ಉಪ್ಪಿನಂಗಡಿ ಸಿ.ಎ.ಬ್ಯಾಂಕ್‌ನ ನಿವೃತ್ತ ಸಿ.ಇ.ಓ ಜತ್ತಪ್ಪ ಗೌಡರವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ವರದಿ: ಉಮಾಪ್ರಸಾದ್‌ ರೈ ನಡುಬೈಲು

ಪುತ್ತೂರು: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸುಮಾರು ೩೬ ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಕಳೆದ ಒಂದುವರೆ ವರ್ಷಗಳಿಂದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಯಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿಗೊಂಡ ಜತ್ತಪ್ಪ ಗೌಡರವರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್‍ಯಕ್ರಮವು ಪುತ್ತೂರಿನ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೊಳಹಳ್ಳಿ ಶಿವರಾಯ ಸಭಾಂಗಣದಲ್ಲಿ ೨೦ ಅಂಶಗಳ ಸಭೆಯಲ್ಲಿ ನಡೆಯಿತು.

ಪುತ್ತೂರು ತಾಲೂಕಿನ ೧೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ನಡೆದ ಈ ಸನ್ಮಾನ ಕಾರ್‍ಯಕ್ರಮದಲ್ಲಿ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವಹಿಸಿ, ನಿವೃತ್ತ ಸಿಇಓ ಜತ್ತಪ್ಪ ಗೌಡರವರನ್ನು ಸನ್ಮಾನಿಸಿ, ಗೌರವಿಸಿದರು. ಸಮಾರಂಭದಲ್ಲಿ ದ.ಕ.ಜಿಲ್ಲೆಯ ಸಹಕರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಜೋವಿನ್ ಪ್ರಕಾಶ್, ಪುತ್ತೂರು ಉಪವಿಭಾಗದ ಪ್ರಭಾರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್, ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್,ಎಸ್, ಜಿಲ್ಲಾ ಬ್ಯಾಂಕಿನ ಮುಖ್ಯ ಶಾಖೆಯ ವ್ಯವಸ್ಥಾಪಕ ರತ್ನಕುಮಾರ್, ಪುತ್ತೂರು ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ರಾಜಶೇಖರ್ ಜೈನ್‌ರವರುಗಳು ಅತಿಥಿಗಲಾಗಿ ಭಾಗವಹಿಸಿ, ನಿವೃತ್ತ ಸಿಇಒರವರಿಗೆ ಶುಭಹಾರೈಸಿದರು.

ಕಾರ್‍ಯಕ್ರಮದಲ್ಲಿ ಜಿಲ್ಲಾ ಬ್ಯಾಂಕಿನ ಪುತ್ತೂರು ವಲಯ ಮೇಲ್ವಿಚಾರಕರುಗಳಾದ ವಸಂತ್, ಶರತ್ ಹಾಗೂ ತಾಲೂಕಿನ ಸಹಕಾರ ಸಂಘಗಳ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಗಳಾದ ಕುಂಬ್ರದ ರಾಜೀವಿ ರೈ, ಅಲಂಕಾರಿನ ಪ್ರಶಾಂತ್ ರೈ, ಪಾಣಾಜೆಯ ಲಕ್ಷ್ಮಣ ನಾಯ್ಕ್, ಕೊಳ್ತಿಗೆಯ ಹಂಸಾವತಿ, ಕಾವು ಸಹಕಾರ ಸಂಘದ ಕೇಶವ ಮೂರ್ತಿ, ಕೆದಂಬಾಡಿಯ ಹಂಸಾವತಿ, ಉಪ್ಪಿನಂಗಡಿಯ ಸಹಕಾರ ಸಂಘದ ನೂತನ ಸಿಇಒ ಕ್ಲೇರಿ ವೇಗಸ್, ಹೊಸ್ಮಠದ ಸೋಮ ಸುಂದರ ಶೆಟ್ಟಿ, ನೆಲ್ಯಾಡಿಯ ದಯಾಕರ ರೈ, ಬಿಳಿನೆಲೆಯ ಎಲ್ಯಣ್ಣ ಗೌಡ, ಕಡಬದ ಚಾಕೋ ಕೆ.ಎಂ, ನರಿಮೋಗರಿನ ಮಧುಕರ ಆಚಾರ್, ಬಲ್ನಾಡಿನ ಸೀತಾರಾಮ ಗೌಡ, ಆರ್ಯಾಪಿನ ಜಯಂತಿ ಭಾಸ್ಕರ್, ಬನ್ನೂರಿನ ಗೋಪಾಲಕೃಷ್ಣ ಭಟ್, ಚಾರ್ವಾಕ ಸಹಕಾರ ಸಂಘದ ಅಶೋಕ್‌ರವರುಗಳು ಉಪಸ್ಥಿತರಿದ್ದರು. ಸವಣೂರು ಸಹಕರ ಸಂಘದ ಸಿಇಒ ಚಂದ್ರಶೇಖರ್ ಪಿ, ಸ್ವಾಗತಿಸಿ, ಮುಂಡೂರು ಸಹಕಾರ ಸಂಘದ ಸಿಇಒ ಜಯಪ್ರಕಾಶ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.