`ಕೋಮು ಸಂಘರ್ಷ ಉಂಟು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ’ – `ಸುದ್ದಿ’ ಸಂದರ್ಶನದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

Puttur_Advt_NewsUnder_1
Puttur_Advt_NewsUnder_1
  • ಕೋವಿಡ್ ನಿಯಂತ್ರಣಕ್ಕೆ ಕ್ರಮ
  • ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ಪಡೆದರೆ ಕಾನೂನು ಕ್ರಮ
  • ಯುವಕರಿಗಾಗಿ ಉದ್ಯೋಗ ಸೃಷ್ಟಿ
  • ಗಡಿ ಸಮಸ್ಯೆ ಇತ್ಯರ್ಥಕ್ಕೆ ಚಿಂತನೆ
  • ಪ್ರಾಕೃತಿಕ ವಿಕೋಪ ತಡೆಯಲು ಸಿದ್ಧತೆ

ಪುತ್ತೂರು: ಕೋಮು ಸಂಘರ್ಷ ಉಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳು ಯಾರೇ ಆಗಿದ್ದರೂ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರು ಹೇಳಿದ್ದಾರೆ. ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ `ಸುದ್ದಿ ಬಿಡುಗಡೆ’ ಪತ್ರಿಕೆ ಮತ್ತು `ಸುದ್ದಿ ಯೂ ಟ್ಯೂಬ್ ಚಾನೆಲ್’ ಗೆ ಸಂದರ್ಶನ ನೀಡಿದ ದ.ಕ. ಜಿಲ್ಲೆಯ ೧೩೦ನೇ ಜಿಲ್ಲಾಧಿಕಾರಿಯವರೂ ಜಿಲ್ಲಾ ದಂಡಾಧಿಕಾರಿಯವರೂ ಆಗಿರುವ ಡಾ. ರಾಜೇಂದ್ರ ಕೆ.ವಿ.ಯವರು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ವಿಶೇಷ ಆದ್ಯತೆ ನೀಡಲಾಗುವುದು, ಕೋಮು ಭಾವನೆ ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಗೋ ಸಾಗಾಟ, ನೈತಿಕ ಪೊಲೀಸ್‌ಗಿರಿ ಮುಂತಾದ ವಿಚಾರಗಳು ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ಅವಕಾಶ ನೀಡದೇ ಯಾವುದೇ ಸಂದರ್ಭದಲ್ಲೂ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಈ ನೆಲದಲ್ಲಿ ಭವ್ಯ ರೀತಿಯ ಕಾನೂನಿನ ಸುವ್ಯವಸ್ಥೆ ಇದೆ. ಆದ್ದರಿಂದ ಯಾರು ಕೂಡ ಯಾವುದೇ ಹಂತದಲ್ಲೂ ಕಾನೂನನ್ನು ಉಲ್ಲಂಸಿ ಚಟುವಟಿಕೆ ನಡೆಸಿದರೆ ಯಾವುದೇ ಮುಲಾಜಿಲ್ಲದೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ, ಬೆಳಗಾವಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ತೀರ್ಥಹಳ್ಳಿಯ ಹಳ್ಳಿ ಎಂಬಲ್ಲಿಯ ನಿವಾಸಿ, ಐಎಎಸ್ ಅಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರು `ಸುದ್ದಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗವನ್ನು ಪ್ರಕಟಿಸಲಾಗಿದೆ.

