Breaking News

ಕಡಬ ತರಕಾರಿ ವ್ಯಾಪಾರಸ್ಥ ದಿ. ಸುಂದರ ನಾಕ್‌ರವರ ಉತ್ತರಕ್ರಿಯೆ-ಶ್ರದ್ದಾಂಜಲಿ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬದಲ್ಲಿ ಹಲವಾರು ವರ್ಷಗಳ ಕಾಲ ತರಕಾರಿ ವ್ಯಾಪಾರಸ್ಥರಾಗಿದ್ದ ಕೋಡಿಂಬಾಳ ಗ್ರಾಮದ ಕುಂಡಿಲು ನಿವಾಸಿ ಸುಂದರ ನಾಕ್ ಅವರು ಜು.27ರಂದು ನಿಧನರಾಗಿದ್ದು ಅವರ ಉತ್ತರಕ್ರಿಯೆ ಕಾರ‍್ಯಕ್ರಮ ಹಾಗೂ ಶ್ರದ್ದಾಂಜಲಿ ಸಮರ್ಪಣೆ ಆ.೬ರಂದು ಅವರ ಕುಂಡಿಲು ಮನೆಯಲ್ಲಿ ಜರಗಿತು.


ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಕ್ ಅವರು ಮೃತ ಸುಂದರ ನಾಕ್ ನುಡಿ ನಮನ ಸಲ್ಲಿಸಿದರು. ಬಳಿಕ ಎಲ್ಲರೂ ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಈ ಸಂದರ್ಭದಲ್ಲಿ ಮಹಾಲಿಂಗ ನಾಕ್ ತೆಂಕಿಲ, ನಾರಾಯಣ ನಾಕ್ ಪಂಜಳ, ಭಾಗಿರಥಿಸುಂದರ ನಾಕ್, ವಿಠಲ ನಾಕ್ ಕುಂಡಿಲು, ರಘುರಾಮ ನಾಕ್ ಕುಂಡಿಲು, ಮಹಾಬಲ ನಾಕ್ ಮೇಲಿನ ಮನೆ, ಅಶೋಕ್ ಕುಮರ್ ವಜ್ರಪಾಣಿ, ಜಯರಾಮ ಪಡೆಜ್ಜಾರು, ನಿತಿನ್ ಕುಮಾರ್, ಚಂದ್ರಶೇಖರ ಕರ್ಕೆರ, ಮನೋಹರ್ ರೈ ಬೆದ್ರಾಜೆ, ಸತೀಶ್ ನಾಕ್ ಮೇಲಿನ ಮನೆ, ಹರೀಶ್ ನಾಕ್ ಸುರಭಿ, ದಯಾನಂದ ಗ್ಲೋಬ್, ಹರೀಶ್ ಅಗ್ರಶಾಲೆ, ಆನಂದ ಕೊಂಕ್ಯಾಡಿ, ಬಾಲಕೃಷ್ಣ ಗೌಡ ಹೊಸಮನೆ, ರಮೇಶ್ ನಾಕ್, ವಿಘ್ನೇಶ್ ನಾಕ್ ಕೊಠಾರಿ, ಉಮೇಶ್ ನಾಕ್ ಕಡಬ, ಶಿಕ್ಷಕ ಮಾಧವ ಮೊದಲಾದವರು ಉಪಸ್ಥಿತರಿದ್ದು ಮೃತರಿಗೆ ಶ್ರದ್ದಾಂಜಲಿ ಸಮರ್ಪಿಸಿದರು. ದಿ.ಸುಂದರ ನಾಕ್ ಅವರ ಪುತ್ರ ದಿವಾಕರ ಎಲ್ಲರನ್ನು ಬರಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.