Breaking News

ಸಾರ್ವಜನಿಕ ಗಣೇಶೋತ್ಸವಕ್ಕೆ ಕೊರೋನಾ ಬ್ರೇಕ್ – ಸರಕಾರದ ಸಾಂಕೇತಿಕ ಆಚರಣೆ

Puttur_Advt_NewsUnder_1
Puttur_Advt_NewsUnder_1
  • ಮಹಾಲಿಂಗೇಶ್ವರ ದೇವಳ ವಠಾರದ ಸಮಿತಿಯಿಂದ ವಿಗ್ರಹ ಮುಹೂರ್ತ
  • ಒಂದು ದಿನಕ್ಕೆ ಸೀಮಿತವಾದ ಗಣೇಶೋತ್ಸವ
  • ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಗಣೇಶೋತ್ಸವ
  • 7 ಅಡಿ ಎತ್ತರದದ ಬದಲು 2 ಅಡಿ ಎತ್ತರದ ವಿಗ್ರಹ
  • ಧಾರ್ಮಿಕ, ಸಾಂಸ್ಕೃತಿಕ, ಶೋಭಾಯಾತ್ರೆಗಳಿಲ್ಲ

ಕಷ್ಟಗಳು ನಿವಾರಣೆಯಾಗಲಿ – ಡಾ.ಎಮ್.ಕೆ.ಪ್ರಸಾದ್
ತಂತ್ರಿಗಳ ನಿರ್ದೇಶನಂತೆ ಸಾಂಕೇತಿಕ ಪೂಜೆ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕೊರೊನಾ ಸೋಂಕು ಹರಡದಂತೆ ಈ ಬಾರಿ ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವುದಕ್ಕೆ ಸರಕಾರದ ಕೆಲವೊಂದು ಮಾರ್ಗಸೂಚಿಗೆ ಅನುಗುಣವಾಗಿ ಸಾಂಕೇತಿಕವಾಗಿ ಸಂಪ್ರದಾಯಕ್ಕೆ ತೊಂದರೆ ಆಗದ ರೀತಿಯಲ್ಲಿ ಗಣೇಶೋತ್ಸವವನ್ನು ಕೇವಲ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಆಚರಿಸುವುದೆಂದು ನಿರ್ಧರಿಸಿದಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಸಮಿತಿಯಿಂದ ಆಚರಿಸುವ ಗಣೇಶೋತ್ಸವಕ್ಕೆ ಆ.೭ರಂದು ಸಂಕಷ್ಟ ಚತುರ್ಥಿಯಂದು ವಿಗ್ರಹ ಮೂಹುರ್ತ ನೆರವೇರಿಸಲಾಯಿತು.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಿಂದ ಧಾರ್ಮಿಕ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ವರ್ಷಂಪ್ರತಿ ರಚನೆಗೊಳ್ಳುವ ಸುಮಾರು ೭ ಅಡಿ ಎತ್ತರದ ಗಣೇಶನ ವಿಗ್ರಹದ ಬದಲಿಗೆ ೨ ಅಡಿ ಎತ್ತರದ ಗಣೇಶನ ವಿಗ್ರಹ ರಚನೆಗೆ ನಿರ್ಣಯ ಕೈಗೊಂಡಂತೆ ಗಣೇಶನ ವಿಗ್ರಹ ಮುಹೂರ್ತವನ್ನು ಬೊಳುವಾರಿನಲ್ಲಿ ನೆರವೇರಿಸಲಾಯಿತು. ವಿಗ್ರಹ ಶಿಲ್ಪಿ ಶ್ರೀನಿವಾಸ ಪ್ರಭು ಅವರು ವಿಗ್ರಹ ಮೂಹುರ್ತ ಪೂಜೆ ಮಾಡಿದರು.

ಕಷ್ಟಗಳು ನಿವಾರಣೆಯಾಗಲಿ:
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಮ್.ಕೆ.ಪ್ರಸಾದ್ ವಿಗ್ರಹ ಮುಹೂರ್ತಕ್ಕೆ ಸಂಕಲ್ಪ ನೆರವೇರಿಸಿದರು. ಈ ಭಾರಿ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸರಕಾರದ ಸೂಚನೆಯಂತೆ ಒಂದು ದಿನಕ್ಕೆ ಸೀಮಿತವಾಗಿ ಸಾಂಕೇತಿಕ ಆಚರಣೆ ಮಾಡಲಿದ್ದೇವೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಬಂದಿರುವ ಕಷ್ಟಗಳು ನಿವಾರಣೆಯಾಗಿ ಕಾಲಕಾಲಕ್ಕೆ ಮಳೆ, ಬೆಳೆ, ಜನರಿಗೆ ಸುಖ ನೆಮ್ಮದಿ ನೀಡಬೇಕು. ಮಹಾಮಾರಿ ಕೊರೋನಾವನ್ನು ಓಡಿಸಬೇಕೆಂದು ಪ್ರಾರ್ಥಿಸಿದರು.

ತಂತ್ರಿಗಳ ನಿರ್ದೇಶನಂತೆ ಸಾಂಕೇತಿಕ ಪೂಜೆ:
ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಸರಕಾರದ ನಿಬಂಧನೆಗಳನ್ನು ಅಳವಡಿಸಿ ಸಾಂಕೇತಿಕವಾಗಿ ಧಾರ್ಮಿಕ ಕಾರ್ಯಕ್ರಮಕ್ಕೆ ಕುಂದು ಬಾರದ ರೀತಿಯಲ್ಲಿ ತಂತ್ರಿಗಳ ನಿರ್ದೇಶನದಂತೆ ಗಣೇಶೋತ್ಸವ ನಡೆಯಲಿದೆ. ಸಂಜೆ ರಂಗಪೂಜೆಯ ಬಳಿಕ ದೇವಸ್ಥಾನದ ಪಕ್ಕದ ಬಾವಿಗೆ ಜಲಸ್ತಂಭನ ನಡೆಯಿಲದೆ. ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಒಟ್ಟು ಕಾರ್ಯಕ್ರಮಕ್ಕೆ ದೇಣಿಗೆ ಸಂಗ್ರಹವನ್ನೂ ಮಾಡುವುದಿಲ್ಲ. ಸೀಮಿತ ಪದಾಧಿಕಾರಿಗಳು ಮಾತ್ರ ಕಾರ್ಯಕ್ರಮದಲ್ಲಿ ಅವಕಾಶ ಎಂದು ಹೇಳಿದರು. ವರ್ಷಂಪ್ರತಿಯಂತೆ ವಿಗ್ರಹ ರಚನೆ ಮುಹರ್ತೂಕ್ಕೂ ಮುಂದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ರಾಘವೇಂದ್ರ ಮಠ, ಮಹಮ್ಮಾಯಿ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಆಂಜನೇಯ ಮಂತ್ರಾಲಯದಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಎಂ.ಕೆ.ಪ್ರಸಾದ್ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೋಶಾಧಿಕಾರಿ ಶ್ರೀನಿವಾಸ್, ನೀಲಂತ್, ಸುಜೀಂದ್ರ ಪ್ರಭು, ಹೆಚ್. ಉದಯ, ದಯಾನಂದ, ಅಜಿತ್ ರೈ ಹೊಸಮನೆ, ಉದಯ ಆದರ್ಶ, ಮಲ್ಲೇಶ್ ಆಚಾರ್ಯ, ಗಿರೀಶ್, ಶಿಲ್ಪಿ ರಾಜೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.