ಕೋವಿಡ್ ನಿಯಂತ್ರಣಕ್ಕೆ ಕ್ರಮ: ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯ ನಾನಾ ಇಲಾಖೆಗಳು ಕಳೆದ ೩-೪ ತಿಂಗಳಿಂದ ಹಲವು ರೀತಿಯಲ್ಲಿ ಶ್ರಮಿಸಿದೆ. ಅಲ್ಲದೆ, ಜಿಲ್ಲೆಗೆ ಹೊರ ರಾಷ್ಟ್ರ, ರಾಜ್ಯದಿಂದ ಬಂದವರಿಗೆ ಈ ಸಂದರ್ಭದಲ್ಲಿ ಜಿಲ್ಲಾಡಳಿತವೂ ಹಲವು ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ. ಹಂತ ಹಂತವಾಗಿ ೩.೦ ಲಾಕ್‌ಡೌನ್‌ನ ಅನುಸಾರವಾಗಿ ಕೆಲವೊಂದು ಮಾರ್ಗಸೂಚಿಗಳನ್ನು ತೆಗೆಯಲಾಗುತ್ತಿದೆ. ಅಲ್ಲದೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕೋವಿಡ್-೧೯ನ ಜಾಗೃತಿ ಕುರಿತು ಮಾಹಿತಿ ಕಾರ್ಯಾಗಾರ ನಡೆದಿದ್ದು, ಕೊರೋನಾ ವಾರಿಯರ್ಸ್‌ಗಳ ಮುಖೇನ ಕೊವೀಡ್-೧೯ ಬಗ್ಗೆ ಜನರು ಎಚ್ಚೆತ್ತುಕೊಳ್ಳುವಂತೆ ಅರಿವು ಮೂಡಿಸಲಾಗಿದೆ. ಸೋಂಕಿತ ವ್ಯಕ್ತಿಗಳಿರುವ ಝೋನ್‌ಗಳನ್ನು ಹೊರತುಪಡಿಸಿ `ಸಂಡೇ ಲಾಕ್‌ಡೌನ್’ ಆ.೫ರಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆಗೊಂಡು ಅಂತರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶವಿರುವುದರಿಂದ ಕೊರೋನಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಸಾಕಷ್ಟು ಪ್ರಮಾಣದಲ್ಲಿರಬೇಕಾಗುತ್ತದೆ. ೫ಕ್ಕಿಂತ ಹೆಚ್ಚು ಲ್ಯಾಬೋಟರಿಗಳಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ಗಳು ನಡೆಯುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಈ ಟೆಸ್ಟ್‌ಗಳನ್ನು ಮಾಡಿಸಿಕೊಂಡು ಆದರಲ್ಲಿ ಸೋಂಕಿತ ವ್ಯಕ್ತಿ ಮತ್ತು ಅವರ ಜೊತೆ ಸಂಪರ್ಕವಿದ್ದ ವ್ಯಕ್ತಿಗಳ ಮತ್ತು ರೋಟ್ ಮ್ಯಾಪ್‌ಗಳ ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತದೆ. ಬಳಿಕ ಅವರನ್ನು ಕ್ವಾರೆಂಟೈನ್‌ನಲ್ಲಿ ಇರಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಸಂಬಂಧಪಟ್ಟ ಗ್ರಾಮೀಣ ಮಟ್ಟದ ಅಧಿಕಾರಿಗಳದ್ದು ಬಹುದೊಡ್ಡ ಕರ್ತವ್ಯವಾಗಿರುತ್ತದೆ. ಪಾಸಿಟಿವ್ ಇರುವ ರೋಗಿಯನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯದೆ ಸ್ಥಳೀಯ ಮಟ್ಟದಲ್ಲಿರುವ ಕೋವಿಡ್ ಕೇರ್ ಸೆಂಟರ್, ತಾಲೂಕು ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ೩೦ರಿಂದ ೫೦ರಷ್ಟೂ ಆಕ್ಸಿಜನ್ ಸೌಲಭ್ಯವುಳ್ಳ ಬೆಡ್‌ಗಳ ವ್ಯವಸ್ಥೆಯಿರುವುದರಿಂದ ಅಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಖಾಸಗಿ ಆಸ್ಪತ್ರೆಗೆ ಅಥವಾ ಮಂಗಳೂರಿನ ವೆನ್ಲಾಕ್‌ಗೆ ಗಂಟಲು ದ್ರವ ಪರೀಕ್ಷಿಸಲು ಅಥವಾ ಚಿಕಿತ್ಸೆಗಾಗಿ ಬರಲು ಜನರು ಭಯಪಡುತ್ತಾರೆ. ರೋಗ ಲಕ್ಷಣ ಇರುವವರು ಕೊರೋನಾ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಅನ್ನು ತಮ್ಮ ಊರುಗಳಲ್ಲಿಯೇ ಮಾಡಿಕೊಂಡು ಸೋಂಕು ದೃಢವಾದರೆ ಹತ್ತಿರದ ಆರೋಗ್ಯ ಇಲಾಖೆಯ ಸಂಪರ್ಕದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕಮ್ಯೂನಿಟಿ ಇನ್ವಾಲ್‌ಮೆಂಟ್ ಮತ್ತು ಕೊರೋನಾ ನಿರ್ಮೂಲನೆ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಪೋರ್ಸ್, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿರುವವರಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದನ್ನು ಮಾಡಬೇಕು.

