರಿ ಪರಿವರ್ತಕ ಅಳವಡಿಸುವಂತೆ ತಿಳಿಸಿದರು. ಜಿ ಪಂ ಸದಸ್ಯ ಪಿಪಿ ವರ್ಗೀಸ್ ರವರುಕಡಬದ ಮುಳಿಮಜಲು ಕೊಪ್ಪ. ಮೀನಾಡಿ ನೈಲ ಬಳಿ ಮದ್ಯಂತರ. ಕಂಬ ಅಳವಡಿಸುವಂತೆ ತಿಳಿಸಿದರು (ಕಡಬ ಗ್ರಾ ಪಂ ಮಾಜಿ ಅಧ್ಯಕ್ಷ ಕೆ ಯಂ ಹನೀಪ್ ರವರು ಮಾತನಾಡಿ ಕೃಷಿ ಪಂಪು ಕನೆಕ್ಷನ್ ಇದ್ದವರಿಂದ ಆಧಾರ್ ಸಂಖ್ಯೆ ಪಡೆದು ಕೊಳ್ಳುವ ಬಗ್ಗೆಚರ್ಚಿಸಿ ಮಾಹಿತಿ ಪಡೆದು ಕೊಂಡರು. ಕಡಬ ಬ್ಲಾಕ್ ಕಾಂಗ್ರೇಸ್ ಕಿಸಾನ್ ಘಟಕದ ನೂತನ ಅದ್ಯಕ್ಷ ಭವಾನಿಶಂಕರ್ ಬಿಳಿನೆಲೆ, ವಲಯ ಕಾಂಗ್ರೇಸ್ ಅದ್ಯಕ್ಷ ಮನಮೋಹನ, ಗೋಳ್ಯಾಡಿ ಕಡಬ ವರ್ತಕ ಸಂಘದ ಅದ್ಯಕ್ಷ ಶಿವರಾಮ ಯಂ ಯಸ್, ನಿವ್ರತ್ತ ಪೋಲೀಸ್ ಅಧಿಕಾರಿ ವೆಂಕಟರಮಣ ಗೌಡ ಪಾಂಗ ತಮ್ಮ ತಮ್ಮ ವ್ಯಾಪ್ತಿಯ ಸಮಸ್ಯೆ ಗಳ ಬಗ್ಗೆ ಚರ್ಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.