ರೋಟರಿ ಪುತ್ತೂರು, ಇನ್ನರ್ ವೀಲ್ ನಿಂದ ರಕ್ಷಾಬಂಧನ  || ರಕ್ಷಾಬಂಧನವು ಬದ್ಧತೆ, ವಿಶ್ವಾಸದ ಪ್ರತೀಕವಾಗಿದೆ-ಡಾ|ವಿಜಯ ಸರಸ್ವತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ರಕ್ಷೆ ಕಟ್ಟುವುದರ ಮೂಲಕ ನಮ್ಮೊಳಗೆ ಹೊಸ ಬಾಂಧವ್ಯವನ್ನು ಹುಟ್ಟು ಹಾಕುತ್ತದೆ. ನಮ್ಮಲ್ಲಿ ಎದುರಾಗುವ ತೊಂದರೆಗಳಿಗೆ, ಸವಾಲುಗಳಿಗೆ ರಕ್ಷೆಯು ರಕ್ಷೆ ನೀಡುತ್ತದೆ. ಆದ್ದರಿಂದ ರಕ್ಷಾಬಂಧನವು ಮನುಷ್ಯನ ಬದ್ಧತೆ ಹಾಗೂ ವಿಶ್ವಾಸದ ಪ್ರತೀಕವಾಗಿ ಆಚರಿಸಲ್ಪಡುತ್ತದೆ ಎಂದು ಸಂಪನ್ಮೂಲ ವ್ಯಕ್ತಿ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ|ವಿಜಯ ಸರಸ್ವತಿ ಬಿ.ರವರು ಹೇಳಿದರು.
ಅವರು ಆ.7 ರಂದು ರೋಟರಿ ಬ್ಲಡ್ ಕ್ ನ ರೂಫ್ ಟಾಪ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಹಾಗೂ ಇನ್ನರ್ ವೀಲ್ ಕ್ಲಬ್ ಜಂಟಿ ಆಶ್ರಯದಲ್ಲಿ ನಡೆದ ರಕ್ಷಾ ಬಂಧನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭ್ರಾತೃತ್ವದ ಸಂಕೇತವಾಗಿರುವ ರಕ್ಷಾಬಂಧನ ಆಚರಣೆಯು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತವಾಗುದೆ. ರಕ್ಷಾಬಂಧನ ಆಚರಣೆ ಯಾವುದೇ ಜನಾಂಗ, ಸಮುದಾಯಕ್ಕೆ ಸೀಮಿತವಾಗಿಲ್ಲ. ಪುರಾಣಗಳ ಕಾಲದಿಂದಲೂ ರಕ್ಷಾಬಂಧನ ಆಚರಣೆಯು ನಡೆದು ಬಂದಿದೆ. ರಕ್ಷೆಯನ್ನು ಕಟ್ಟುವುದರ ಮೂಲಕ ನಮ್ಮಲ್ಲಿ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಆಚರಣೆ ಇದಾಗಿದೆ. ರಕ್ಷಾಬಂಧನದ ಆಚರಣೆ, ಉದ್ಧೇಶ, ಹಿನ್ನೆಲೆಯನ್ನು ಪ್ರತಿಯೋರ್ವರು ಅರ್ಥೈಸಿದಾಗ ಆಚರಣೆಗೆ ಮಹತ್ವ ಬರುತ್ತದೆ ಮಾತ್ರವಲ್ಲದೆ ರಕ್ಷಾಬಂಧನ ಆಚರಣೆಯ ಪ್ರಾಮುಖ್ಯತೆ ಮತ್ತು
ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಪ್ರಸ್ತುತ ಪಡಿಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ ಮಾತನಾಡಿ, ಕುಟುಂಬದಲ್ಲಿ ಹೆಣ್ಣು ಮಗಳಿದ್ದಾಗ ಆ ಕುಟುಂಬದಲ್ಲಿನ ಗಂಡು ಮಕ್ಕಳು ಸೌಮ್ಯ ಸ್ವಭಾವದವರಾಗಿರುತ್ತಾರೆ. ಯಾಕೆಂದರೆ ಆ ಹೆಣ್ಣು ಮಗಳು ಕುಟುಂಬದಲ್ಲಿ ದ್ವಿತೀಯ ತಾಯಿ ಇದ್ದಾಗೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಯೋರ್ವರು ಹೆಣ್ಣು ಮಕ್ಕಳನ್ನು ಗೌರವದ ಭಾವನೆಯಿಂದ ನೋಡಿದಾಗ ಸಮಾಜವು ಕೂಡ ಗೌರವಿಸುತ್ತದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸದಸ್ಯ ದಾಮೋದರ್ ಪ್ರಾರ್ಥಿಸಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸೀಮಾ ನಾಗರಾಜು, ಕಾರ್ಯದರ್ಶಿ ಅಶ್ವನಿ ಕೃಷ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಪ್ರೊ/ದತ್ತಾತ್ರೇಯ ರಾವ್ ವರದಿ ವಾಚಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ/ಝೇವಿಯರ್ ಡಿ’ಸೋಜ ಸ್ವಾಗತಿಸಿದರು. ರೋಟರಿ ಬ್ಲಡ್ ಬ್ಯಾಂಕ್ ಟ್ರಸ್ಟ್ ಕಾರ್ಯದರ್ಶಿ ದೀಪಕ್ ಕೆ.ಪಿ ಟ್ರಸ್ಟ್ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಸುಜಿತ್ ರೈ ವಂದಿಸಿದರು.
ರಕ್ಷೆ ಕಟ್ಟುವ ಮೂಲಕ ಆಚರಣೆ…
ರಕ್ಷಾಬಂಧನ ಆಚರಣೆಯ ಪ್ರಯುಕ್ತ ಸಂಪನ್ಮೂಲ ವ್ಯಕ್ತಿ ಡಾ|ವಿಜಯ ಸರಸ್ವತಿ, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸೀಮಾ ನಾಗರಾಜು, ಕಾರ್ಯದರ್ಶಿ ಅಶ್ವನಿ ಕೃಷ್ಣ, ಟೈನಿ ದೀಪಕ್ ಸಹೋದರಿಯರು ಹಾಜರಿದ್ದ ರೋಟರಿ ಸದಸ್ಯ ಪುರುಷರಿಗೆ ರಕ್ಷೆಯನ್ನು ಕಟ್ಟುವ ಮೂಲಕ ರಕ್ಷಾಬಂಧನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ರಕ್ಷಾಬಂಧನದ ಪ್ರಯುಕ್ತ ಈ ಸಂದರ್ಭದಲ್ಲಿ ಸಿಹಿ ತಿಂಡಿ ಹಂಚಲಾಯಿತು ಮಾತ್ರವಲ್ಲದೆ ರಕ್ಷೆಯನ್ನು ಕಟ್ಟಿದ ಸಹೋದರಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.