ಖಾಸಗಿ ಆಸ್ಪತ್ರೆಗಳು ಹೆಚ್ಚಿನ ದರ ಪಡೆದರೆ ಕ್ರಮ: ಈಗಾಗಲೇ ೮ ಮೆಡಿಕಲ್ಸ್ ಕಾಲೇಜು ಹಾಗೂ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳೊಂದಿಗೆ ಒಂದನೇ ಹಂತದ ಸಭೆಯನ್ನು ನಡೆಸಲಾಗಿದೆ. ಅದರಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಆಯುಷ್ಮಾನ್ ಕಾರ್ಡ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಇದ್ದವರಿಗೆ ಕೆಲವು ರಿಯಾಯಿತಿಯನ್ನು ನೀಡಲಾಗುತ್ತದೆ. ಕೋವಿಡ್ ಚಿಕಿತ್ಸೆಗೆ ಸರಕಾರದಿಂದ ಬಿಲ್ ದರದ ಪಟ್ಟಿಯನ್ನು ಕಳುಹಿಸಲಾಗಿದೆ. ಕೆಎಂಎಇಯಡಿಯ ನೋಂದಾವಣಿಯಾಗಿರುವ KARNATAKA PRIVATE MEDICAL ESTABLISHMENTS ಅಕ್ಟ್ ಪ್ರಕಾರ ನರ್ಸಿಂಗ್ ಹೋಂ, ಮೆಡಿಕಲ್ ಕಾಲೇಜು, ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಕೋವಿಡ್ ರೋಗಿಗಳಿಗೆ ಹೆಚ್ಚಿನ ಬಿಲ್‌ದರವನ್ನು ಮಾಡದಂತೆ ನಿರ್ದೇಶನ ನೀಡಿದೆ. ಕೋವಿಡ್‌ನಿಂದ ಡಿಸ್ಜಾರ್ಚ್ ಆದ ರೋಗಿಯ ಬಿಲ್‌ನ್ನು ಜಿಲ್ಲಾಡಳಿತಕ್ಕೆ ಕಳುಹಿಸುವಂತೆ ತಿಳಿಸಿzವೆ. ಕಾನೂನು ಉಲ್ಲಂಘನೆ ಮಾಡಿ ಜನರಿಗೆ ವಂಚಿಸುವ ಕುರಿತು ಜನರು ಸ್ಪಷ್ಟವಾಗಿ ದೂರು ನೀಡಿದರೆ ಅಂತಹ ಆಸ್ಪತ್ರೆಯ ವಿರುದ್ಧ ಜಿಲ್ಲಾಡಳಿತದಿಂದ ರಚಿತವಾದ ಸಮಿತಿ ಕಾನೂನು ಕ್ರಮಕೈಕೊಳ್ಳುತ್ತದೆ.

ಯುವಕರಿಗಾಗಿ ಉದ್ಯೋಗ ಸೃಷ್ಟಿ: ಲಾಕ್‌ಡೌನ್ ಸಂರ್ಭದಲ್ಲಿ ಹೊರ ರಾಷ್ಟ್ರ, ರಾಜ್ಯದಿಂದ ಬಂದು ಉದ್ಯೋಗವನ್ನು ಕಳೆದುಕೊಂಡು ಊರಲ್ಲಿರುವ ಯುವಜನತೆಗೆ ಊರಲ್ಲಿಯೇ ಕಾರ್ಪೋರೇಶನ್, ಇಂಡಸ್ಟ್ರೀಸ್ ಕ್ಷೇತ್ರಗಳಲ್ಲಿ ಅವರ ಕೌಶಲ್ಯ ಮತ್ತು ಶೈಕ್ಷಣಿಕ ಸಾiರ್ಥ್ಯ, ವಿದ್ಯಾಭ್ಯಾಸದ ಕುರಿತಾದ ನಕ್ಷೆಯನ್ನು ಪಡೆದುಕೊಂಡು, ಬಳಿಕ ಸ್ಥಳೀಯ ಜನಪ್ರತಿನಿಧಿಗಳು, ಸಚಿವರು ಮತ್ತು ಮಾಧ್ಯಮದವರ ಸಲಹೆ ಅನುಸರಿಸಿ ಜಿಲ್ಲೆಯಲ್ಲಿರುವ ಯುವಕ/ಯುವತಿಯರಿಗೆ ಉದ್ಯೋಗ ನೀಡುವ ಕಾರ್ಯದ ಕುರಿತು ಯೋಚಿಸಲಿzವೆ.

