Breaking News

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಕಾವು ಹೇಮನಾಥ ಶೆಟ್ಟಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಗತ್ತಿನ ಕಾರ್‍ಯ ವ್ಯಾಪ್ತಿಯನ್ನು ಹೊಂದಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ 2020-23ನೇ ಸಾಲಿನ ನೂತನ ನಿರ್ದೇಶಕರಾಗಿ ಕಾವು ಹೇಮನಾಥ ಶೆಟ್ಟಿರವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿರವರು ಆಯ್ಕೆ ಮಾಡಿದ್ದಾರೆ. ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಜಗತಿಕ ಬಂಟರ ಸಂಘವು ಜಗತ್ತಿನ ಎಲ್ಲಡೇ ಇರುವ ಬಂಟ ಸಮಾಜ ಭಾಂದವರನ್ನು ಒಗ್ಗೂಡಿಸುವ ಮೂಲಕ ಸಮಾಜದಲ್ಲಿ ಇರುವ ಬಂಟ ಸಮಾಜದ ಕಡು ಬಡವರಿಗೆ ಆರೋಗ್ಯ, ಮನೆ ನಿರ್ಮಾಣ, ಶಿಕ್ಷಣ ಸೇರಿದಂತೆ ಅನೇಕ ಸಮಾಜ ಮುಖಿ ಕಾರ್‍ಯಗಳಲ್ಲಿ ತನ್ನ ಸಹಕಾರವನ್ನು ನೀಡುವ ಮೂಲಕ ಸಮಾಜದಲ್ಲಿ ಹೆಸರನ್ನು ಪಡೆದಿದೆ. 

ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರಾಗಿರುವ ಕಾವು ಹೇಮನಾಥ ಶೆಟ್ಟಿರವರು ಪುತ್ತೂರು ತಾಲೂಕು ಬಂಟರ ಸಂಘದ ಉಪಾಧ್ಯಕ್ಷರಾಗಿ, ನಿರ್ದೆಶಕರಾಗಿ ಸೇವೆಸಲ್ಲಿಸಿದ್ದಾರೆ, ಕಳೆದ ೭ ವರುಷಗಳಿಂದ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಹೇಮನಾಥ ಶೆಟ್ಟಿರವರು ೭ ವರುಷಗಳಿಂದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾಗಿದ್ದಾರೆ. ಕಾವು ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷರಾಗಿರುವ ಹೇಮನಾಥ ಶೆಟ್ಟಿರವರು ಇದೀಗ ಬೆಳ್ತಂಗಡಿ, ವಿಟ್ಲ, ಪಂಜ, ಪುತ್ತೂರು ಹಾಗೂ ಕಾವು ವಲಯ ವ್ಯಾಪ್ತಿಯ ಲಯನ್ಸ್ ಕ್ಲಬ್‌ಗಳ ವಲಯಧ್ಯಕ್ಷರಾಗಿರುತ್ತಾರೆ. ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಕಾವು ಹೇಮನಾಥ ಶೆಟ್ಟಿರವರು ೧೯೮೭ರಲ್ಲಿ ಎನ್‌ಎಸ್‌ಯುಐ ಪುತ್ತೂರು ತಾಲೂಕು ಅಧ್ಯಕ್ಷರಾಗಿ, ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದಾರೆ, ಪುತ್ತೂರು ಬ್ಲಾಕ್ ಕಾಂಗ್ರೇಸ್ ನಲ್ಲಿ ೯ ವರುಷಗಳ ಕಾಲ ಅಧ್ಯಕ್ಷರಾಗಿ ಕಾರ್‍ಯ ನಿರ್ವಹಿಸಿರುವ ಹೇಮನಾಥ ಶೆಟ್ಟಿರವರು ಪ್ರಸ್ತುತ ಕೊಡಗು ಜಿಲ್ಲೆಯ ನಾಪ್ಲೋಕ್ಲು ಬ್ಲಾಕ್‌ನ ಕಾಂಗ್ರೇಸ್ ಪಕ್ಷದ ಉಸ್ತುವಾರಿಯಾಗಿದ್ದಾರೆ

ಸಮಾಜದ ಹಿತಕ್ಕಾಗಿ ದುಡಿಯುತ್ತೇನೆ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳರವರು ನನ್ನನು ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ನಾನು ಈಗಾಗಲೇ ಬಂಟರ ಯಾನೆ ನಾಡವರ ಮಾತೃ ಸಂಘಧ ಉಪಾಧ್ಯಕ್ಷನಾಗಿ ಸಮಾಜದಲ್ಲಿ ಇರುವ ಕಡು ಬಂಟ ಭಾಂದವರಿಗಾಗಿ ಸಮಾಜ ಮುಖಿ ಕಾರ್‍ಯವನ್ನು ಮಾಡುತ್ತಿದ್ದು, ಇಧೀಗ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಭಾಂದವರಿಗೆ ದೊರೆಯುವ ಅನೇಕ ಸೌಲಭ್ಯಗಳನ್ನು ಆರ್ಹ ಬಂಟ ಭಾಂದವರಿಗೆ ನೀಡುವಲ್ಲಿ ಶ್ರಮವಹಿಸುತ್ತೇನೆ ಕಾವು ಹೇಮನಾಥ ಶೆಟ್ಟಿ ನಿರ್ದೆಶಕ ಜಾಗತಿಕ ಬಂಟರ ಸಂಘಗಳ ಒಕ್ಕೂಟ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.