ಅರ್ಕ ಶ್ರೀ ದುರ್ಗಾ ಯುವಕ ವೃಂದದ ವತಿಯಿಂದ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಅರ್ಕ ಶ್ರೀ ದುರ್ಗಾ ಯುವಕ ವೃಂದದ ವತಿಯಿಂದ ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಳೆದ ೩೫ ವರ್ಷಗಳಿಂದ ಕೊಡಿಪಾಡಿ ಗ್ರಾಮ ಸೇವಕರಾಗಿರುವ ಬಾಳಪ್ಪ ಗೌಡ ಗಡಿಮಾರು, ಕಿರಿಯ ಆರೋಗ್ಯ ಸಹಾಯಕಿ ತೇಜಾಕ್ಷಿ ಹರಿಶ್ಚಂದ್ರ, ಆಶಾಕಾರ್ಯಕರ್ತೆಯರಾದ ಅನಿತಾ ಕೋಡಿಮೂಲೆ, ನೇತ್ರಾವತಿ ಹನಿಯೂರು, ಪ್ರತಿಮಾ ನಾಯ್ಕ್ ಹನಿಯೂರು, ಹಾಗೂ ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಅರ್ಕ ನಿವಾಸಿ ಜಯರಾಮ ನಾಯ್ಕ್-ಜ್ಯೋತಿ ದಂಪತಿಯ ಪುತ್ರಿ ಪೌರ್ಣಿಕಾ ಜೆ. ಹಾಗೂ ಪೆಲತ್ತಡಿ ನಿವಾಸಿ ಲಿಂಗಪ್ಪ ಪೂಜಾರಿ – ಚಂದ್ರಾವತಿ ದಂಪತಿಯ ಪುತ್ರಿ ಸುಪ್ರಿತಾರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಿಪಾಡಿ ಗ್ರಾ.ಪಂ ಮಾಜಿ ಸದಸ್ಯ ಗಿರಿಧರ ಗೌಡ ಗೋಮುಖರವರು ವಹಿಸಿದ್ದರು. ಶ್ರೀ ದುರ್ಗಾ ಯುವಕ ವೃಂದದ ಅದ್ಯಕ್ಷರಾದ ಕೇಶವ ಸುವರ್ಣ ಪೆಲತ್ತಡಿ, ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದ ಮಾಜಿ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ ಪೆಲತ್ತಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಾಹಯ ಸಂಘದ ಸೇವಾನಿರತೆ ಜ್ಯೋತಿ ಜಯರಾಮ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಶ್ಚಿತ್ ಬೈರಂಗಡಿ ಪ್ರಾರ್ಥಿಸಿದರು. ಮನ್ಮತ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದ ಕಾರ್ಯದರ್ಶಿ ಪ್ರಶಾಂತ್ ಅರ್ಕ, ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರದ ಭಜನಾ ಸಮಿತಿ ಅಧ್ಯಕ್ಷರಾದ ನವೀನ್ ಪೂಜಾರಿ ಪೆಲತ್ತಡಿ, ಸಚಿನ್ ಬಾಳೆಜಾಲು, ಸಚ್ಚಿದಾನಂದ ಹನಿಯೂರು, ತಿಲಕ್ ಅರ್ಕ, ರಾಮ್ ಪ್ರಸಾದ್ ಪೆಲತ್ತಡಿ, ಕಿಶೋರ್ ಅರ್ಕ, ಲೋಹಿತ್ ಅರ್ಕ, ರತೀಶ್ ಅರ್ಕ, ಕೃಷ್ಣಪ್ರಸಾದ್ ಪೆಲತ್ತಡಿ, ಶಿವರಾಮ್ ಶೆಟ್ಟಿ ಅರ್ಕ, ತೇಜಸ್ ಗೋಮುಖ, ಸಾತ್ವಿಕ್ ಅರ್ಕ, ಅಮಿತಾ ಅರ್ಕ, ಸುಹಾಸ್ ಹನಿಯೂರು, ದಿನೇಶ್ ನಾಯ್ಕ್ ಅರ್ಕ, ಪವನ್ ಅರ್ಕ, ಸತೀಶ್ ಬಟ್ರುಪ್ಪಾಡಿ, ದೀಕ್ಷಿತ್ ಬೈರಂಗಡಿ, ನೀಕ್ಷಿತ್ ಬೈರಂಗಡಿ, ಭುವನ, ಭುನೇಶ್ ಅರ್ಕ, ಜೀವಿತ್ ನಾಯ್ಕ್ ಅರ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.