ಗಡಿ ಸಮಸ್ಯೆ ಇತ್ಯರ್ಥಕ್ಕೆ ಚಿಂತನೆ: ತಲಪಾಡಿ ಚೆಕ್‌ಪೊಸ್ಟ್‌ಗೆ ಭೇಟಿ ನೀಡಿ ಕೇರಳ ಮತ್ತು ರಾಜ್ಯದ ಗಡಿ ಪ್ರದೇಶಗಳಿರುವ ಜಾಲ್ಸೂರುನಿಂದ ತಲಪಾಡಿಯವರೆಗೂ ಕೆಲವೊಂದು ರಸ್ತೆಗಳು ಬಂದ್ ಆಗಿರುವುದನ್ನು ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿzನೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಅಂತರಾಜ್ಯ ಗಡಿ ಭಾಗಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ, ಇನ್ನೂ ಕೆಲವು ಕಡೆಗಳಲ್ಲಿ ಗಡಿಭಾಗದ ರಸ್ತೆಯನ್ನು ತೆರವು ಮಾಡುವ ಬಗ್ಗೆ ಚರ್ಚಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ, ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಹಾರದ ಬಗ್ಗೆ ಚಿಂತಿಸಲಿzವೆ. ಈ ಬಗ್ಗೆ ಸರಕಾರ ನೀಡುವ ಆದೇಶದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.

ಪ್ರಾಕೃತಿಕ ವಿಕೋಪ ತಡೆಯಲು ಸಿದ್ಧತೆ: ನೆರೆ, ಪ್ರವಾಹ, ಪ್ರಾಕೃತಿಕ ವಿಕೋಪಗಳ ಬಗ್ಗೆ ತಹಶೀಲ್ದಾರ್, ಪೊಲೀಸ್ ಇಲಾಖೆ, ಆಗ್ನಿಶಾಮಕ ದಳ, ಗ್ರಾ.ಪಂ. ಅಧಿಕಾರಿಗಳಿಗೆ ಜಿಲ್ಲಾ ಪ್ರಾಕೃತಿಕ ವಿಕೋಪ ಪ್ರಾಧಿಕಾರದ ಸಭೆಯಲ್ಲಿ ಸಂಪೂರ್ಣ ಮಾಹಿತಿ ತಿಳಿಸಿzನೆ. ಈ ತಿಂಗಳಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚುಮಳೆಯಾಗಿರುವುದರಿಂದ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ನದಿ, ಹೊಳೆ ಬದಿಯಲ್ಲಿ ವಾಸಿಸುವವರು ಅಥವಾ ಅಪಾಯಕಾರಿ ಸ್ಥಳದಲ್ಲಿರುವ ಮನೆಗಳಲ್ಲಿ ಇರುವವರಿಗೆ ಮುನ್ನಚೆರಿಕೆಯನ್ನು ನೀಡಿ ಸೇಫ್ ಜಾಗಕ್ಕೆ ಸ್ಥಳಾಂತರಿಸಲು ತಿಳಿಸಲಾಗಿದೆ. ಆಪಾಯದ ಅಂಚಿನಲ್ಲಿರುವ ಮರಗಳನ್ನು ತೆರವು ಮಾಡುವ ಕಾರ್ಯ ನಡೆಯಲಿದೆ. ನೆರೆಯಲ್ಲಿ ಮನೆ, ಜಾನುವಾರು ಅಥವಾ ವ್ಯಕ್ತಿ ಸಿಲುಕಿಕೊಂಡರೆ ರಕ್ಷಣಾ ಸಿಬ್ಬಂದಿಗಳು ನೆರವಿಗೆ ಧಾಮಿಸಲಿದ್ದಾರೆ, ಹಾನಿ ಸಂಭವಿಸಿದರೆ ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರ ನೀಡುವಂತೆ ಇಲಾಖೆಗೆ ತಿಳಿಸಲಾಗಿದೆ.

