ಬೆಟ್ಟಂಪಾಡಿ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ  – ಕರ ಸೇವಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಅ.5 ರಂದು ನಡೆದ ಭೂಮಿ ಪೂಜೆಯ ಪ್ರಯುಕ್ತ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
ಸನ್ಮಾನ: ಅಯೋಧ್ಯೆಯಲ್ಲಿ 1992 ಡಿ. 6 ರಂದು ನಡೆದ ಕರ ಸೇವೆಯಲ್ಲಿ ಭಾಗವಹಿಸಿದ ಬೆಟ್ಟಂಪಾಡಿ ಗ್ರಾಮದ ರಂಗನಾಥ ರೈ ಗುತ್ತು ಹಾಗೂ ಭಾಸ್ಕರ ರೈ ಇವರನ್ನು ಗೌರವಿಸಲಾಯಿತು. 
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು , ಪ್ರಧಾನ ಅರ್ಚಕ ದಿವಾಕರ ಭಟ್,  ಶಿವಕುಮಾರ್ ಬಲ್ಲಾಳ್ ಬೀಡು,  ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ , ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗನ್ನಾಥ ರೈ ಕೊಮ್ಮಂಡ, ಶೇಷಪ್ಪ ರೈ ಮೂರ್ಕಾಜೆ,      ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಮತ್ತು ಶ್ರೀದೇವಿ ಭಜನಾ ಸಂಘದ ಸದಸ್ಯರು ಸಂಘ ಪರಿವಾರದ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.