ಆನ್‌ಲೈನ್ ವಂಚನೆಗೆ ತಡೆ: ಲಾಕ್‌ಡೌನ್ ಸಂಧರ್ಭದಲ್ಲಿ ಆನ್‌ಲೈನ್ ವಂಚನೆ ಜಿಲ್ಲೆಯಲ್ಲಿ ತಡೆ ಹಿಡಿಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಸೈಬರ್ ವಿಂಗ್ ಬಲಿಷ್ಠವಾಗಿ ಕಾರ್ಯ ಪ್ರವೃತ್ತವಾಗಿದೆ. ಜನರು ಆನ್‌ಲೈನ್‌ನಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಕಣ್ತಪ್ಪಿ ಆನ್‌ಲೈನ್ ವಂಚನೆಯಾದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ, ಜನರು ಮೋಸದ ಜಾಲಕ್ಕೆ ಬೀಳದಂತೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಗೊಳ್ಳಿಸಬೇಕಾಗಿದೆ. ಪುತ್ತೂರಿನಲ್ಲಿ ಮಾಡಿದ ಸೇವೆ ಇದೀಗ ಜಿಲ್ಲಾಧಿಕಾರಿಯಾಗಿರುವಾಗಲೂ ಅನುಕೂಲವಾಗಲಿದೆ ಎಂಬ ಭರವಸೆಯಿದೆ. ಪುತ್ತೂರು, ಕಡಬ, ಬೆಳ್ತಂಗಡಿ, ಸುಳ್ಯ ತಾಲೂಕಿನಲ್ಲಿ ಪ್ರಾದೇಶಿಕವಾಗಿ ಅಭಿವೃದ್ಧಿ ಆಗುತ್ತಿದೆ, ಜನರು ಕೂಡ ಅತೀ ಹೆಚ್ಚಾಗಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದರು. ಕೃಷಿ, ವಾಣಿಜ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಒತ್ತು ಕೊಡುವ ಬಗ್ಗೆ ಹಂತ ಹಂತವಾಗಿ ಸರಕಾರದ ಸ್ಕೀಂಗಳನ್ನು ಬಳಸಿಕೊಂಡು ಸಿದ್ಧ ಪಡಿಸಲಿzವೆ.

ಸಮಸ್ಯೆ, ದೂರುಗಳನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಸಹಾಯವಾಣಿ ಸಂಖ್ಯೆ 1077ನ್ನು ಸಂಪರ್ಕಿಸಬಹುದಾಗಿದೆ, ಕಛೇರಿ ಸಂಖ್ಯೆ 0824&2220588, ಮೆಸ್ಕಾಂ ಸಹಾಯವಾಣಿ 1912, ಮಹಿಳಾ ಸಹಾಯವಾಣಿ 1091 ಕ್ಕೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್  https://dk.nic.in/ ಗೆ ಭೇಟಿ ನೀಡಬಹುದು.

`ಸುದ್ದಿ’ಯಿಂದ ವಸ್ತುನಿಷ್ಠ ವರದಿ
ಸಂವಿಧಾನದ 4ನೇ ಅಂಗ ಎಂದು ಮಾಧ್ಯಮ ಕರೆಸಿಕೊಳ್ಳುತ್ತಿದೆ. ಅಂತೆಯೇ `ಸುದ್ದಿ ಬಿಡುಗಡೆ’ ಯೂ ನೈತಿಕ, ವಸ್ತುನಿಷ್ಠ ವರದಿಯನ್ನು ನೀಡುತ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ `ಸುದ್ದಿ’ ಪ್ರಮುಖ ಪಾತ್ರವಹಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.